Davos

ಭಾರತದ ಆರ್ಥಿಕ ಬೆಳವಣಿಗೆ ಕುಸಿತ ತಾತ್ಕಾಲಿಕ- ಐಎಂಎಫ್ ಮುಖ್ಯಸ್ಥೆ
ಭಾರತದಲ್ಲಿನ ಆರ್ಥಿಕ ಬೆಳವಣಿಗೆ ದರ ಕುಸಿತ ತಾತ್ಕಾಲಿಕವಷ್ಟೇ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುಖ್ಯಸ್ಥೆ ಕ್ರಿಸ್ಟಾಲಿನಾ ಜಿಯೊರ್ಜಿವಾ ಹೇಳಿದ್ದಾರೆ.

ಪ್ರತಿಷ್ಠಿತ ಉದ್ಯಮಿಗಳಿಂದ ರಾಜ್ಯದಲ್ಲಿ ಬಂಡವಾಳ ತೊಡಗಿಸಲು ಉತ್ಸಾಹದಾಯಕ ಪ್ರತಿಕ್ರಿಯೆ
ವಿಶ್ವ ಆರ್ಥಿಕ ವೇದಿಕೆ ಸಮಾವೇಶದ ಮೂರನೇ ದಿನವಾದ ಬುಧವಾರ ರಾಜ್ಯದ ಪಾಲಿಗೆ ಫಲಪ್ರದವಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಷ್ಠಿತ ಹೂಡಿಕೆದಾರರು ಹಾಗೂ ಕೈಗಾರಿಕೋದ್ಯಮಿಗಳನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದರು.

'ಕಾಶ್ಮೀರ ವಿಚಾರದಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಗೆ ಅವಕಾಶವಿಲ್ಲ': ಟ್ರಂಪ್ 'ಸಹಾಯ' ಹೇಳಿಕೆಗೆ ಭಾರತ ತಿರುಗೇಟು
ಕಾಶ್ಮೀರ ವಿಷಯದಲ್ಲಿ ಮೂರನೇ ವ್ಯಕ್ತಿ ಮಧ್ಯಸ್ಥಿಕೆ ಅಗತ್ಯವಿಲ್ಲ ಎಂದು ಭಾರತ ಪುನರುಚ್ಚರಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸುದೀರ್ಘ ಕಾಲದ ವಿವಾದವನ್ನು ಬಗೆಹರಿಸಲು "ಸಹಾಯ" ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಪ್ರಸ್ತಾಪಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಈ ಪ್ರತಿಕ್ರಿಯೆ ನೀಡಿದೆ.

ದಾವೊಸ್: ಕೃಷಿ ಬೆಳವಣಿಗೆ, ಗ್ರಾಮೀಣಾಭಿವೃದ್ಧಿಗೆ ವಿಶ್ವ ಆರ್ಥಿಕ ಸಮಾವೇಶದಲ್ಲಿ ಒತ್ತು ನೀಡಿದ ಸಿಎಂ ಯಡಿಯೂರಪ್ಪ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ವಿಡ್ಜರ್ಲ್ಯಾಂಡ್ ನ ದಾವೊಸ್ ನಲ್ಲಿ ವಿಶ್ವ ಆರ್ಥಿಕ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.

ದಾವೋಸ್ ಗೆ ಪ್ರಯಾಣ ಬೆಳೆಸಿದ ಸಿಎಂ ಯಡಿಯೂರಪ್ಪ, ಇತ್ತ ಸಚಿವ ಹುದ್ದೆಗೆ ಕಾಯುತ್ತಿರುವ 11 ನೂತನ ಶಾಸಕರು
ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿನ್ನೆ ಸ್ವಿಡ್ಜರ್ಲ್ಯಾಂಡ್ ನ ಡಾವೊಸ್ ಗೆ ಹೋಗಿದ್ದಾರೆ. ವಿಶ್ವದ ರಾಜಕೀಯ ಮತ್ತು ಉದ್ಯಮ ಗಣ್ಯರು ಇಲ್ಲಿ ವಾರ್ಷಿಕ ಸಭೆಯನ್ನು ನಡೆಸುತ್ತಾರೆ.

ವಿಶ್ವ ಆರ್ಥಿಕ ಒಕ್ಕೂಟ ಸಮಾವೇಶ: ಭಾರತೀಯ ನಿಯೋಗಕ್ಕೆ ಪಿಯೂಷ್ ಗೋಯಲ್ ನೇತೃತ್ವ
ದಾವೋಸ್ ನಲ್ಲಿ ಜ 20ರಿಂದ 24ರವರೆಗೆ ನಡೆಯುವ 50ನೇ ವಿಶ್ವ ಆರ್ಥಿಕ ಒಕ್ಕೂಟ(ಡಬ್ಲ್ಯೂಇಎಫ್)ನ 50ನೇ ಸಮಾವೇಶದಲ್ಲಿ ಭಾಗವಹಿಸಲು ತೆರಳುವ ಭಾರತೀಯ ನಿಯೋಗದ ನೇತೃತ್ವವವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ವಹಿಸಲಿದ್ದಾರೆ.

ದಾವೋಸ್ ನಲ್ಲಿ ಮೂವರು ಭಾರತೀಯರು ಸೇರಿ '15 ಹೊಸ ಗೆಳೆಯರನ್ನು' ಗಳಿಸಿದ ಟ್ರಂಪ್!
ಭಾರತೀಯ ಮೂಲದ ಮೂವರು ಸೇರಿದಂತೆ ತಾವು 15 ಹೊಸ ಗೆಳೆಯರನ್ನು ಸಂಪಾದಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್...

ಭಾರತದಲ್ಲಿ ಧರ್ಮಾಧಾರಿತ ತಾರತಮ್ಯಕ್ಕೆ ಅವಕಾಶವಿಲ್ಲ: ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಸುರೇಶ್ ಪ್ರಭು
ಭಾರತದಲ್ಲಿ ಧರ್ಮಾಧಾರಿತ ತಾರತಮ್ಯಕ್ಕೆ ಅವಕಾಶವಿಲ್ಲ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.

ದಾವೋಸ್ ನಲ್ಲಿ ಅಮೆರಿಕದ ಉದ್ಯಮ ರಕ್ಷಣಾ ನೀತಿ ವಿರೋಧಿಸಿದ ಪ್ರಧಾನಿ ಮೋದಿ ಭಾಷಣಕ್ಕೆ ಚೀನಾ ಮೆಚ್ಚುಗೆ
ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಬಗ್ಗೆ ಚೀನಾ ಬುಧವಾರ ಮೆಚ್ಚುಗೆ...

