Covid vaccine

ಇದುವರೆಗೂ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ 21.80 ಕೋಟಿ ಲಸಿಕೆ ಪೂರೈಕೆ: ಕೇಂದ್ರ ಸರ್ಕಾರ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 1.90 ಕೋಟಿ ಡೋಸ್ ಕೋವಿಡ್ -19 ಲಸಿಕೆ ಲಭ್ಯವಿದ್ದು, ಇಲ್ಲಿಯವರೆಗೂ 21.80 ಕೋಟಿ ಲಸಿಕೆಯನ್ನು ಕೇಂದ್ರ ಸರ್ಕಾರ ಪೂರೈಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

18-44 ವಯೋಮಾನದವರಿಗೆ ಕೊರೋನಾ ಲಸಿಕೆ ಸಧ್ಯಕ್ಕಿಲ್ಲ: ರಾಜ್ಯ ಸರ್ಕಾರದಿಂದ ಪರಿಷ್ಕೃತ ಆದೇಶ
ರಾಜ್ಯ ಸರ್ಕಾರ ತನ್ನ ವ್ಯಾಕ್ಸಿನೇಷನ್ ನೀತಿಯನ್ನು ಮತ್ತೆ ಬದಲಾಯಿಸಿದೆ. 18-44 ವಯೋಮಾನದವರಿಗೆ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಪುನರಾರಂಭಿಸುವುದಾಗಿ ಘೋಷಿಸಿದ ಎರಡು ದಿನಗಳ ನಂತರ, ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ನಿರ್ದೇಶಕಿ ಡಾ.ಅರುಂಧತಿ ಚಂದ್ರಶೇಖರ್ ಅವರು ಶನಿವಾರ ಸ್ಪಷ್ಟೀಕರಣವನ್ನು ನೀಡಿ, ಲಸಿಕೆಗಳು ಪ್ರಸ್ತುತ ಲಭ್ಯವಿಲ್ಲ ಮತ್ತು ಮುಂಚೂಣಿ ಕಾರ್

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇನ್ನೂ 1.6 ಕೋಟಿ ಡೋಸ್ ಕೋವಿಡ್ ಲಸಿಕೆ ಲಭ್ಯವಿದೆ: ಕೇಂದ್ರ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 1.60 ಕೋಟಿ ಡೋಸ್ ಕೋವಿಡ್ -19 ಲಸಿಕೆ ಲಭ್ಯವಿದ್ದು, ಮುಂದಿನ ಮೂರು ದಿನಗಳಲ್ಲಿ, ಇನ್ನೂ 2.67 ಲಕ್ಷ ಡೋಸ್‌ಗಳನ್ನು ಪೂರೈಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

ನಟ ದಿಗಂತ್, ಸೃಜನ್ ಗೆ ಸಿಗುವ ಲಸಿಕೆ ನಮಗೇಕೆ ಇಲ್ಲ: ನೆಟ್ಟಿಗರ ಪ್ರಶ್ನೆ
ರಾಜ್ಯ ಸರ್ಕಾರ ಕೊರೋನಾ ವಿರುದ್ಧ ಲಸಿಕೆ ನೀಡುತ್ತಿದೆಯಾದರೂ, 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡುವುದಕ್ಕೆ ತಾತ್ಕಾಲಿಕ ತಡೆ ನೀಡಿದೆ. ಆದಾಗ್ಯೂ ಕೆಲವು ಸೆಲೆಬ್ರಿಟಿಗಳು ಲಸಿಕೆ ಪಡೆಯುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಕೊರೋನಾ ಉಲ್ಬಣ: ಅಕ್ಟೋಬರ್ ವರೆಗೂ ದೇಶದಿಂದ ಕೋವಿಡ್ ಲಸಿಕೆ ರಫ್ತು ಇಲ್ಲ!
ಮುಂದಿನ ಅಕ್ಟೋಬರ್ ವರೆಗೂ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಭಾರತ ದೊಡ್ಡಮಟ್ಟದಲ್ಲಿ ಕೊರೋನಾ ಲಸಿಕೆ ಪೂರೈಕೆ ಅಥವಾ ರಫ್ತು ಮಾಡದಿರಲು ತೀರ್ಮಾನಿಸಿದೆ.

ರಾಜ್ಯಗಳಿಗೆ ಕೋವಿಡ್ ಲಸಿಕೆ ಹಂಚಿಕೆ ಮಾಹಿತಿ ಬಹಿರಂಗಪಡಿಸಿ: ಕೇಂದ್ರಕ್ಕೆ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಆಗ್ರಹ
ಕೇಂದ್ರದಿಂದ ರಾಜ್ಯಗಳಿಗೆ ಸರಬರಾಜು ಮಾಡಿದ ಲಸಿಕೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ...

ಆಧಾರ್ ಕಾರ್ಡ್ ಇಲ್ಲದ ಹಿರಿಯ ನಾಗರಿಕರಿಗೂ ಕೋವಿಡ್ ಲಸಿಕೆ: ಶಶಿಕಲಾ ಜೊಲ್ಲೆ
ಆಧಾರ್ ಕಾರ್ಡ್ ಇಲ್ಲದೆ ಇರುವ ಹಿರಿಯ ನಾಗರಿಕರಿಗೆ ಆದ್ಯತೆಯ ಮೇರೆಗೆ ಕೋವಿಡ್ ಲಸಿಕೆಯನ್ನು ನೀಡಲು ಆರೋಗ್ಯ ಸಚಿವರಿಗೆ ಮನವಿ ಮಾಡಲಾಗಿದ್ದು ಶ್ರೀಘ್ರವೇ ಲಸಿಕೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆಗಳ ಶೂನ್ಯ ದಾಸ್ತಾನು: ಸರ್ಕಾರಕ್ಕೆ ಪತ್ರ ಬರೆದರೂ ಪ್ರತಿಕ್ರಿಯೆ ಇಲ್ಲ ಎಂದ 'ಫನಾ'
ಕೊರೋನಾ ಲಸಿಕೆಗಳ ಶೂನ್ಯ ದಾಸ್ತಾನು ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನ ಪುನರಾರಂಭಿಸಲು ಖಾಸಗಿ ಆಸ್ಪತ್ರೆಗಳು ಮತ್ತಷ್ಟು ಕಾಲಾವಕಾಶ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಕೋವಿಡ್ ವ್ಯಾಕ್ಸಿನ್ ಉತ್ಪಾದನೆಯಾಗದೇ ಹೋದರೆ ನಾವೇನು ನೇಣು ಹಾಕ್ಕೊಳಕಾಗುತ್ತಾ?: ಡಿವಿಎಸ್ ಅಸಾಹಯಕತೆ
ಅಗತ್ಯಕ್ಕನುಸಾರವಾಗಿ ಸಾಕಷ್ಟು ಪ್ರಮಾಣದಲ್ಲಿ ಕೋವಿಡ್ ವ್ಯಾಕ್ಸಿನ್ ಉತ್ಪಾದನೆಯಾಗದೇ ಹೋದರೆ ನಾವೇನು ನೇಣುಹಾಕಿಕೊಳ್ಳಲಾಗುತ್ತದೆಯೇ? ಎಂದು ಕೇಂದ್ರ ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅಸಹಾಯಕತೆಯ ಹೇಳಿಕೆ ನೀಡಿದ್ದಾರೆ.

