Covid-19 Vaccine

ಕೊರೋನಾ ವೈರಸ್ ನಿಂದ ಗುಣಮುಖರಾದವರಿಗೆ 3 ತಿಂಗಳ ಬಳಿಕ ಕೋವಿಡ್ ಲಸಿಕೆ: ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ
ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಕುರಿತಂತೆ ಕೇಂದ್ರ ಸರ್ಕಾರ ನೂತನ ಕೋವಿಡ್ ಲಸಿಕಾ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಕೋವಿಡ್ ಸೋಂಕಿಗೆ ತುತ್ತಾದ ವ್ಯಕ್ತಿ ಗುಣಮುಖರಾದ ಬಳಿಕ ಕನಿಷ್ಟ ಮೂರು ತಿಂಗಳ ಬಳಿಕ ಕೋವಿಡ್ ಲಸಿಕೆ ಪಡೆಯುವಂತೆ ಹೇಳಿದೆ.

ಗೆಸ್ಟ್ ಹೌಸ್ ನಲ್ಲಿ ಕೋವಿಡ್ ಲಸಿಕೆ ಪಡೆದ ಕ್ರಿಕೆಟಿಗ ಕುಲದೀಪ್ ಯಾದವ್; ತನಿಖೆಗೆ ಕಾನ್ಪುರ ಡಿಸಿ ಆದೇಶ
ಭಾರತ ಕ್ರಿಕೆಟ್ ತಂಡದ ಕ್ರಿಕೆಟಿಗ ಕುಲದೀಪ್ ಯಾದವ್ ತಮ್ಮ ಗೆಸ್ಟ್ ಹೌಸ್ ನಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಕಾನ್ಪುರ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ.

ಇಂಗ್ಲೆಂಡ್ ಆರೋಗ್ಯ ಇಲಾಖೆಯಿಂದ ಟೀಂ ಇಂಡಿಯಾಗೆ ಎರಡನೇ ಡೋಸ್ ಕೋವಿಡ್-19 ಲಸಿಕೆ
ಇಂಗ್ಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಹಾಗೂ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ತೆರಳಲು ಸಿದ್ಧತೆಯಲ್ಲಿ ತೊಡಗಿರುವ ಟೀಂ ಇಂಡಿಯಾ ಆಟಗಾರರು ಈಗಾಗಲೇ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದು, ಇಂಗ್ಲೆಂಡ್ ಆರೋಗ್ಯ ಇಲಾಖೆಯಿಂದ ಎರಡನೇ ಡೋಸ್ ಹಾಕಲಾಗುತ್ತದೆ.

ಕೋವಿಡ್-19 ಲಸಿಕೆಯ ಎರಡನೇ ಡೋಸ್ ಪಡೆದ ನಟ ಸಲ್ಮಾನ್ ಖಾನ್
ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಕೋವಿಡ್-19 ಲಸಿಕೆಯ ಎರಡನೇ ಡೋಸ್ ಪಡೆದುಕೊಂಡಿದ್ದಾರೆ.ಮುಂಬೈಯ ದಾದರ್ ನಲ್ಲಿನ ಲಸಿಕಾ ಕೇಂದ್ರದಲ್ಲಿ ಸಹೋದರ ಸೊಹೈಲ್ ಖಾನ್ ಅವರೊಂದಿಗೆ ಸಲ್ಮಾನ್ ಖಾನ್ಕೋವಿಡ್-19 ಲಸಿಕೆಯ ಎರಡನೇ ಡೋಸ್ ಪಡೆದಿದ್ದಾರೆ.

ಮೇ 16 ರಿಂದ 31 ವೇಳೆಗೆ ರಾಜ್ಯಗಳಿಗೆ ಕೇಂದ್ರದಿಂದ 192 ಲಕ್ಷ ಡೋಸ್ ಕೋವಿಡ್ ಲಸಿಕೆ ಪೂರೈಕೆ: ಆರೋಗ್ಯ ಇಲಾಖೆ
ಮೇ 16 ರಿಂದ 31 ವೇಳೆಗೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರದಿಂದ 192 ಲಕ್ಷ ಡೋಸ್ ಕೋವಿಡ್ ಲಸಿಕೆ ರವಾನೆಯಾಗಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ನಿಮ್ಮ ಪಾಪದ ಹಣದಲ್ಲಿ ಲಸಿಕೆ ಪಡೆಯುವ ಅನಿವಾರ್ಯತೆ ಜನರಿಗಿಲ್ಲ: ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು
ಕೋವಿಡ್ ಲಸಿಕೆ ಪಡೆಯಲು 100 ಕೋಟಿ ರೂ ದೇಣಿಗೆ ನೀಡುವ ಕುರಿತು ಘೋಷಣೆ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿರುವ ಬಿಜೆಪಿ, ನಿಮ್ಮ ಪಾಪದ ಹಣದಲ್ಲಿ ಲಸಿಕೆ ಪಡೆಯುವ ಅನಿವಾರ್ಯತೆ ಜನರಿಗಿಲ್ಲ ಎಂದು ಹೇಳಿದೆ.

ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ 2, 3ನೇ ಹಂತದ ಕ್ಲಿನಿಕಲ್ ಟ್ರಯಲ್ಸ್ ಗೆ ತಜ್ಞರ ಸಮಿತಿ ಶಿಫಾರಸು
2 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ಬಳಕೆ ಕುರಿತ 2 ಮತ್ತು 3ನೇ ಹಂತದ ಪ್ರಯೋಗಕ್ಕೆ ತಜ್ಞರ ಸಮಿತಿ ಅನುಮೋದನೆ ನೀಡಿದೆ.

ಮುಂದಿನ ಮೂರು ದಿನಗಳಲ್ಲಿ ರಾಜ್ಯಗಳಿಗೆ ಹೆಚ್ಚುವರಿಯಾಗಿ 7 ಲಕ್ಷ ಡೋಸ್ ಕೋವಿಡ್ ಲಸಿಕೆ ರವಾನೆ: ಕೇಂದ್ರ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 90 ಲಕ್ಷಕ್ಕೂ ಹೆಚ್ಚು ಡೋಸ್ ಕೋವಿಡ್ -19 ಲಸಿಕೆ ಲಭ್ಯವಿದ್ದು, ಮುಂದಿನ ಮೂರು ದಿನಗಳಲ್ಲಿ ಹೆಚ್ಚುವರಿಯಾಗಿ 7 ಲಕ್ಷಕ್ಕೂ ಹೆಚ್ಚು ಡೋಸ್ ಕಳುಹಿಸಲಾಗುವುದು

12 ರಿಂದ 15 ವರ್ಷದವರಿಗೆ ಫಿಜರ್ ಕೋವಿಡ್-19 ಲಸಿಕೆ: ತುರ್ತು ಬಳಕೆಗೆ ಅಮೆರಿಕ ಸರ್ಕಾರ ಅನುಮತಿ
12 ರಿಂದ 15 ವರ್ಷದವರಿಗೆ ಫಿಜರ್–ಬಯೊಎನ್‌ಟೆಕ್ ಸಂಸ್ಥೆಗಳ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಸರ್ಕಾರ ಅನುಮತಿ ನೀಡಿದೆ.

