COVID-19 test

ರಾಂಚಿಯ ರಿಮ್ಸ್ ಆಸ್ಪತ್ರೆಯಲ್ಲಿರುವ ಲಾಲು ಪ್ರಸಾದ್ ಯಾದವ್ ಗೆ ಕೊರೋನಾ ಟೆಸ್ಟ್
ಬಹುಕೋಟಿ ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ(ರಿಮ್ಸ್)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶನಿವಾರ ಅವರನ್ನು ಕೊವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ.

ಕೊರೋನಾ ಶಂಕಿತರ ಪರೀಕ್ಷೆ ತ್ವರಿತಗೊಳಿಸಿ ಸೋಂಕು ಹರಡುವುದನ್ನು ತಪ್ಪಿಸಿ: ಕರ್ನಾಟಕ ಸೇರಿ 8 ರಾಜ್ಯಗಳಿಗೆ ಕೇಂದ್ರ ಸೂಚನೆ
ಕೋವಿಡ್-19 ಕರ್ನಾಟಕದಲ್ಲಿ ಮತ್ತು ಇತರ 8 ರಾಜ್ಯಗಳಲ್ಲಿ ಹೇಗೆ ನಿರ್ವಹಿಸಲಾಗುತ್ತಿದೆ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ನಿನ್ನೆ ಪರಿಶೀಲನೆ ನಡೆಸಿದರು.

24 ಗಂಟೆಗಳಲ್ಲಿ ದೇಶಾದ್ಯಂತ 2,15,195 ಕೋವಿಡ್ ಪರೀಕ್ಷೆ, ಜೂನ್ 23ರವರೆಗೆ ಒಟ್ಟಾರೆ 73,52,911 ಸ್ಯಾಂಪಲ್ ಪರೀಕ್ಷೆ: ಐಸಿಎಂಆರ್
ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ 24 ಗಂಟೆಗಳಲ್ಲಿ ದೇಶಾದ್ಯಂತ 2,15,195 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.

ದೊಡ್ಡ ಪ್ರಮಾಣದಲ್ಲಿ ಕೊರೋನಾ ಟೆಸ್ಟ್ ನಡೆಸಲು ಸರ್ಕಾರ ಮುಂದಾಗಲಿ: ಪ್ರಿಯಾಂಕಾ ಗಾಂಧಿ
ಕೊರೋನಾವೈರಸ್ ಟೆಸ್ಟ್ ನ ಪ್ರಮಾಣವನ್ನು ದೇಶವು ತಕ್ಷಣದಿಂದ ಹೆಚ್ಚಳ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ.ಹಾಗೆಯೇ ಶೀಘ್ರ ಫಲಿತಾಂಶ ನೀಡುವಂತೆಯೂ ಸರ್ಕಾರ ಕ್ರಮ ಕಒಗೊಳ್ಳಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

