corona warriors

ಗ್ರಾಮೀಣಾಭಿವೃದ್ಧಿ ಇಲಾಖೆ ಸಿಬ್ಬಂದಿ ಕೊರೊನಾ ವಾರಿಯರ್ಸ್: ಸಿಎಂ ಯಡಿಯೂರಪ್ಪ ಘೋಷಣೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ, ಕಂದಾಯ ಇಲಾಖೆ ಸಿಬ್ಬಂದಿಗೆ ನೀಡುತ್ತಿರುವ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ದುಡಿದವರಿಗೆ ಗೌರವಧನ ಕೊಡಲು ಮೀನಾಮೇಷ ಎಣಿಸುತ್ತಿರುವ ಸರ್ಕಾರ 1250 ಕೋಟಿ ರೂ. ಪ್ಯಾಕೇಜ್ ನೀಡುವುದು ಭ್ರಮೆ?
ಶಿಕ್ಷಕರನ್ನು ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಬೇಕು. ಅವರನ್ನು ಚುನಾವಣೆ ಹಾಗೂ ಮತ್ಯಾವುದೋ ಕಾರಣಕ್ಕೆ ನಿಯೋಜಿಸಿದ ಸರ್ಕಾರವೇ ಈ ಸಾವುಗಳ ಸಂಪೂರ್ಣ ಹೊಣೆ ಹೊರಬೇಕು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಶಿಕ್ಷಕರನ್ನು ಕೊರೋನಾ ವಾರಿಯರ್ಸ್ ಎಂದು ಘೋಷಿಸಿ: ಬಸವರಾಜ ಹೊರಟ್ಟಿ
ಕೋವಿಡ್ ಎರಡನೇ ಅಲೆಯಲ್ಲಿ ಹಲವು ಶಿಕ್ಷಕರು ಸೋಂಕಿಗೆ ಬಲಿಯಾಗಿದ್ದಾರೆ ಹೀಗಾಗಿ ಅವರನ್ನು ಕೊರೋನಾ ವಾರಿಯರ್ಸ್ ಎಂದು ಘೋಷಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.

ಎರಡನೇ ಕೋವಿಡ್ ಅಲೆಗೆ ಏಪ್ರಿಲ್‌ನಲ್ಲಿ ಭಾರತದಾದ್ಯಂತ 34 ವೈದ್ಯರು ಸಾವು: ಐಎಂಎ
ಸಾಂಕ್ರಾಮಿಕ ರೋಗದ ಎರಡನೇ ಅಲೆ ದೇಶವನ್ನು ಅಪ್ಪಳಿಸಿಸಿರುವಂತೇ ಕೊರೋನಾವೈರಸ್ ಸೋಂಕಿನಿಂದಾಗಿ ಏಪ್ರಿಲ್ ತಿಂಗಳಲ್ಲಿ ದೇಶಾದ್ಯಂತ ಈವರೆಗೆ ಕನಿಷ್ಠ 34 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ಸೋಮವಾರ ಬಿಡುಗಡೆ ಮಾಡಿದ ವಿವರಗಳು ತಿಳಿಸಿವೆ.

ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ವಿಮಾ ಯೋಜನೆಯನ್ನು ಒಂದು ವರ್ಷಕ್ಕೆ ವಿಸ್ತರಿಸಿದ ಕೇಂದ್ರ!
ಕಳೆದ ತಿಂಗಳು ಅವಧಿ ಮುಗಿದಿದ್ದು ಮಧ್ಯಂತರ ವ್ಯವಸ್ಥೆಯಾಗಿ ಏಪ್ರಿಲ್ 24ರವರೆಗೆ ವಿಸ್ತರಿಸಲಾಗಿದ್ದ ಕೋವಿಡ್ ವಾರಿಯರ್ಸ್ ಗಳ 50 ಲಕ್ಷ ರೂ. ವಿಮಾ ರಕ್ಷಣೆಯನ್ನು ಒಂದು ವರ್ಷಕ್ಕೆ ವಿಸ್ತರಿಸಿದೆ.

ಕೋವಿಡ್-19 ಭಾರತದಲ್ಲಿ ವ್ಯಾಪಿಸಿ ಒಂದು ವರ್ಷವಾಯ್ತು, ಕೊರೋನಾ ಎರಡನೇ ಅಲೆ ಮತ್ತಷ್ಟು ಕಠಿಣ, ಸೋಂಕಿತರ ಸಂಖ್ಯೆ ಹೆಚ್ಚಳ
ಭಾರತಕ್ಕೆ ಕೊರೋನಾ ಕಾಲಿಟ್ಟು ವ್ಯಾಪಿಸಿ ಲಾಕ್ ಡೌನ್ ಹೇರಿಕೆಯಾಗಿ, ಜನತಾ ಕರ್ಫ್ಯೂ ಆಗಿ ಒಂದು ವರ್ಷ ಕಳೆದಿದೆ. ಸರಿಯಾಗಿ ಒಂದು ವರ್ಷ ಹಿಂದೆ ಲಕ್ಷಾಂತರ ಮಂದಿ ಭಾರತೀಯರು ಮನೆಯಲ್ಲಿರುವ ದೀಪಗಳನ್ನು ಆರಿಸಿ ಮೊಂಬತ್ತು ಹಚ್ಚಿ, ನಂದಾದೀಪ ಹಚ್ಚಿ ಕೊರೋನಾ ಸೋಂಕಿನ ಆರಂಭದ ದಿನಗಳಲ್ಲಿ ಸೌಹಾರ್ದಯುತವಾಗಿ ಕೊರೋನಾ ವಾರಿಯರ್ಸ್ ಗೆ ದೇಶದ ಜನ ಕೃತಜ್ಞತೆ ಸಲ್ಲಿಸಿದ್ದರು.

2020 ವರ್ಷದ ಕೊನೆಯ ದಿನವಾದ ಇಂದು ದೇಶದ ವೈದ್ಯರು, ಆರೋಗ್ಯ ಸಿಬ್ಬಂದಿ, ಕೊರೋನಾ ವಾರಿಯರ್ಸ್ ಗಳನ್ನು ನೆನೆಯಬೇಕು: ಪ್ರಧಾನಿ ಮೋದಿ
2020 ಕಳೆದು ನಾಳೆ 2021ನೇ ಇಸವಿಗೆ ಕಾಲಿಡುತ್ತಿದ್ದೇವೆ. ಹೊಸ ವರ್ಷದ ಹೊಸ್ತಿಲಿನಲ್ಲಿ ನಿಂತು ಗತಿಸಿದ ವರ್ಷದಲ್ಲಿ ವೈದ್ಯರು, ಆರೋಗ್ಯ ವಲಯದಲ್ಲಿ ಮುಂಚೂಣಿಯಾಗಿ ಸೇವೆ ಸಲ್ಲಿಸಿದ ಕೊರೋವಾ ವಾರಿಯರ್ಸ್ ಗಳ ಬಗ್ಗೆ ನೆನೆಯಬೇಕಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಕೊರೋನಾ ಲಸಿಕೆ: ಮೈಸೂರಿನಲ್ಲಿ 30 ಸಾವಿರ ಕೊರೋನಾ ವಾರಿಯರ್ಸ್ ಗೆ ಆದ್ಯತೆ
ವೈದ್ಯರು, ನರ್ಸ್,ಹಾಗೂ ಆರೋಗ್ಯ ಕಾರ್ಯಕರ್ತರು ಮತ್ತು ಲ್ಯಾಬ್ ಟೆಕ್ನಿಷಿಯನ್ ಗಳು ಸೇರಿದಂತೆ ಒಟ್ಟು 30 ಸಾವಿರ ಕೊರೋನಾ ವಾರಿಯರ್ಸ್ ಮೈಸೂರಿನಲ್ಲಿ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ.

ಕೊರೋನಾ ವಾರಿಯರ್ಸ್ ಗೆ ಕನ್ನಡ, ಕೊಂಕಣಿಯಲ್ಲಿ ಇಂಗ್ಲೆಂಡ್ ರೈಲ್ವೆ ಗೌರವ ನಮನ
ಭಾರತದಲ್ಲಿ ಕೊರೋನಾ ವಿರುದ್ಧ ಹೋರಾಡುತ್ತಿರುವ ಕೊರೋನಾ ಯೋಧರಿಗೆ ಕನ್ನಡ, ಕೊಂಕಣಿಯಲ್ಲಿ ಇಂಗ್ಲೆಂಡ್ ರೈಲ್ವೆ ಗೌರವ ನಮನ ಸಲ್ಲಿಸಿದೆ.

