Darshan Thoogudeepa

ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ದರ್ಶನ್‌ಗಾಗಿ ಸಿನಿಮಾ ನಿರ್ದೇಶಿಸುವೆ: ದಿನಕರ್ ತೂಗುದೀಪ
ದರ್ಶನ್ ಅವರ ಆರೋಗ್ಯದ ಬಗ್ಗೆ ಮಾತನಾಡಿದ ದಿನಕರ್, ದರ್ಶನ್ ಸದ್ಯ ಮೈಸೂರಿನಲ್ಲಿ ತಮ್ಮ ಕುಟುಂಬದ ವೈದ್ಯ ಡಾ. ಅಜಯ್ ಹೆಗ್ಡೆ ಅವರ ಮೇಲ್ವಿಚಾರಣೆಯಲ್ಲಿ ಬೆನ್ನುನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ಚಿತ್ರದಲ್ಲಿ ಬಹುಭಾಷಾ ನಟ ಮಹೇಶ್ ಮಂಜ್ರೇಕರ್ ಪಾತ್ರ?
ಪ್ರಕಾಶ್ ವೀರ್ ಬರೆದು ನಿರ್ದೇಶಿಸಿರುವ ದರ್ಶನ್ ಅಭಿನಯದ ಡೆವಿಲ್- ದಿ ಹೀರೋ ಚಿತ್ರದ ಶೂಟಿಂಗ್ ಅನ್ನು ಕೆಲವು ಆಕ್ಷನ್-ಪ್ಯಾಕ್ಡ್ ಸೀಕ್ವೆನ್ಸ್‌ಗಳೊಂದಿಗೆ ಮಾರ್ಚ್ 22ರಂದು ಪ್ರಾರಂಭಿಸಲಾಯಿತು. ಮೊದಲ ಶೆಡ್ಯೂಲ್ ಮುಗಿಸಿರುವ ಚಿತ್ರತಂಡ ಮುಂದಿನ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ. ಮೂಲಗಳ ಪ್ರಕಾರ, ಡೆವಿಲ್ ಚಿತ್ರತಂಡವು ಬಹುಭಾಷಾ ನಟ ಮಹೇಶ್ ಮಂಜ್ರೇಕರ್ ಅವರನ್ನು ಕರೆತಂದಿದೆ ಎನ್ನಲಾಗಿದೆ.

ದರ್ಶನ್ ಅಭಿನಯದ 'ನವಗ್ರಹ' ಚಿತ್ರಕ್ಕೆ 15 ವರ್ಷ; ಬರಲಿದೆಯಾ ನವಗ್ರಹ 2; ದಿನಕರ್ ತೂಗುದೀಪ ಹೇಳಿದ್ದೇನು?
ನವಗ್ರಹ, ಸಾರಥಿ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ದಿನಕರ್ ತೂಗುದೀಪ. ಅವರು ತಮ್ಮ ಮುಂಬರುವ 'ರಾಯಲ್' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ನಿರ್ದೇಶಕರು ಇತ್ತೀಚೆಗಷ್ಟೇ ತಮ್ಮ ನಿರ್ದೇಶನದ 'ನವಗ್ರಹ' (2008) ಚಿತ್ರದ 15ನೇ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ.

ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ: ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ನಟ ದರ್ಶನ್
ನೆರೆಮನೆಯ ಮಹಿಳೆಯೊಬ್ಬರಿಗೆ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಅವರು ಬುಧವಾರ ರಾಜರಾಜೇಶ್ವರಿ ನಗರದ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯಾದ್ಯಂತ 'ಗರಡಿ' ಚಿತ್ರ ರಿಲೀಸ್: ದರ್ಶನ್ ಎಂಟ್ರಿ ಸೀನ್ ಗೆ ಸ್ಕ್ರೀನ್ ನಿಲ್ಲಿಸಿ ಆರತಿ ಮಾಡಿದ ಡಿಬಾಸ್ ಅಭಿಮಾನಿ, ವಿಡಿಯೋ ವೈರಲ್!
ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಗರಡಿ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಕಂಡಿದೆ.

ಸಾಕು ನಾಯಿ ದಾಳಿ ಆರೋಪ: ನಟ ದರ್ಶನ್ ತೂಗುದೀಪ ವಿರುದ್ಧ ಮಹಿಳೆ ಪೊಲೀಸ್ ದೂರು
ಸಾಕು ನಾಯಿ ದಾಳಿ ಆರೋಪದ ಮೇರೆಗೆ ಖ್ಯಾತ ನಟ ತೂಗುದೀಪ ದರ್ಶನ್ (Darshan Thoogudeepa) ಅವರ ವಿರುದ್ಧ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಾನು ಕನ್ನಡ ಸಿನಿಮಾದ ಭಾಗವೇ ಹೊರತು, ಇಂಡಸ್ಟ್ರಿಯ ಕುತಂತ್ರಗಳಿಗಲ್ಲ: ಚಿತ್ರರಂಗದಲ್ಲಿ 26 ವರ್ಷ ಪೂರೈಸಿದ ದರ್ಶನ್ ಮಾತು!
ಮಾಸ್ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಕಂಡುಕೊಂಡ ದರ್ಶನ್ ಇತ್ತೀಚಿನ ವರ್ಷಗಳಲ್ಲಿ ಕಥೆಗಳ ಆಯ್ಕೆಯಲ್ಲಿ ಪ್ರಯೋಗ ಮಾಡುತ್ತಿದ್ದಾರೆ. ಪೌರಾಣಿಕ, ಐತಿಹಾಸಿಕ ಸಿನಿಮಾಗಳಲ್ಲಿ ನಟಿಸಿ ಗೆಲ್ಲುತ್ತಿದ್ದಾರೆ. ಈಗಾಗಲೇ 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ದರ್ಶನ್ ದೊಡ್ಡ ಅಭಿಮಾನಿಗಳ ಬಳಗ ಸೃಷ್ಟಿಸಿಕೊಂಡಿದ್ದಾರೆ.

'ಕಮಲ'ದ ಕೈಹಿಡಿಯಲಿದ್ದಾರಾ ಕಿಚ್ಚ ಸುದೀಪ್?: ಇಂದು ಅಧಿಕೃತ ಮಾಹಿತಿ ಸಿಗುವ ಸಾಧ್ಯತೆ
ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಮುನ್ನ ಒಂದಷ್ಟು ನಾಯಕರು ಪಕ್ಷ ಬಿಟ್ಟು ಹೋಗುವುದು, ಪಕ್ಷಕ್ಕೆ ಸೇರ್ಪಡೆಯಾಗುವುದು ಸಾಮಾನ್ಯ. ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಕಿಚ್ಚ ಸುದೀಪ್ ಮತ್ತು ತೂಗುದೀಪ ದರ್ಶನ್ ಪ್ರಮುಖರಾಗಿದ್ದಾರೆ.

ಅಪರೂಪದ ಪಕ್ಷಿಗಳನ್ನು ಸಾಕಿದ್ದಕ್ಕಾಗಿ ನಟ ದರ್ಶನ್, ಪತ್ನಿ ವಿಜಯ ಲಕ್ಷ್ಮಿ ವಿರುದ್ಧ ಪ್ರಕರಣ ದಾಖಲು
ವಲಸೆ ಹಕ್ಕಿಗಳಾದ ಬಾರ್ ಹೆಡೆಡ್ ಹೆಬ್ಬಾತುಗಳನ್ನು ಅಕ್ರಮವಾಗಿ ಸಾಕಿದ್ದಕ್ಕಾಗಿ ರಾಜ್ಯ ಅರಣ್ಯ ಇಲಾಖೆಯು ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ, ಅವರ ಪತ್ನಿ ವಿಜಯ ಲಕ್ಷ್ಮಿ ಮತ್ತು ಫಾರ್ಮ್‌ಹೌಸ್ ಮ್ಯಾನೇಜರ್ ನಾಗರಾಜ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

