coronavirus

ಕೊರೋನಾ ವೈರಸ್: ಚೀನಾದಿಂದ ಭಾರತೀಯರ ಸ್ಥಳಾಂತರಕ್ಕೆ ಏರ್ ಇಂಡಿಯಾ ಸಜ್ಜು
ಮಾರಕ ಕೊರೋನಾ ವೈರಸ್'ನ ಕೇಂದ್ರ ಸ್ಥಳವಾಗಿರುವ ಚೀನಾದ ವುಹಾನ್ ನಗರದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಾಂಗ ಮಾಡುತ್ತಿರುವ 700ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ತೆರವುಗೊಳಿಸಲು ಸರ್ಕಾರ ಸಿದ್ಧತೆ ಆರಂಭಿಸಿದೆ.

ಚೀನಾದಲ್ಲಿ ವ್ಯಾಪಕಗೊಂಡ ಕೊರೋನಾ ವೈರಸ್: ಸಾವಿನ ಸಂಖ್ಯೆ 106ಕ್ಕೆ ಏರಿಕೆ, 1,300 ಮಂದಿಯಲ್ಲಿ ಸೋಂಕು ಪತ್ತೆ
ಚೀನಾದಲ್ಲಿ ತನ್ನ ಮೃದಂಗವನ್ನು ಮುಂದುವರೆಸಿರುವ ಮಾರಕ ಕೊರೋನಾ ವೈರಸ್ 106 ಮಂದಿಯನ್ನು ಬಲಿಪಡೆದುಕೊಂಡಿದ್ದು, ಮತ್ತೆ 1,300 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಚೀನಾದಿಂದ ಮರಳಿ ಭಾರತಕ್ಕೆ ಬಂದ ಬಿಹಾರ ಮಹಿಳೆಯಲ್ಲಿ ಕೊರೋನಾ ವೈರಸ್ ಶಂಕೆ
ಚೀನಾದಿಂದ ಮರಳಿ ಭಾರತಕ್ಕೆ ಬಂದಿರುವ ಬಿಹಾರ ಮೂಲದ ಮಹಿಳೆಯೊಬ್ಬರಲ್ಲಿ ಕೊರೋನಾ ವೈರಸ್ ಇರುವ ಶಂಕೆಗಳು ವ್ಯಕ್ತವಾಗಿದ್ದು, ಮಹಿಳೆ ಪಾಟ್ನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಸೋಮವಾರ ತಿಳಿದುಬಂದಿದೆ.

ಚೀನಾದಲ್ಲಿ ಕೊರೋನಾ ವೈರಸ್: ಸಾವಿನ ಸಂಖ್ಯೆ 80ಕ್ಕೆ ಏರಿಕೆ, 2744 ಮಂದಿಯಲ್ಲಿ ವೈರಾಣು ಪತ್ತೆ
ಮಾರಣಾಂತಿಕ ಕೊರೋನಾಸ್ ಸಾಂಕ್ರಾಮಿಕ ರೋಗದಿಂದ ಚೀನಾದಲ್ಲಿ ಈವರೆಗೂ ಮೃತಪಟ್ಟವರ ಸಂಖ್ಯೆ 80ಕ್ಕೆ ಏರಿಕೆ ಆಗಿದೆ. 2, 744 ಮಂದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ವರದಿ ನೀಡಿದೆ.

ಕೊರೋನಾ ವೈರಸ್ ಗೆ ಯಾವುದೇ ಭಾರತೀಯರೂ ತುತ್ತಾಗಿಲ್ಲ: ಎಂಇಎ ಸ್ಪಷ್ಟನೆ
ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್ ಗೆ ಯಾವುದೇ ಭಾರತೀಯರೂ ತುತ್ತಾಗಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ.

ನೇಪಾಳಕ್ಕೂ ತಟ್ಟಿದ ಕೊರೋನಾ ವೈರಸ್ ಭೀತಿ: ಇಂಡೋ-ನೇಪಾಳ ಗಡಿಯಲ್ಲಿ ಕಟ್ಟೆಚ್ಚರ
ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಇದೀಗ ನೇಪಾಳದಲ್ಲಿಯೂ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಇಂಡೋ-ನೇಪಾಳ ಗಡಿಯಲ್ಲಿ ಕೆಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿದುಬಂದಿದೆ.

ಕರೋನ ವೈರಸ್: ವುಹಾನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ವಾಪಸ್ಸಾಗುವುದಕ್ಕೆ ಅನುಮತಿ ನೀಡಲು ಚೀನಾಗೆ ಭಾರತ ಮನವಿ
ಚೀನಾದಲ್ಲಿ ಕಾಣಿಸಿಕೊಂಡಿರುವ ಕರೋನ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆ 250 ಭಾರತೀಯ ವಿದ್ಯಾರ್ಥಿಗಳು ವುಹಾನ್ ನಲ್ಲಿದ್ದು, ವಾಪಸ್ಸಾಗುವುದಕ್ಕೆ ಅನುಮತಿ ನೀಡಬೇಕೆಂದು ಚೀನಾಗೆ ಮನವಿ ಮಾಡಿದೆ.

ಕೊರೋನಾ ವೈರಸ್ ಭೀತಿ: ಏಳಕ್ಕೂ ಹೆಚ್ಚು ಜನರು ಅಬ್ಸರ್ವೆಷನಲ್ಲಿದ್ದಾರೆ- ಕೇಂದ್ರ ಸರ್ಕಾರ
ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಚೀನಾದಿಂದ ಆಗಮಿಸಿದ ಏಳಕ್ಕೂ ಹೆಚ್ಚು ಜನರನ್ನು ವೈದ್ಯಕೀಯ ಅಬ್ಸರ್ವೆಷನಲ್ಲಿ ಇರಿಸಲಾಗಿದೆ. ಆದಾಗ್ಯೂ, ದೇಶದಲ್ಲಿ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಇಂದು ತಿಳಿಸಿದ್ದಾರೆ.

ಚೀನಾದಲ್ಲಿ ಕರೋನ ವೈರಸ್ ಮಹಾಮಾರಿ: ಚಿಕಿತ್ಸೆ ನೀಡುತ್ತಿದ್ದ ವೈದ್ಯನೇ ಮಾರಣಾಂತಿಕ ಕಾಯಿಲೆಗೆ ಬಲಿ
ಚೀನಾದ ವುಹಾನ್ ನಗರದಲ್ಲಿ ಶನಿವಾರ ವೈದ್ಯರೊಬ್ಬರು ಕರೋನವೈರಸ್‌ಗೆ ಬಲಿಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

