Dali Dhananjay

ಮದರ್ ಪ್ರಾಮಿಸ್ ಚಿತ್ರದ ಟ್ರೈಲರ್
ವಿಡಿಯೋ

ಮದರ್ ಪ್ರಾಮಿಸ್ ಚಿತ್ರದ ಟ್ರೈಲರ್

'ಕೋಟಿ'ಯಲ್ಲಿ ಡಾಲಿ ಧನಂಜಯ್ ಎದುರು ಖಳನಾಯಕನಾಗಿ ನಟ ರಮೇಶ್ ಇಂದಿರಾ ಮಿಂಚು; ಪೋಸ್ಟರ್ ಬಿಡುಗಡೆ
ಸಿನಿಮಾ ಸುದ್ದಿ

'ಕೋಟಿ'ಯಲ್ಲಿ ಡಾಲಿ ಧನಂಜಯ್ ಎದುರು ಖಳನಾಯಕನಾಗಿ ನಟ ರಮೇಶ್ ಇಂದಿರಾ ಮಿಂಚು; ಪೋಸ್ಟರ್ ಬಿಡುಗಡೆ

ಡಾಲಿ ಧನಂಜಯ ಅಭಿನಯದ ಕೋಟಿ ಚಿತ್ರದ ಮೂಲಕ ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿದ್ದ ಪರಮ್ ನಿರ್ದೇಶನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಕೋಟಿ ಚಿತ್ರದಲ್ಲಿ ನಟ ರಮೇಶ್ ಇಂದಿರಾ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಚಿತ್ರತಂಡ ಈ ಹಿಂದೆ ಘೋಷಿಸಿತ್ತು. ಇದೀಗ ಚಿತ್ರದಲ್ಲಿ ನಟನ ಪಾತ್ರದ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದು, ದಿನೂ ಸಾವ್ಕಾರ್ ಎಂಬ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಡಾಲಿ ಧನಂಜಯ್ ಅಭಿನಯದ 'ಉತ್ತರಕಾಂಡ' ಮೂಲಕ ಕನ್ನಡಕ್ಕೆ ಐಶ್ವರ್ಯಾ ರಾಜೇಶ್ ಪದಾರ್ಪಣೆ?
ಸಿನಿಮಾ ಸುದ್ದಿ

ಡಾಲಿ ಧನಂಜಯ್ ಅಭಿನಯದ 'ಉತ್ತರಕಾಂಡ' ಮೂಲಕ ಕನ್ನಡಕ್ಕೆ ಐಶ್ವರ್ಯಾ ರಾಜೇಶ್ ಪದಾರ್ಪಣೆ?

ಟೋಬಿ ಖ್ಯಾತಿಯ ನಟಿ ಚೈತ್ರಾ ಜೆ ಆಚಾರ್ ಇತ್ತೀಚೆಗಷ್ಟೇ ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಚಿತ್ರತಂಡ ಸೇರಿಕೊಂಡಿದ್ದು, ಲಚ್ಚಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಹೊಸ ವಿಚಾರವೊಂದು ಹೊರಬಿದಿದ್ದು, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಮೆಚ್ಚುಗೆ ಪಡೆದ ನಟಿ ಐಶ್ವರ್ಯಾ ರಾಜೇಶ್ ಉತ್ತರಕಾಂಡದೊಂದಿಗೆ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ.

ಡಾಲಿ ಧನಂಜಯ್ ಅಭಿನಯದ 'ಉತ್ತರಕಾಂಡ' ಚಿತ್ರತಂಡಕ್ಕೆ ನಟಿ ಚೈತ್ರ ಜೆ ಆಚಾರ್ ಎಂಟ್ರಿ
ಸಿನಿಮಾ ಸುದ್ದಿ

ಡಾಲಿ ಧನಂಜಯ್ ಅಭಿನಯದ 'ಉತ್ತರಕಾಂಡ' ಚಿತ್ರತಂಡಕ್ಕೆ ನಟಿ ಚೈತ್ರ ಜೆ ಆಚಾರ್ ಎಂಟ್ರಿ

ಡಾಲಿ ಧನಂಜಯ್ ಅಭಿನಯದ ರೋಹಿತ್ ಪದಕಿ ನಿರ್ದೇಶನದ ಮುಂಬರುವ ಚಿತ್ರ 'ಉತ್ತರಕಾಂಡ' ಇತ್ತೀಚೆಗೆ ಸೋಮವಾರ ಸೆಟ್ಟೇರಿದೆ. ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರಕ್ಕೆ ಟೋಬಿ ಖ್ಯಾತಿಯ ನಟಿ ಚೈತ್ರ ಆಚಾರ್ ಎಂಟ್ರಿ ಕೊಟ್ಟಿದ್ದಾರೆ ಎಂದು ಚಿತ್ರತಂಡ ಘೋಷಿಸಿದೆ.

'ಮದುವೆಯಾಗಲು ಹುಡುಗಿ ಕರುಣಿಸಪ್ಪಾ' ಎಂದು ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹೊರಟ ಯುವಕರು: ನಟ ಡಾಲಿ ಧನಂಜಯ್ ಚಾಲನೆ
ರಾಜ್ಯ

'ಮದುವೆಯಾಗಲು ಹುಡುಗಿ ಕರುಣಿಸಪ್ಪಾ' ಎಂದು ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹೊರಟ ಯುವಕರು: ನಟ ಡಾಲಿ ಧನಂಜಯ್ ಚಾಲನೆ

ಇತ್ತೀಚೆಗೆ ಹಳ್ಳಿ ಹುಡುಗರಿಗೆ, ಕೃಷಿಕರಿಗೆ ಮದುವೆಯಾಗಲು ಹುಡುಗಿ ಸಿಗುವುದಿಲ್ಲ ಎಂಬುದು ಎಲ್ಲಾ ಕಡೆ ಬಹಳ ದೊಡ್ಡ ಸಮಸ್ಯೆಯಾಗಿದೆ. ಹುಡುಗಿ ಸಿಗದೆ ವರ್ಷ 35-40 ಆದರೂ ಮದುವೆಯಾಗದೆ ಉಳಿದಿರುವ ಪುರುಷರು ಅನೇಕ ಮಂದಿ ಇದ್ದಾರೆ. 

ವೀರಗಾಸೆ ಕಲಾವಿದರಿಗೆ, ಕಲೆಗೆ ಅವಮಾನ ಮಾಡಿಲ್ಲ, ಇಂದು ಕಲಾವಿದರನ್ನು ಭೇಟಿ ಮಾಡುತ್ತೇನೆ: ಡಾಲಿ ಧನಂಜಯ್
ಸಿನಿಮಾ ಸುದ್ದಿ

ವೀರಗಾಸೆ ಕಲಾವಿದರಿಗೆ, ಕಲೆಗೆ ಅವಮಾನ ಮಾಡಿಲ್ಲ, ಇಂದು ಕಲಾವಿದರನ್ನು ಭೇಟಿ ಮಾಡುತ್ತೇನೆ: ಡಾಲಿ ಧನಂಜಯ್

ಡಾಲಿ ಧನಂಜಯ್ ಅಭಿನಯದ ರಾಜ್ಯಾದ್ಯಂತ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿರುವ ‘ಹೆಡ್ ಬುಷ್’ (head bush) ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ವಿವಾದ ಹುಟ್ಟಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಡಾಲಿ ಧನಂಜಯ್ ಮತ್ತು ಚಿತ್ರತಂಡದ ಬಗ್ಗೆ ಪರ-ವಿರೋಧ ಪ್ರತಿಕ್ರಿಯೆ ಕೇಳಿಬರುತ್ತಿದೆ.

ಡಾಲಿ ಧನಂಜಯ್ ರ ಮಾಜಿ ಡಾನ್ ಎಂ.ಪಿ. ಜಯರಾಜ್ ಪಾತ್ರದ ಚಿತ್ರದ ಶೀರ್ಷಿಕೆ 'ಹೆಡ್ ಬುಷ್'
ಸಿನಿಮಾ ಸುದ್ದಿ

ಡಾಲಿ ಧನಂಜಯ್ ರ ಮಾಜಿ ಡಾನ್ ಎಂ.ಪಿ. ಜಯರಾಜ್ ಪಾತ್ರದ ಚಿತ್ರದ ಶೀರ್ಷಿಕೆ 'ಹೆಡ್ ಬುಷ್'

ಅಗ್ನಿ ಶ್ರೀಧರ್ ರವರ ‘ದಾದಾಗಿರಿಯ ದಿನಗಳು’ ಕಾದಂಬರಿ ಆಧಾರಿತ ಸಿನಿಮಾ ಬರುತ್ತಿದೆ. ಚಿತ್ರಕ್ಕೆ ಡಾಲಿ ಧನಂಜಯ ನಾಯಕನಾಗಿ ಡಾನ್​ ಜಯರಾಜನ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಇಂದು ಬಿಡುಗಡೆಯಾಗಿದ್ದು, ಹೆಡ್ ಬುಷ್ ಎಂದು ಇಡಲಾಗಿದೆ.  ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಸಿನಿಮಾ ಸಿದ್ಧವಾಗಲಿದೆ.