Ddonald Trump

'GAZA strip ವಶಪಡಿಸಿಕೊಳ್ಳುತ್ತೇವೆ'; ಇಸ್ರೇಲ್ ಪ್ರಧಾನಿ Netanyahu ಉಪಸ್ಥಿತಿಯಲ್ಲೇ Donald Trump ಅಚ್ಚರಿ ಹೇಳಿಕೆ!
ಇಸ್ರೇಲ್- ಹಮಾಸ್ ನಡುವಿನ ಕದನ ವಿರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಇಸ್ರೇಲ್ನ ಗಾಜಾ ಪಟ್ಟಿಯನ್ನು ಸ್ವಾಧೀನಕ್ಕೆ ಪಡೆಯಲು ಮುಂದಾಗಿದ್ದಾರೆ.

ಫೆಬ್ರವರಿ 12-14 ರವರೆಗೆ ಪ್ರಧಾನಿ ಮೋದಿ ಅಮೆರಿಕ ಪ್ರವಾಸ; ಸುಂಕ ಸಮರದ ನಡುವೆ ಅಧ್ಯಕ್ಷ Donald Trump ಭೇಟಿ
ಪ್ರಧಾನಿ ಮೋದಿಯವರ ಪ್ರವಾಸದ ಯೋಜನೆ ಪ್ರಕಾರ, ಎರಡು ದಿನಗಳ ಪ್ಯಾರಿಸ್ ಭೇಟಿಯನ್ನು ಮುಗಿಸಿದ ನಂತರ ವಾಷಿಂಗ್ಟನ್ ಡಿಸಿಗೆ ಪ್ರಯಾಣ ಬೆಳೆಸಲಿದ್ದಾರೆ.

ಕೆನಡಾ, ಮೆಕ್ಸಿಕೊ, ಚೀನಾ ಮೇಲೆ ಸುಂಕ ವಿಧಿಸಿದ Donald Trump ಸರ್ಕಾರ: ಹಣದುಬ್ಬರ-ವ್ಯಾಪಾರ ಸಂಘರ್ಷ ಸಾಧ್ಯತೆ
ಈ ನಿರ್ಧಾರವು ಜಾಗತಿಕ ಆರ್ಥಿಕತೆ ಮತ್ತು ಹಣದುಬ್ಬರವನ್ನು ಎದುರಿಸಲು ಟ್ರಂಪ್ ಅವರ ರಾಜಕೀಯ ಆದೇಶ ಮುಂದಿನ ದಿನಗಳಲ್ಲಿ ಸಂಭಾವ್ಯ ಪ್ರಕ್ಷುಬ್ಧತೆಗೆ ಕಾರಣವಾಗಬಹುದು.

Trump ಒತ್ತಾಯಕ್ಕೆ ಮಣಿದ ಭಾರತ?: Harley Davidson ಬೈಕ್ ಗಳ ಮೇಲಿನ ಆಮದು ಸುಂಕ ಕಡಿತ!
ಈ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಭಾರತ ಸರ್ಕಾರ ಹಾರ್ಲೇ ಡೇವಿಡ್ ಸನ್ (Harley Davidson) ಬೈಕ್ ಗಳ ಮೇಲಿನ ಸುಂಕ ಕಡಿಮೆ ಮಾಡಿರುವುದು ಇಂಥಹದ್ದೊಂದು ಪ್ರಶ್ನೆಗೆ ಕಾರಣವಾಗಿದೆ.

BRICS ರಾಷ್ಟ್ರಗಳಿಗೆ ಅಮೆರಿಕಾ ಎಚ್ಚರಿಕೆ: US ಡಾಲರ್ ಬದಲಿಸಿದರೆ ಶೇ.100ರಷ್ಟು ಸುಂಕ
ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಅಥವಾ ಬೇರೆಲ್ಲಿಯಾದರೂ ಬ್ರಿಕ್ಸ್ ಯುಎಸ್ ಡಾಲರ್ ನ್ನು ಬದಲಿಸುವ ಸಾಧ್ಯತೆಯಿಲ್ಲ. ಪ್ರಯತ್ನಿಸುವ ಯಾವುದೇ ದೇಶವು ಸುಂಕಗಳಿಗೆ ಹಲೋ ಹೇಳಿ ಅಮೆರಿಕಕ್ಕೆ ವಿದಾಯ ಹೇಳಬೇಕು" ಎಂದು ತಮ್ಮದೇ ಶೈಲಿಯಲ್ಲಿ ಟ್ರಂಪ್ ಎಚ್ಚರಿಸಿದ್ದಾರೆ.

ಅಮೆರಿಕನ್ ಏರ್ ಲೈನ್ಸ್ ಅಪಘಾತಕ್ಕೆ ಹಿಂದಿನ ಸರ್ಕಾರದ ನೇಮಕಾತಿ ನಿಯಮಗಳೇ ಕಾರಣ: ಡೊನಾಲ್ಡ್ ಟ್ರಂಪ್
ನನ್ನನ್ನು ಕೇಳುವುದಾದರೆ ಇಲ್ಲಿ ಸುರಕ್ಷತೆಯೇ ಮುಖ್ಯವಾಗುತ್ತದೆ. ಒಬಾಮಾ, ಬೈಡನ್ ಮತ್ತು ಡೆಮೋಕ್ರಾಟ್ ಗಳು ನೀತಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಅವರು ಬಿಳಿ ಜನರಿಗೆ ಆದ್ಯತೆ ನೀಡಿದರು. ಆದರೆ ನಾವು ಸಮರ್ಥ ಉದ್ಯೋಗಿಗಳಿಗೆ ಮಣೆ ಹಾಕುತ್ತೇವೆ ಎಂದರು.

ಅಧ್ಯಕ್ಷರಾದ ಬಳಿಕ ಮೊದಲ ಕರೆ: ಅಮೆರಿಕದಿಂದ ಶಸ್ತ್ರಾಸ್ತ್ರಗಳ ಖರೀದಿಸುವಂತೆ ಪ್ರಧಾನಿ ಮೋದಿಗೆ ಟ್ರಂಪ್ ಒತ್ತಾಯ
ನರೇಂದ್ರ ಮೋದಿಯವರು ಫೆಬ್ರವರಿ ತಿಂಗಳಲ್ಲಿ ಅಮೆರಿಕಕ್ಕೆ ಭೇಟಿ ನೀಡಬಹುದು ಎಂದು ಕೂಡ ಡೊನಾಲ್ಡ್ ಟ್ರಂಪ್ ಈ ಸಂದರ್ಭದಲ್ಲಿ ವರದಿಗಾರರಿಗೆ ಹೇಳಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಪರಸ್ಪರ ಭೇಟಿ ಸಭೆಯ ದಿನಾಂಕಗಳನ್ನು ಅಂತಿಮಗೊಳಿಸುವ ಬಗ್ಗೆ ಎರಡೂ ದೇಶಗಳು ಪರಿಶೀಲಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಬೊಕ್ಕಸ ತುಂಬಿಸಲು ವಿದೇಶಿ ರಾಷ್ಟ್ರಗಳಿಗೆ ಟ್ರಂಪ್ ಸುಂಕದ ಬೆದರಿಕೆ! ಭಾರತ, ಚೀನಾ, ಬ್ರೆಜಿಲ್ ಪ್ರಮುಖ ಟಾರ್ಗೆಟ್!
ಅಮೆರಿಕ ಮತ್ತೆ ಶ್ರೀಮಂತ ರಾಷ್ಟ್ರವಾಗಲು ಅತ್ಯಂತ ನ್ಯಾಯಯುತ ವ್ಯವಸ್ಥೆಯನ್ನು ಮರು ಸ್ಥಾಪಿಸುತ್ತದೆ. ಇದು ಆದಷ್ಟು ಬೇಗ ನಡೆಯಲಿದೆ.

ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು OPEC+ ರಾಷ್ಟ್ರಗಳು ತೈಲ ಬೆಲೆ ಇಳಿಸಬೇಕು: ಡೊನಾಲ್ಡ್ ಟ್ರಂಪ್
ಪೆಟ್ರೋಲಿಯಂ ರಫ್ತು ಮಾಡುವ ದೇಶಗಳು ತೈಲ ಬೆಲೆಯನ್ನು ಕಡಿತಗೊಳಿಸಬೇಕು. ಇದರಿಂದ ಉಕ್ರೇನ್ ನಲ್ಲಿ ನಡೆಯುತ್ತಿರುವ ದುರಂತ ಅದರಷ್ಟಕ್ಕೆ ಸಹಜವಾಗಿ ನಿಲ್ಲುತ್ತದೆ. ಈ ಯುದ್ಧದಿಂದ ಎರಡೂ ಕಡೆಯವರಿಗೆ ಸಾಕಷ್ಟು ಹಾನಿಯಿದೆ ಎಂದು ನಿನ್ನೆ ಉತ್ತರ ಕೆರೊಲಿನಾದಲ್ಲಿ ವರದಿಗಾರರ ಜೊತೆ ಮಾತನಾಡುವಾಗಲೂ ಹೇಳಿದ್ದರು.

