'ಕೋಟಿ'ಯಲ್ಲಿ ಡಾಲಿ ಧನಂಜಯ್ ಎದುರು ಖಳನಾಯಕನಾಗಿ ನಟ ರಮೇಶ್ ಇಂದಿರಾ ಮಿಂಚು; ಪೋಸ್ಟರ್ ಬಿಡುಗಡೆ
ಡಾಲಿ ಧನಂಜಯ ಅಭಿನಯದ ಕೋಟಿ ಚಿತ್ರದ ಮೂಲಕ ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿದ್ದ ಪರಮ್ ನಿರ್ದೇಶನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಕೋಟಿ ಚಿತ್ರದಲ್ಲಿ ನಟ ರಮೇಶ್ ಇಂದಿರಾ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಚಿತ್ರತಂಡ ಈ ಹಿಂದೆ ಘೋಷಿಸಿತ್ತು. ಇದೀಗ ಚಿತ್ರದಲ್ಲಿ ನಟನ ಪಾತ್ರದ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದು, ದಿನೂ ಸಾವ್ಕಾರ್ ಎಂಬ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಡಾಲಿ ಧನಂಜಯ ಅಭಿನಯದ ಕೋಟಿ ಚಿತ್ರದ ಮೂಲಕ ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿದ್ದ ಪರಮ್ ನಿರ್ದೇಶನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಕೋಟಿ ಚಿತ್ರದಲ್ಲಿ ನಟ ರಮೇಶ್ ಇಂದಿರಾ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಚಿತ್ರತಂಡ ಈ ಹಿಂದೆ ಘೋಷಿಸಿತ್ತು. ಇದೀಗ ಚಿತ್ರದಲ್ಲಿ ನಟನ ಪಾತ್ರದ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದು, ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ ನಟ ಕೋಟಿಯಲ್ಲಿ ದಿನೂ ಸಾವ್ಕಾರ್ ಎಂಬ ಪಾತ್ರವನ್ನು ನಿರ್ವಹಿಸಲಿದ್ದಾರೆ. ಬಿಳಿ ಕೂದಲು ಮತ್ತು ಗಡ್ಡದೊಂದಿಗಿರುವ ನಟ, ಪ್ಲಾಟಿನಂ ಚೈನ್ ಧರಿಸಿ ಮತ್ತು ಸಿಗರೇಟ್ ಸೇದುತ್ತಿರುವುದು ಪೋಸ್ಟರ್‌ನಲ್ಲಿ ಕಂಡುಬಂದಿದೆ.
ಕೋಟಿ ಬರಹಗಾರ ಮತ್ತು ನಿರ್ದೇಶಕ ಪರಮ್ ಅವರು, ಕತೆಯನ್ನು ಮುಂದೆ ತೆಗೆದುಕೊಂಡು ಹೋಗುವವನು, ನಾಯಕನ ಮೌಲ್ಯಗಳನ್ನು ಪ್ರಶ್ನಿಸುವವನು, ಕತೆಗೊಂದು ಎನರ್ಜಿ ಕೊಡುವವನು ಖಳನಾಯಕ! ಎಂದಿದ್ದಾರೆ. 'ಕೋಟಿಯ ಖಳನಾಯಕನ ಹೆಸರು ದಿನೂ ಸಾವ್ಕಾರ್. ರಣತಂತ್ರದಲ್ಲಿ ಎತ್ತಿದ ಕೈ. ಬುದ್ಧಿವಂತ. ಸ್ವಲ್ಪ ಅನ್ ಸ್ಟೇಬಲ್. ತಾನು ಹೇಳಿದ್ದನ್ನು ಎಲ್ಲರೂ ಕೇಳಬೇಕು ಎಂದುಕೊಂಡಿರುವ ವ್ಯಕ್ತಿ. ಮಾತು ಕೇಳದವರನ್ನು ಕೇಳಿಸುತ್ತೇನೆ ಎನ್ನುವುದನ್ನು ನಂಬಿದವನು. ಸಿಕ್ಕಾಪಟ್ಟೆ ಮಜಾ ಕೊಡುವ ಪಾತ್ರ ದಿನೂ ಸಾವ್ಕಾರ್ರದು ಎಂದು ರಮೇಶ್ ಇಂದಿರಾ ಅವರ ಪಾತ್ರದ ಬಗ್ಗೆ ಹೇಳಿದ್ದಾರೆ.
ಕೋಟಿ ಸಿನಿಮಾ ಕನ್ನಡದಲ್ಲಿ ಜಿಯೋ ಸ್ಟುಡಿಯೋಸ್‌ನ ಮೊದಲ ಚಿತ್ರವಾಗಿದೆ ಮತ್ತು ಜೂನ್ 14 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಚಿತ್ರಕ್ಕೆ ಯೋಗರಾಜ್ ಭಟ್ ಜೊತೆಗೆ ಸಾಹಿತ್ಯ ಬರೆದಿರುವ ವಾಸುಕಿ ವೈಭವ್ ಅವರೇ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ನೋಬಿನ್ ಪಾಲ್ (777 ಚಾರ್ಲಿ) ಅವರ ಹಿನ್ನೆಲೆ ಸಂಗೀತ, ಪ್ರತೀಕ್ ಶೆಟ್ಟಿ (ಕಾಂತಾರ) ಅವರ ಸಂಕಲನವಿದೆ. ಅರುಣ್ ಬ್ರಹ್ಮನ್ ಚಿತ್ರದ ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ.
ಕೋಟಿಯಲ್ಲಿ ನಾಯಕಿಯಾಗಿ ಮೋಕ್ಷಾ ಕುಶಾಲ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನುಳಿದಂತೆ ನಟರಾದ ರಂಗಾಯಣ ರಘು, ತಾರಾ, ಪೃಥ್ವಿ ಶಾಮನೂರು, ಸರ್ದಾರ್ ಸತ್ಯ ಮತ್ತು ತನುಜಾ ವೆಂಕಟೇಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



