Crackers

ಬೆಂಗಳೂರಿನಲ್ಲಿ ದೀಪಾವಳಿ ಸಮಯದಲ್ಲಿ ದಿನಕ್ಕೆ 2 ತಾಸು ಮಾತ್ರ ಪಟಾಕಿ ಹಚ್ಚಲು ಅವಕಾಶ: ಸುತ್ತೋಲೆ
ಭಾನುವಾರದಿಂದ ದೀಪಾವಳಿ ಹಬ್ಬದ ಸಂಭ್ರಮ. ದೀಪಾವಳಿ ಹಾಗೆಂದು ಬೆಂಗಳೂರು ನಗರ ಪ್ರದೇಶದಲ್ಲಿ ರಾತ್ರಿಯಿಡೀ ಬೇಕಾಬಿಟ್ಟಿ ಪಟಾಕಿಗಳನ್ನು ಸಿಡಿಸುವಂತಿಲ್ಲ, ದೀಪಾವಳಿ ಸಂದರ್ಭದಲ್ಲಿ ಪ್ರತಿದಿನ ರಾತ್ರಿ 8 ರಿಂದ 10 ಗಂಟೆಯವರೆಗೆ ಎರಡು ಗಂಟೆಗಳ ಕಾಲ ಮಾತ್ರ ಪಟಾಕಿ ಸಿಡಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಸುತ್ತೋಲೆ ಹೊರಡಿಸಿದೆ.

ಪಟಾಕಿ ಸಿಡಿತದಿಂದ ಬೆಂಗಳೂರಿನಲ್ಲಿ 25ಕ್ಕೂ ಹೆಚ್ಚು ಮಕ್ಕಳ ಕಣ್ಣಿಗೆ ಹಾನಿ. ಬೋಟ್ ನಲ್ಲಿ ಸಿಲುಕಿದ್ದ 7 ಮಂದಿ ರಕ್ಷಣೆ!
ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಾಚರಣೆ ವೇಳೆ ನಗರದಲ್ಲಿ ಪಟಾಕಿ ಸಿಡಿತದಿಂದ 25ಕ್ಕೂ ಹೆಚ್ಚು ಮಕ್ಕಳ ಕಣ್ಣುಗಳಿಗೆ ಹಾನಿಯಾಗಿದ್ದು, 20ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯಗಳಾಗಿವೆ.

ದೇವರ ಚಿತ್ರಗಳಿರುವ ಪಟಾಕಿ ಮಾರಾಟ, ಬಳಕೆಗೆ ವಿಹೆಚ್'ಪಿ ವಿರೋಧ
ದೇವರ ಹೆಸರಿರುವ ಹಾಗೂ ದೇವಲ ಭಾವಚಿತ್ರಗಳಿರುವ ಪಟಾಕಿಗಳ ಮಾರಾಟ ಮಾಡದಂತೆ ಹಾಗೂ ಸಾರ್ವಜನಿಕರೂ ಕೂಡ ಅವುಗಳನ್ನು ಸಿಡಿಸದಂತೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿಕೊಂಡಿದೆ.

ಪಟಾಕಿಗಳ ವಿರುದ್ಧ ಜಾಹೀರಾತು: ಬಾಲಿವುಡ್ ನಟ ಅಮಿರ್ ಖಾನ್ ವಿರುದ್ಧ ಸಂಸದ ಅನಂತ್ ಕುಮಾರ್ ಹೆಗಡೆ ಕಿಡಿ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಸ್ತೆಯಲ್ಲಿ ಪಟಾಕಿ ಸಿಡಿಸದಿರಿ ಎಂದು ಜಾಹೀರಾತೊಂದರಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಅವರು ಮನವಿ ಮಾಡಿಕೊಂಡಿರುವುದಕ್ಕೆ ಸಂಸದ ಅನಂತ್ ಕುಮಾರ್ ಹೆಗಡೆಯವರು ತೀವ್ರವಾಗಿ ಕಿಡಿಕಾರಿದ್ದಾರೆ.

ಕರ್ನಾಟಕ: ಜನವಸತಿ ಪ್ರದೇಶದಿಂದ ವನ್ಯಜೀವಿಗಳನ್ನು ಓಡಿಸಲು ಸ್ಥಳೀಯರಿಗೆ ಪಟಾಕಿ ಹಂಚಿದ ಅರಣ್ಯ ಇಲಾಖೆ
ವನ್ಯಜೀವಿ ಅಡ್ಡಾಡುವುದು ಕಂಡು ಬಂದಾಕ್ಷಣ ಅದನ್ನು ಹೆದರಿಸಿ ಓಡಿಸುವ ಸಲುವಾಗಿ ಸ್ಥಳೀಯರಿಗೆ ಪಟಾಕಿಗಳನ್ನು ನೀಡಲಾಗುತ್ತಿದೆ.

ನಾನು ಕಾನೂನು ಪಾಲನೆ ಬಿಟ್ಟು ಬೇರೇನೂ ಟ್ವೀಟ್ ಮಾಡಿಲ್ಲ: ನಟಿ ಕಂಗನಾಗೆ ಡಿ.ರೂಪಾ ತಿರುಗೇಟು
ಕರ್ನಾಟಕದಲ್ಲಿ ದೀಪಾವಳಿಗೆ ಪಟಾಕಿ ನಿಷೇಧಕ್ಕೆ ಸಂಬಂಧಿಸಿದಂತೆ ತನ್ನ ಹಾಗೂ ಚಿತ್ರನಟಿ ಕಂಗನಾ ನಡುವಿನ ಟ್ವೀಟ್ ವಾರ್ ವಿಚಾರವಾಗಿ ಪ್ರತಿಕ್ರಿಯಿಸಿದ ಎಡಿಜಿಪಿ ರೂಪಾ ನಾನು ಕಾನೂನು ಪಾಲನೆ ಬಿಟ್ಟು ಬೇರೇನೂ ಟ್ವೀಟ್ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ರಾಜಸ್ಥಾನದಲ್ಲಿ ಪಟಾಕಿ ಬಳಸಿದರೆ 2 ಸಾವಿರ ದಂಡ!
ರಾಜಸ್ಥಾನದಲ್ಲಿ ಪಟಾಕಿ ಬಳಸುವವರ ವಿರುದ್ಧ 2 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗುತ್ತಿದೆ. ಯಾವುದೇ ಅಂಗಡಿ ಮಾಲೀಕರು ಪಟಾಕಿ ಮಾರಾಟ ಮಾಡುವುದು ಕಂಡುಬಂದಲ್ಲಿ 10 ಸಾವಿರ, ಯಾರಾದರೂ ಪಟಾಕಿ ಬಳಸುವುದು ಕಂಡುಬಂದಲ್ಲಿ 2 ಸಾವಿರ ದಂಡವನ್ನು ವಿಧಿಸುವುದಾಗಿ ರಾಜಸ್ಥಾನ ಸರ್ಕಾರ ಸೂಚನೆ ನೀಡಿದೆ.

ಪಟಾಕಿ ಹಚ್ಚುವಾಗ ಇರಲಿ ಎಚ್ಚರ: ನಿರ್ಲಕ್ಷ್ಯ, ನಿಯಮಗಳ ಪಾಲನೆಯಲ್ಲಿ ಬೇಡ ಅಸಡ್ಡೆ
ದೇಶಾದ್ಯಂತ ದೀಪಾವಳಿ ಆರಂಭವಾಗಿದೆ. ಪಟಾಕಿಗಳನ್ನು ಹಚ್ಚುವಾಗ ಆದಷ್ಟು ಎಚ್ಚರವಾಗಿರಿ ಎಂದು ಗಣ್ಯರು, ವೈದ್ಯರು ಈ ವರ್ಷವೂ ಎಚ್ಚರಿಕೆ ನೀಡಿದ್ದಾರೆ.

ದೀಪಾವಳಿಗೆ ಪಟಾಕಿ ಹಚ್ಚುವುದೇಕೆ?
ನರಕಾಸುರ ಭೂಮಿ ಪುತ್ರ, ದುಷ್ಟನಾದ ನರಕಾಸುರನನ್ನು ಕೃಷ್ಣ ಸಂಹಾರ ಮಾಡಿ ಭೂಮಿಯಲ್ಲಿ ಸುಟ್ಟಾಗ ದೇಹ ರಾಸಾಯನಿಕವಾಗಿದ್ದು ಅದು ಬಣ್ಣಬಣ್ಣವಾಗಿ ಸಿಡಿಯಿತು ಎಂದು ಅದರ ಪ್ರತೀಕವಾಗಿ ದೀಪಾವಳಿ ಸಮಯದಲ್ಲಿ ಪಟಾಕಿ ಹಚ್ಚುವುದು ಎಂದು ಉತ್ತರ ಭಾರತದ ಕಡೆ ಜಾನಪದ ಕಥೆ ಪ್ರಚಲಿತದಲ್ಲಿದೆ.

