Corona positive

ಮನೇಸರ್ ಮಾರುತಿ ಸೂಜಿಕಿ ಘಟಕದ ನೌಕರನಿಗೆ ಕೊರೋನಾ ಸೋಂಕು!
ಲಾಕ್ ಡೌನ್ ನಂತರ ಮಾರುತಿ ಸುಜೂಕಿ ಸಂಸ್ಥೆಯ ಮನೇಸರ್ ಘಟಕ ಪುನಃ ಕಾರ್ಯಾರಂಭ ಮಾಡಿದ 10 ದಿನಗಳಲ್ಲೇ ಅಲ್ಲಿನ ನೌಕರನೋರ್ವನಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಉಡುಪಿ- ಕಾರ್ಕಳದಲ್ಲಿ ಇಬ್ಬರು ಪೊಲೀಸರಿಗೆ ಕೊರೊನಾ ಸೋಂಕು: 3 ಠಾಣೆ ಸೀಲ್‌ಡೌನ್
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಹಾಗೂ ಅಜೆಕಾರು ಪೊಲೀಸ್ ಠಾಣೆಯ ಎಎಸ್‌ಐಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಾರ್ಕಳ ವೃತ್ತ ನಿರೀಕ್ಷಕರ ಕಚೇರಿ ಹಾಗೂ ಮೂರು ಪೊಲೀಸ್ ಠಾಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ಮೂಡಬಿದಿರೆ: ಕ್ವಾರಂಟೈನ್ ನಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗೆ ಕೊರೋನಾ ಸೋಂಕು ದೃಢ
ಕೊರೋನಾ ಇದೆ ಎಂಬ ಭಯದಿಂದ ಕ್ವಾರಂಟೈನ್ ನಲ್ಲಿದ್ದಾಗಲೇ ಆತ್ಮಹತ್ಯೆಗೆ ಶರಣಾಗಿದ್ದ ವ್ಯಕ್ತಿಗೆ ಕೋವಿಡ್ ಇರುವುದು ಸಾಬೀತಾಗಿದೆ.

ದುಬೈಯಿಂದ ಮಂಗಳೂರಿಗೆ ವಿಮಾನದಲ್ಲಿ ಬಂದಿಳಿದವರಲ್ಲಿ 20 ಮಂದಿಗೆ ಕೊರೋನಾ ಸೋಂಕು!
ಎರಡು ದಿನಗಳ ಹಿಂದೆ ಮಂಗಳೂರಿಗೆ ದುಬೈಯಿಂದ ಬಂದಿಳಿದ 20 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇನ್ನೂ 9 ಮಂದಿಯ ಶಂಕೆಯಿದ್ದು ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಬೆಂಗಳೂರು: ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ಸೋಂಕು; ನರ್ಸಿಂಗ್ ಹೋಂ ಸೀಲ್ ಡೌನ್
ಯಶವಂತಪುರ ಸಮೀಪದ ಮಂಗಳ ನರ್ಸಿಂಗ್ ಹೋಮ್‌ನಲ್ಲಿ ಚಿಕನ್ ಗುನ್ಯಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಕೊಲ್ಕತ್ತಾದ ಮಹಿಳೆಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ, ನರ್ಸಿಂಗ್ ಹೋಮ್ ಅನ್ನು ಸೀಲ್ ಡೌನ್ ಮಾಡಲಾಗಿದೆ.

ಮುಂಬಯಿಯಲ್ಲಿ ಸತ್ತ ಮಂಡ್ಯ ವ್ಯಕ್ತಿಯ 3 ಸಂಬಂಧಿಕರಿಗೆ ಕೊರೋನಾ: 20 ಚೆಕ್ ಪೋಸ್ಟ್ ಸಂಪರ್ಕಿಸಿದ್ದ ಆ್ಯಂಬುಲೆನ್ಸ್
ಸಕ್ಕರೆ ನಾಡು ಮಂಡ್ಯದಲ್ಲಿಯೂ ಕೊರೋನಾ ತನ್ನ ಅಟ್ಟಹಾಸ ಮುಂದುವರಿಸಿದೆ. ಶುಕ್ರವಾರ 8 ಹೊಸ ಪ್ರಕರಣಗಳು ದಾಖಲಾಗಿದ್ದು ಆತಂಕಕ್ಕೆ ಕಾರಣವಾಗಿದೆ.

ಚೆನ್ನೈ: ರಾಜೀವ್ ಗಾಂಧಿ ಆಸ್ಪತ್ರೆಯ ಮತ್ತಷ್ಟು ವೈದ್ಯರಿಗೆ ಕೊರೋನಾ ಪಾಸಿಟಿವ್; ಹಾಸ್ಟೆಲ್ ಬಂದ್
ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮತ್ತಷ್ಟು ವೈದ್ಯರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜು ಪುರುಷರ ಪಿಜಿ ಹಾಸ್ಟೆಲ್ ಮುಚ್ಚಲಾಗಿದೆ.

ಜಬಲ್ ಪುರ: ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೊರೋನಾ ಸೋಂಕಿತ ಅರೆಸ್ಟ್
ಜಬಲ್ ಪುರದಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೊರೋನಾ ಸೋಂಕಿತನನ್ನು ಎನ್ ಎಸ್ ಎ ಸಿಬ್ಬಂದಿ ಬಂಧಿಸಿದ್ದಾರೆ.

ಸೋಂಕಿತನ ಮಾಹಿತಿ ಪಡೆಲು ಹೋಗಿದ್ದ ಪೊಲೀಸ್ ಗೆ ಕೊರೋನಾ ಪಾಸಿಟಿವ್: ಹೋಮ್ ಕ್ವಾರಂಟೈನ್
ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಹುಬ್ಬಳ್ಳಿಯ ಮೊದಲ ಕೊರೋನಾ ಸೋಂಕಿತನ ಸಂಪರ್ಕದಲ್ಲಿದ್ದ ಪೊಲೀಸ್ ಗೆ ಸೋಂಕು ದೃಡ ಪಟ್ಟಿದೆ. ಹೀಗಾಗಿ ಅವರು ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ

