coronavirus

ಅಂತರರಾಷ್ಟ್ರೀಯ ಪ್ರಯಾಣಿಕರ ಕೋವಿಡ್ ಪರೀಕ್ಷೆ; 11 ಓಮಿಕ್ರಾನ್ ಉಪ-ರೂಪಾಂತರಗಳು ಪತ್ತೆ: ಮೂಲಗಳು
ಡಿಸೆಂಬರ್ 24 ಮತ್ತು ಜನವರಿ 3 ರ ನಡುವೆ ಅಂತರರಾಷ್ಟ್ರೀಯ ಪ್ರಯಾಣಿಕರ ಕೋವಿಡ್ ಪರೀಕ್ಷೆಯ ಸಮಯದಲ್ಲಿ ಹನ್ನೊಂದು ಓಮಿಕ್ರಾನ್ ಉಪ-ರೂಪಾಂತರಗಳು ಕಂಡುಬಂದಿವೆ ಮತ್ತು ಈ ಎಲ್ಲಾ ರೂಪಾಂತರಗಳು ಭಾರತದಲ್ಲಿ ಈ ಹಿಂದೆಯೇ ವರದಿಯಾಗಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.

ದೇಶದಲ್ಲಿ ಹೆಚ್ಚಾದ ಕೋವಿಡ್-19 ಭೀತಿ: 188 ಹೊಸ ಪ್ರಕರಣಗಳು, ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 188 ಹೊಸ ಕೊರೊನಾವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,554ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಭೀತಿ: 24 ಗಂಟೆಗಳಲ್ಲಿ 173 ಹೊಸ ಪ್ರಕರಣ, ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ
ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಾದ್ಯಂತ 173 ಕೊರೊನಾವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 2,670ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ದೇಶದಲ್ಲಿ ಹೆಚ್ಚಿದ ಕೋವಿಡ್ ಭೀತಿ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 97 ಸಾವಿರ ಬೂಸ್ಟರ್ ಡೋಸ್‍ಗಳನ್ನು ಪಡೆದ ಜನರು
ಓಮಿಕ್ರಾನ್‌ನ ರೂಂಪಾತರದಿಂದಾಗಿ ಜಾಗತಿಕ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ರಾಜ್ಯದಲ್ಲಿ ಕಳೆದ 10 ದಿನಗಳಲ್ಲಿ 97,036 ಬೂಸ್ಟರ್ ಡೋಸ್‌ಗಳನ್ನು ನೀಡಲಾಗಿದ್ದು, ಶುಕ್ರವಾರ 14,300 ಜನರು ತಮ್ಮ ಬೂಸ್ಟರ್ ಡೋಸ್‌ಗಳನ್ನು ತೆಗೆದುಕೊಂಡಿದ್ದಾರೆ.

ಚೀನಾದಿಂದ ಕೊಯಮತ್ತೂರಿಗೆ ವಾಪಸ್ಸಾದ ಸೇಲಂ ಉದ್ಯಮಿಗೆ ಕೋವಿಡ್ ಪಾಸಿಟಿವ್
ಚೀನಾದಿಂದ ಸಿಂಗಾಪುರದ ಮೂಲಕ ಇಲ್ಲಿಗೆ ಆಗಮಿಸಿದ ಸೇಲಂ ಹತ್ತಿರದ ಉದ್ಯಮಿಯೊಬ್ಬರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.

ವಿಶ್ವದಾದ್ಯಂತ ಕೋವಿಡ್ ಉಲ್ಬಣ: ಹೊಸ ವರ್ಷದಲ್ಲಿ ಈ 7 ದೇಶಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಿ
ಜಾಗತಿಕವಾಗಿ ಕೋವಿಡ್ ಪ್ರಕರಣಗಳ ಉಲ್ಬಣದ ನಡುವೆ, ಹೊಸ ವರ್ಷದ ಪ್ರವಾಸಕ್ಕೆ ಯೋಜಿಸುತ್ತಿರುವ ಪ್ರಯಾಣಿಕರು ಕನಿಷ್ಠ ಏಳು ದೇಶಗಳಿಂದ ದೂರ ಉಳಿಯಬೇಕಾಗುತ್ತದೆ. ಹಲವಾರು ದೇಶಗಳು ಸೋಂಕುಗಳು ಹೆಚ್ಚಾಗುವುದನ್ನು ತಡೆಯಲು ಹೊಸ ವರ್ಷದಲ್ಲಿ ಪ್ರಯಾಣ ನಿರ್ಬಂಧಗಳನ್ನು ವಿಧಿಸುವ ನಿರೀಕ್ಷೆಯಿದೆ.

ದೇಶದಲ್ಲಿ ಹೊಸ ಪ್ರಕರಣ ಸಂಖ್ಯೆಯಲ್ಲಿ ಇಂದೂ ಇಳಿಕೆ; ಏರಿಕೆಯಾಗುತ್ತಲೇ ಇರುವ ಕೋವಿಡ್ ರೂಪಾಂತರದ ಭೀತಿ
ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 157 ಹೊಸ ಕೊರೊನಾವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3,421ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಬಿಬಿಎಂಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ಚೀನಾದಿಂದ ಬಂದ ಪ್ರಯಾಣಿಕ, ಬೆಂಗಳೂರಿನಲ್ಲಿ ಪಾಲಿಕೆ ಹೈ ಅಲರ್ಟ್
ಚೀನಾದಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರಿಗೆ ಕೋವಿಡ್ ಪಾಸಿಟಿವ್ ಎಂದು ವರದಿಯಾಗಿದ್ದು, ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದ ಪ್ರಯಾಣಿಕ ನಂತರ ಆಗ್ರಾಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಚೀನಾದಿಂದ ಬಂದಿದ್ದ ವ್ಯಕ್ತಿಗೆ ಕೋವಿಡ್; ತಾಜ್ ಮಹಲ್, ಆಗ್ರಾ ಕೋಟೆಗೆ ಬರುವ ವಿದೇಶಿಗರ ಕೋವಿಡ್ ಪರೀಕ್ಷೆ
ಎರಡು ದಿನಗಳ ಹಿಂದೆ ಚೀನಾದಿಂದ ಹಿಂದಿರುಗಿದ 40 ವರ್ಷದ ವ್ಯಕ್ತಿಯೊಬ್ಬರಿಗೆ ಕೋವಿಡ್ ತಗುಲಿರುವುದು ಪತ್ತೆಯಾಗಿದೆ. ನಂತರ ಅವರನ್ನು ಇಲ್ಲಿನ ಅವರ ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಅರುಣ್ ಶ್ರೀವಾಸ್ತವ ಭಾನುವಾರ ತಿಳಿಸಿದ್ದಾರೆ.

