Covid-19 Vaccine

ಔಷಧಿ ಸಿಗುವವರೆಗೂ ಕೊರೋನಾ ವೈರಸ್ ಕುರಿತು ನಿರ್ಲಕ್ಷ್ಯತನ ಬೇಡ: ಪ್ರಧಾನಿ ಮೋದಿ ಎಚ್ಚರಿಕೆ
ಭಾರತದಲ್ಲಿ ದಿನಕಳೆದಂತೆ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವಂತೆಯೇ, ಔಷಧಿ ಸಿಗುವವರೆಗೂ ಕೊರೋನಾ ವೈರಸ್ ಕುರಿತು ನಿರ್ಲಕ್ಷ್ಯತನ ಬೇಡ ಎಂದು ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್-19 ಲಸಿಕೆ ಪ್ರಯೋಗಕ್ಕೆ ನೇಮಕಾತಿ ರದ್ದುಪಡಿಸುವಂತೆ ಸೆರಂ ಇನ್ಸ್ ಟಿಟ್ಯೂಗೆ ಡಿಸಿಜಿಐ ಆದೇಶ
ಅಸ್ಟ್ರಾಝೆನಕಾ ಫಾರ್ಮಾ ಕಂಪೆನಿ ಕೋವಿಡ್-19 ಲಸಿಕೆಯ ಪ್ರಯೋಗವನ್ನು ಬೇರೆ ದೇಶಗಳಲ್ಲಿ ನಿಲ್ಲಿಸಿರುವುದರಿಂದ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಜೊತೆ ಕೋವಿಡ್-19ನ ಎರಡು ಮತ್ತು ಮೂರನೇ ಹಂತದ ಪ್ರಯೋಗಕ್ಕೆ ನೇಮಕಾತಿಯನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸುವಂತೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಸೇರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ ಆದೇಶ ನೀಡಿದೆ

ಡಿಸಿಜಿಐ ಆದೇಶವನ್ನು ಪಾಲಿಸುತ್ತೇವೆ:ಶೋಕಾಸ್ ನೊಟೀಸ್ ಗೆ ಸೆರಂ ಇನ್ಸ್ ಟಿಟ್ಯೂಟ್ ಪ್ರತಿಕ್ರಿಯೆ
ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ)ದ ಆದೇಶ, ಸೂಚನೆಗಳಿಗೆ ಬದ್ಧವಾಗಿರುವುದಾಗಿ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ) ಫಾರ್ಮಾ ಕಂಪೆನಿ ಪ್ರತಿಕ್ರಿಯೆ ನೀಡಿದೆ.

2021ರ ಮಧ್ಯದವರೆಗೆ ಕೋವಿಡ್-19 ಸಾರ್ವತ್ರಿಕ ಲಸಿಕೆ ಲಭ್ಯವಾಗದು; ವಿಶ್ವ ಆರೋಗ್ಯ ಸಂಸ್ಥೆ
ಜಾಗತಿಕ 213 ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ 2021ರ ಮಧ್ಯಭಾಗದವರೆಗೂ ಲಸಿಕೆ ಲಭ್ಯವಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಜಗತ್ತಿನಲ್ಲೇ ಅತೀ ದೊಡ್ಡ ಪ್ರಯೋಗ: ಜಾನ್ಸನ್ ಅಂಡ್ ಜಾನ್ಸನ್‌ನಿಂದ 60,000 ಮಂದಿ ಮೇಲೆ ಮೂರನೇ ಹಂತದ ಲಸಿಕೆ ಪ್ರಯೋಗ
ಕೊರೋನಾ ವೈರಸ್ ಸೋಂಕಿಗೆ ಲಸಿಕೆ ಕಂಡುಹಿಡಿಯುವ ರೇಸ್ ನಲ್ಲಿ ಅಮೆರಿಕ ಮೂಲದ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಕೂಡ ಮುಂಚೂಣಿಯಲ್ಲಿದ್ದು, ಈ ಸಂಸ್ಥೆ ಇದೀಗ ಜಗತ್ತಿನ ಅತೀ ದೊಡ್ಡ ಪ್ರಮಾಣದ ಲಸಿಕೆ ಪ್ರಯೋಗ ನಡೆಸುತ್ತಿದೆ.

ಕೋವಿಡ್ ಗೆ ರಷ್ಯಾದಲ್ಲಿ ಮೊದಲ ಲಸಿಕೆ ಸಿದ್ಧವಾಗಿರುವುದು ವಿಶ್ವಕ್ಕೆ ಸಂತಸದ ಸುದ್ದಿ- ಡಾ.ಕೆ.ಸುಧಾಕರ್
ಜಾಗತಿಕ ಮಹಾಮಾರಿ ಕೋವಿಡ್-19 ಗೆ ವಿಶ್ವದ ಮೊದಲ ಲಸಿಕೆ ಸಿದ್ಧವಾಗಿದೆ ಎಂಬ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿಕೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸ್ವಾಗತಿಸಿದ್ದಾರೆ.

ರಷ್ಯಾಕೋವಿಡ್ ಲಸಿಕೆಯ ಸುರಕ್ಷತಾ ಡೇಟಾ ಪರಿಶೀಲನೆಗೆ ಮುಂದಾದ ಡಬ್ಲ್ಯುಎಚ್‌ಒ
ಕೋವಿಡ್ -19 ಲಸಿಕೆಯನ್ನು ರೋಗಿಗಳಿಗೆ ನೀಡಲು ಡಬ್ಲ್ಯುಎಚ್‌ಒ ಅನುಮೋದನೆಯ ಸ್ಟ್ಯಾಂಪ್ ಕಠಿಣ ಸುರಕ್ಷತಾ ದತ್ತಾಂಶ ಪರಿಶೀಲನೆಯ ಅಗತ್ಯವಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ, ರಷ್ಯಾ ಮಂಗಳವಾರ ತನ್ನ ಕೋವಿಡ್ ಲಸಿಕೆ ನೊಂದಾಯಿಸಿದ ಘೋಷಣೆ ಮಾಡಿದ ಬಳಿಕ ಡಬ್ಲ್ಯುಎಚ್‌ಒ ಈ ಹೇಳಿಕೆ ಹೊರಬಿದ್ದಿದೆ.

ವಿಶ್ವದ ಮೊದಲ ಕೋವಿಡ್-19 ಲಸಿಕೆ ಬಿಡುಗಡೆಗೆ ರಷ್ಯಾ ಸಜ್ಜು!
ಡಬ್ಲ್ಯುಎಚ್‌ಒ ಸೇರಿದಂತೆ ಹಲವಾರು ಕಡೆಗಳಿಂದ ಸುರಕ್ಷತೆಯ ಬಗೆಗಿನ ಕಾಳಜಿಯ ಹೊರತಾಗಿಯೂ ಅಕ್ಟೋಬರ್‌ನಲ್ಲಿ ಸಮೂಹ ವ್ಯಾಕ್ಸಿನೇಷನ್ (ಮಾಸ್ ವ್ಯಾಕ್ಸಿನೇಷನ್) ಪ್ರಾರಂಭಕ್ಕೆ ಮುನ್ನ ಈ ವಾರ ವಿಶ್ವದ ಮೊದಲ ಕೋವಿಡ್ -19 ಲಸಿಕೆಯನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ರಷ್ಯಾ ಮುಂದುವರಿಸಿದೆ ಎನ್ನಲಾಗಿದೆ.

ಕೊರೋನಾ ಲಸಿಕೆ ಹೆಸರಿನಲ್ಲಿ ರಾಷ್ಟ್ರೀಯತೆ ಬಿಂಬಿಸುವುದು ಸರಿಯಲ್ಲ: ವಿಶ್ವ ಆರೋಗ್ಯ ಸಂಸ್ಥೆ
ಕೊರೋನಾ ಲಸಿಕೆ ಹೆಸರಿನಲ್ಲಿ ರಾಷ್ಟ್ರೀಯತೆಯನ್ನು ಬಿಂಬಿಸುವುದು ಸರಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದೆ.

