coronavirus

ಕೊವಿದ್-19 ವಿರುದ್ಧದ ಹೋರಾಟಕ್ಕೆ 8.3 ಶತಕೋಟಿ ಡಾಲರ್ ತುರ್ತು ನಿಧಿ ಪ್ಯಾಕೇಜ್‌ಗೆ ಟ್ರಂಪ್ ಸಹಿ
ಕೊವಿದ್-19(ಕೊರೊನ ವೈರಸ್) ಹರಡುವುದನ್ನು ತಡೆಯಲು ಮತ್ತು ಸೋಂಕಿನ ಚಿಕಿತ್ಸೆಗಳಿಗಾಗಿ ಅಮೆರಿಕ ಸಂಸತ್ ಈ ವಾರ ಅಂಗೀಕರಿಸಿದ 8.3 ಶತಕೋಟಿ ಡಾಲರ್ ಗಳ ತುರ್ತು ನಿಧಿ ಪ್ಯಾಕೇಜ್ ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದಾರೆ.

ಕೊರೋನಾವೈರಸ್: ಗ್ರ್ಯಾಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿ 21 ಜನರಿಗೆ ಸೋಂಕು ದೃಢ
ಕ್ಯಾಲಿಫೋರ್ನಿಯಾ ಕರಾವಳಿಯ ಸಮುದ್ರದಲ್ಲಿ ನಿಂತಿರುವ ಗ್ರ್ಯಾಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿನ 21 ಜನರಿಗೆ ಮಾರಣಾಂತಿಕ ಕೊರೋನಾವೈರಸ್ ದೃಢಪಟ್ಟಿದೆ ಎಂದು ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಶನಿವಾರ ಖಚಿತಪಡಿಸಿದ್ದಾರೆ

ಕೊರೋನಾವೈರಸ್: ವಿಶ್ವದೆಲ್ಲೆಡೆ ಸಾವಿನ ಸಂಖ್ಯೆ 3,347ಕ್ಕೆ ಏರಿಕೆ, 98,441 ಮಂದಿಯಲ್ಲಿ ಸೋಂಕು ಪತ್ತೆ
ಕೊರೋನಾ ವೈರಸ್ ಮಹಾಮಾರಿ ಇಡೀ ಜಗತ್ತನ್ನು ಗಡ ಗಡ ನಡುಗಿಸುತ್ತಿದೆ. ಚೀನಾದ ವುಹಾನ್‌ನಲ್ಲಿ ಆರಂಭಗೊಂಡ ಈ ವೈರಸ್ ಪ್ರಪಂಚದಾದ್ಯಂತ ವ್ಯಾಪಿಸಿದೆ. ಅಲ್ಲದೆ, ಭಾರತದಲ್ಲೂ 31 ಸೋಂಕು ಪ್ರಕರಣಗಳು ವರದಿಯಾಗಿವೆ.

ಕೊರೋನಾ ವೈರಸ್: ಸಂತಾಪ ಪತ್ರಕ್ಕಾಗಿ ಮೋದಿಗೆ ಧನ್ಯವಾದ ಹೇಳಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್
ಮಾರಣಾಂತಿಕ ಕೊರೋನಾ ವೈರಸ್ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿದ್ದ ಸಂತಾಪ ಪತ್ರಕ್ಕೆ ಚೀನಾ ಧನ್ಯವಾದ ತಿಳಿಸಿದೆ.

ಥಾಯ್ಲೆಂಡ್, ಮಲೇಷ್ಯಾಗೆ ಹೋಗಿದ್ದ ದೆಹಲಿ ವ್ಯಕ್ತಿಗೆ ಕೊರೋನಾ: ಭಾರತದಲ್ಲಿ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆ
ಭಾರತದಲ್ಲಿ ಮಾರಣಾಂತಿಕ ಕೊರೋನಾ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದ್ದು, ಈ ಹಿಂದೆ ಮಲೇಷ್ಯಾ ಮತ್ತು ಥಾಯ್ಲೆಂಡ್ ಗೆ ಹೋಗಿದ್ದ ದೆಹಲಿ ಮೂಲದ ವ್ಯಕ್ತಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ಕಂಡಿಬಂದಿದೆ ಎಂದು ತಿಳಿದುಬಂದಿದೆ.

ವಿಶ್ವಾದ್ಯಂತ ಕೊರೋನಾ ವೈರಸ್ ಗೆ 3300 ಮಂದಿ ಬಲಿ: ವಿಶ್ವ ಆರೋಗ್ಯ ಸಂಸ್ಥೆ
ಮಾರಣಾಂತಿಕ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 3300ಕ್ಕೆ ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

ಸಿಲಿಕಾನ್ ಸಿಟಿ ನಿರಾಳ! ನಗರದಲ್ಲಿ ದಾಖಲಾಗಿದ್ದ ಐವರಿಗೆ ಕೊರೋನಾ ಬಾಧೆ ಇಲ್ಲ
ಕೊರೋನಾವೈರಸ್ ಶಂಕಿತ ಲಕ್ಷಣಗಳಿಂದ ಬಳಲುತ್ತಿದ್ದು ನಗರದ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸಸ್(ಆರ್ಜಿಐಸಿಡಿ) ಗೆ ದಾಖಲಾಗಿದ್ದ ಐವರಿಗೆ ಕೊರೋನಾ ಖಾಯಿಲೆ ಇಲ್ಲವೆಂದು ವರದಿ ಬಂದಿದೆ. ಈ ಮೂಲಕ ರೋಗಭೀತಿಯಿಂದ ಪರದಾಡುತ್ತಿದ್ದ ಸಿಲಿಕಾನ್ ಸಿಟಿ ಜನರು ತುಸು ನಿರಾಳವಾಗಿ ಉಸಿರಾಡುವಂತಾಗಿದೆ.

ಪೇಟಿಎಂ ಉದ್ಯೋಗಿಗೆ ಕೊರೋನಾ ವೈರಸ್ ಪಾಸಿಟಿವ್, ಗುರುಗ್ರಾಮ್ ಕಚೇರಿ 15 ದಿನ ಬಂದ್
ಪೇಟಿಎಂ ಉದ್ಯೋಗಿಯೊಬ್ಬರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಗುರುಗ್ರಾಮ್ ಪೇಟಿಎಂ ಕಚೇರಿಯನ್ನು 15 ದಿನಗಳ ಕಾಲ ಬಂದ್ ಮಾಡಲಾಗಿದೆ.

ಕೊರೋನಾವೈರಸ್: ಭಾರತದಲ್ಲಿ 30ಕ್ಕೇರಿದ ಸೋಂಕಿತರ ಸಂಖ್ಯೆ, ಐರೋಪ್ಯ ಒಕ್ಕೂಟ ಶೃಂಗಸಭೆ ಮುಂದೂಡಿಕೆ, ಪ್ರಧಾನಿ ಮೋದಿ ಬ್ರಸೆಲ್ಸ್ ಭೇಟಿ ರದ್ದು
ವಿಶ್ವದಾದ್ಯಂತ ಕೊರೋನವೈರಸ್ ಏಕಾಏಕಿ ಉಲ್ಪಣಿಸುತ್ತಿದ್ದು, ಭಾರತದಲ್ಲಿ ಈ ವರೆಗೂ ಮಾರಕ ಸೋಂಕಿಗೆ ತುತ್ತಾಗಿರುವವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಇದೇ ಸಂದರ್ಭದಲ್ಲಿ ಭಾರತ-ಐರೋಪ್ಯ ಒಕ್ಕೂಟ ಶೃಂಗಸಭೆ ಮುಂದೂಡಿಕೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬ್ರಸೆಲ್ಸ್ ಭೇಟಿ ಕೂಡ ರದ್ದಾಗಿದೆ ಎಂದು ತಿಳಿದುಬಂದಿದೆ.

