Covid vaccine

ಸೋನಿಯಾ ಗಾಂಧಿ ಕೋವಿಡ್ ಲಸಿಕೆಯ ಎರಡೂ ಡೋಸ್ ತೆಗೆದುಕೊಂಡಿದ್ದಾರೆ, ಸರ್ಕಾರ ಎಲ್ಲರಿಗೆ ಲಸಿಕೆ ಒದಗಿಸಲಿ: ಕಾಂಗ್ರೆಸ್
ಸೋನಿಯಾ ಗಾಂಧಿ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಗಳನ್ನು ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿದ್ದು, ಬಿಜೆಪಿ ಪ್ರಶ್ನೆ ಕೇಳುವುದನ್ನು ಬಿಟ್ಟು ಎಲ್ಲಾ ಭಾರತೀಯರಿಗೆ ಲಸಿಕೆ ಒದಗಿಸುವ "ರಾಜಧರ್ಮ" ಪಾಲಿಸಲಿ ಎಂದು ಗುರುವಾರ ಹೇಳಿದೆ.

ಸಂಡೂರು: ಗದ್ದೆಗಳಿಗೇ ಹೋಗಿ ರೈತರಿಗೆ ಲಸಿಕೆ ಹಾಕಿದ ಆರೋಗ್ಯ ಇಲಾಖೆ ಸಿಬ್ಬಂದಿ!
ಹಳ್ಳಿಗಳಲ್ಲಿ ಅನೇಕರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ. ಹೀಗಿರುವಾಗ ಗ್ರಾಮದಲ್ಲಿರುವ ಎಲ್ಲರೂ ಲಸಿಕೆ ಹಾಕಿಸಿಕೊಂಡಿದ್ದಾರೆಯೇ ಇಲ್ಲವೇ, ಹಾಕಿಸಿಕೊಳ್ಳದವರಿಗೆ ಹೇಗೆ ಹಾಕುವುದು ಎಂಬ ಬಗ್ಗೆ ಬಳ್ಳಾರಿ ಜಿಲ್ಲಾಡಳಿತ ನವೀನ ಆಲೋಚನೆ ನಡೆಸಿದೆ.

2 ಡೋಸ್ ಲಸಿಕೆ ಡೆಲ್ಟಾ ರೂಪಾಂತರಿಗೆ 'ಹೆಚ್ಚು ಪರಿಣಾಮಕಾರಿ', ಆಸ್ಪತ್ರೆ ದಾಖಲಾತಿ ಕಡಿಮೆಯಾಗಿಸುತ್ತದೆ: ಬ್ರಿಟನ್ ವಿಶ್ಲೇಷಣೆ
ಎರಡು ಡೋಸ್ ಕೋವಿಡ್ ಲಸಿಕೆ ಪಡೆಯುವುದರಿಂದ ಡೆಲ್ಟಾ ರೂಪಾಂತರಿಯಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಬ್ರಿಟನ್‌ನ ಆರೋಗ್ಯ ತಜ್ಞರ ಹೊಸ ವಿಶ್ಲೇಷಣೆಯಿಂದ ತಿಳಿದುಬಂದಿದೆ.

ಭಾರತದಲ್ಲಿ ಕೊರೋನಾ ಲಸಿಕೆಗೆ ಮೊದಲ ಸಾವು: ಖಚಿತ ಪಡಿಸಿದ ರಾಷ್ಟ್ರೀಯ ಸರ್ಕಾರಿ ಸಮಿತಿ
ದೇಶದಲ್ಲಿ ಕೊರೋನಾ ಲಸಿಕೆಯ ಅಡ್ಡಪರಿಣಾಮದಿಂದ 68 ವರ್ಷದ ವ್ಯಕ್ತಿಯೊಬ್ಬರು ಅನಾಫಿಲ್ಯಾಕ್ಸಿಸ್ ನಿಂದ ಮೃತಪಟ್ಟಿದ್ದಾನೆ ಎಂದು ಸರ್ಕಾರಿ ಸಮಿತಿ ದೃಢಪಡಿಸಿದೆ.

ಅಸ್ಸಾಂ: ಪ್ರತಿದಿನ 3 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲು 2,000 ತಂಡಗಳ ರಚನೆ!
ಸಾಕಷ್ಟು ಸಂಖ್ಯೆಯ ಡೋಸ್‌ಗಳು ಲಭ್ಯವಿರುವುದರಿಂದ ಪ್ರತಿದಿನ ಮೂರು ಲಕ್ಷ ಜನರಿಗೆ ಲಸಿಕೆ ನೀಡಲು ರಾಜ್ಯ ಸರ್ಕಾರ 2,000 ತಂಡಗಳನ್ನು ರಚಿಸಿದೆ ಎಂದು ಅಸ್ಸಾಂ ಆರೋಗ್ಯ ಸಚಿವ ಕೇಶಬ್ ಮಹಂತಾ ಶನಿವಾರ ತಿಳಿಸಿದ್ದಾರೆ.

ಸರ್ಕಾರದ ಕೋವಿಡ್ ಲಸಿಕೆ ಪೂರೈಕೆ ನೀತಿ: ಸಣ್ಣ ಮತ್ತು ಮಧ್ಯಮ ಗಾತ್ರದ ಆಸ್ಪತ್ರೆಗಳಲ್ಲಿ ಲಸಿಕೆ ಕೊರತೆ
ಕೋವಿಡ್-19 ಅಲೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಆಸ್ಪತ್ರೆಗಳನ್ನು ಕೊರೋನಾ ಲಸಿಕೆ ಅಭಿಯಾನದಿಂದ ಹೊರಗಿಡಲಾಗಿದೆ. ಪೂರೈಕೆದಾರರಿಂದ ಕೊರೋನಾ ಲಸಿಕೆ ಡೋಸ್ ಗಳನ್ನು ಸಂಗ್ರಹಿಸಲು ಸಾಧ್ಯವಾಗದಿರುವುದರಿಂದ 30ರಿಂದ 40 ಬೆಡ್ ಗಳನ್ನು ಹೊಂದಿರುವ ಆಸ್ಪತ್ರೆಗಳು ಲಸಿಕೆ ಅಭಿಯಾನವನ್ನು ನಡೆಸುವ ಕಾರ್ಯದಿಂದ ಹೊರಗುಳಿದಿವೆ.

ಇಂಟರ್ನೆಟ್ ಇಲ್ಲದವರಿಗೂ ಜೀವಿಸುವ ಹಕ್ಕಿದೆ, ಲಸಿಕೆ ಪಡೆಯಲು ಸ್ಥಳದಲ್ಲೇ ನೋಂದಣಿ ವ್ಯವಸ್ಥೆ ಇರಲಿ: ರಾಹುಲ್ ಗಾಂಧಿ
ನೋಂದಣಿ ಮಾಡದಿದ್ದರೂ ಕೋವಿಡ್-19 ವ್ಯಾಕ್ಸಿನೇಷನ್ ಕೇಂದ್ರಕ್ಕೆ ಬರುವ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಆಗ್ರಹಿಸಿದ್ದಾರೆ.

'ಕೋವಾಕ್ಸ್' ಅಭಿಯಾನದಡಿ ಅಮೆರಿಕಾ ಜಾಗತಿಕವಾಗಿ ಹಂಚಲಿರುವ 8 ಕೋಟಿ ಲಸಿಕೆ ಪೈಕಿ ಭಾರತಕ್ಕೂ ಪಾಲು!
ವಿಶ್ವಸಂಸ್ಥೆಯ ಕೋವಾಕ್ಸ್ ಜಾಗತಿಕ ಲಸಿಕೆ ಹಂಚಿಕೆ ಅಭಿಯಾನದ ಅಡಿಯಲ್ಲಿ ಬಳಕೆಯಾಗದೆ ದಾಸ್ತಾನು ಮಾಡಲಾಗಿರುವ 80 ಮಿಲಿಯನ್ ಅಮೆರಿಕಾ ಬೆಂಬಲಿತ ಲಸಿಕೆಗಳ ಹಂಚಿಕೆ ಪೈಕಿ ಭಾರತ ಸಹ ತನ್ನ ಪಾಲನ್ನು ಪಡೆಯಲಿದೆ ಎಂದು ಬೈಡನ್ ಸರ್ಕಾರದ ರಾಜ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಕ್ ನಲ್ಲಿ 1 ಕೋಟಿ ಕೋವಿಡ್ ಲಸಿಕೆ ನೀಡಿಕೆ; ಮೂರನೇ ಅಲೆ ನಿಯಂತ್ರಣದಲ್ಲಿ!
ಕೊರೋನಾ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಇಂದಿಗೆ 10 ಮಿಲಿಯನ್(1 ಕೋಟಿ) ಕೋವಿಡ್ ಲಸಿಕೆ ನೀಡುವುದನ್ನು ಪೂರ್ಣಗೊಳಿಸಿದೆ. ಇನ್ನು ಮೂರನೇ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

