dasara

ಮೈಸೂರು ದಸರಾ ಮಹೋತ್ಸವಕ್ಕೆ ಡಾ. ಸಿ.ಎನ್. ಮಂಜುನಾಥ್ ವಿದ್ಯುಕ್ತ ಚಾಲನೆ; ಖಾಸಗಿ ದರ್ಬಾರ್ ಆರಂಭ
ಕೊರೋನಾ ಆತಂಕದ ನಡುವೆಯೂ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಹೃದ್ರೋಗ ಸಂಸ್ಥೆಯ ನಿರ್ದೇಶಕ, ಡಾ.ಸಿ.ಎನ್. ಮಂಜುನಾಥ್ ಅವರು ಶನಿವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಕೋವಿಡ್-19 ಸಾಂಕ್ರಾಮಿಕ: ದಸರಾ, ದೀಪಾವಳಿಗೆ ಅವಧಿಗೆ ಮುನ್ನವೇ ಶಾಪಿಂಗ್, ಗ್ರಾಹಕರ ಖರೀದಿ ಪಟ್ಟಿಯಲ್ಲಿ ಕಡಿತ
ಕೋವಿಡ್-19 ಸಾಂಕ್ರಾಮಿಕ ಹಬ್ಬದ ಸಮಯದಲ್ಲಿ ಜನರ ಶಾಪಿಂಗ್ ರೀತಿನೀತಿಗಳನ್ನು ಬದಲಾಯಿಸಿದೆ. ಈ ಬಾರಿ ಜನರು ಆನ್ ಲೈನ್ ನಲ್ಲಿ ಶಾಪಿಂಗ್ ಗೆ ಹೆಚ್ಚು ಒತ್ತು ನೀಡುವುದಲ್ಲದೆ ದಸರಾ ಮತ್ತು ದೀಪಾವಳಿಗೆ ಬೇಗನೆ ಖರೀದಿಗೆ ಮುಂದಾಗಿದ್ದಾರೆ. ಕೊನೆ ಕ್ಷಣದಲ್ಲಿ ಶಾಪಿಂಗ್ ಗೆಂದು ಅಂಗಡಿಗಳಿಗೆ ಹೋಗುತ್ತಿಲ್ಲ.

ಹೃದಯ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರಿಂದ ದಸರಾ ಉದ್ಘಾಟನೆ: ಸಚಿವ ಸೋಮಶೇಖರ್
ಪ್ರಸಕ್ತ ಸಾಲಿನ ಮೈಸೂರು ದಸರಾ ಉದ್ಘಾಟನೆಗೆ ಜಯದೇವ ಆಸ್ಪತ್ರೆ ಮುಖ್ಯಸ್ಥರಾದ ಡಾ. ಸಿ.ಎನ್.ಮಂಜುನಾಥ್ ಅವರನ್ನು ಆಯ್ಕೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಮಾಡಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಮಂದಿಗೆ ಅವಕಾಶ!
ನಾಡಹಬ್ಬ ದಸರಾ ಆಚರಣೆಯ ಸಂದರ್ಭದಲ್ಲಿ ಕೋವಿಡ್ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಹಾಗೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕೋವಿಡ್-19 ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿತು.

ಕೊರೋನಾ ಆತಂಕ: ಕಟ್ಟುನಿಟ್ಟಿನ ಕ್ವಾರಂಟೈನ್ ನಲ್ಲಿ ದಸರಾ ಗಜಪಡೆ!
ಕೊರೋನಾ ಸೋಂಕು ತಗುಲುವ ಭೀತಿ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ವೇಳೆ ಅಂಬಾರಿ ಹೊರುವ ಆನೆಗಳನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ.

ದಸರಾ ಅರಮನೆ ಆವರಣಕ್ಕೆ ಮಾತ್ರ ಸೀಮಿತ: ಗಜ ಪಯಣ ಸಮಾರಂಭ ಇಲ್ಲ, ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನ
ಮೈಸೂರು ದಸರಾ ಮಹೋತ್ಸವ 2020ರ ಅಂಗವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವಸಿ.ಟಿ.ರವಿ ಅವರ ಉಪಸ್ಥಿತಿಯಲ್ಲಿ ಶನಿವಾರ ಮೈಸೂರಿನಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಯಿತು.

ಮೈಸೂರು: ಡೆಡ್ಲಿ ವೈರಸ್ ನಿಂದ ರಕ್ಷಿಸಲು ದಸರಾ ಆನೆಗಳಿಗೂ ಕೊರೋನಾ ಪರೀಕ್ಷೆ?
ಮನುಷ್ಯರಿಂದ ಆನೆಗಳಿಗೆ ಸೋಂಕು ತಗುಲುತ್ತದೆಯೇ ಎಂಬ ಪ್ರಶ್ನೆಗೆ ಅರಣ್ಯಾಧಿಕಾರಿಗಳಲ್ಲಿ ಉತ್ತರವಿಲ್ಲ, ಹೀಗಾಗಿ ಆನೆಗಳಿಗೂ ಕೊರೋನಾ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಮೈಸೂರು ದಸರಾ ಮೇಲೂ ಕೊರೋನಾ ಕರಿನೆರಳು: ಎರಡನೇ ಬಾರಿಗೆ ವಿಶ್ವ ಪ್ರಸಿದ್ದ ಜಂಬೂ ಸವಾರಿ ರದ್ದು?
ಕಳೆದ 8 ತಿಂಗಳಿಂದ ಕೊರೋನಾ ಅಟ್ಟಹಾಸ ಪ್ರಪಂಚಾದಾದ್ಯಂತ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಪ್ರಸಿದ್ದ ಮೈಸೂರು ದಸರಾ ಉತ್ಸವದ ಮೇಲೂ ಕರಿನೆರಳು ಬೀರಿದೆ, ಇದರ ಜೊತೆಗೆ ಪ್ರವಾಹ ಕೂಡ ಮತ್ತೊಂದು ಕಾರಣವಾಗಿದೆ.

ನಾಡಹಬ್ಬ 'ದಸರಾ' ಆಚರಣೆ ಮೇಲೂ ಕೊರೋನಾ ಕರಿ ನೆರಳು!
ಪ್ರಸಕ್ತ ಸಾಲಿನ ನಾಡಹಬ್ಬ ದಸರಾ ಮೇಲೂ ಕೊರೋನಾ ವೈರಸ್ ಕರಿ ಛಾಯೆ ಬಿದ್ದಿದ್ದು, ಈ ಬಾರಿ ಮೈಸೂರು ದಸರಾ ಒಡಿಶಾದಲ್ಲಿ ನಡೆದ ಪೂರಿ ಜಗನ್ನಾಥ ರಥಯಾತ್ರೆಯಂತೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

