Congress vs BJP

ಕರ್ನಾಟಕ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ವಿರುದ್ಧ ಬಿಜೆಪಿ-ಜೆಡಿಎಸ್ ನಿಂದ ಜಂಟಿ ಅವಿಶ್ವಾಸ ನೋಟಿಸ್
10 ಬಿಜೆಪಿ ಸದಸ್ಯರನ್ನು ಅಧಿವೇಶನದಿಂದ ಅಮಾನತು ಮಾಡಿದ ಪ್ರಕರಣದ ಬೆನ್ನಲ್ಲೇ ಕರ್ನಾಟಕ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ವಿರುದ್ಧ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಬುಧವಾರ ವಿಧಾನಸಭೆ ಕಾರ್ಯದರ್ಶಿಗೆ ಜಂಟಿ ಅವಿಶ್ವಾಸ ನೋಟಿಸ್ ನೀಡಿದ್ದಾರೆ.

ಕುಟುಂಬವಷ್ಟೇ ಮುಖ್ಯ... ದೇಶ ಏನೂ ಅಲ್ಲ: ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ ನಡೆಯುತ್ತಿರುವ ಹಿನ್ನಲೆಯಲ್ಲಿ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ ಅವರಿಗೆ ಕುಟುಂಬವಷ್ಟೇ ಮುಖ್ಯ.. ದೇಶದ ಏನೂ ಅಲ್ಲ ಎಂದು ಕಿಡಿಕಾರಿದ್ದಾರೆ.

ಶಕ್ತಿ ಯೋಜನೆ ಎಫೆಕ್ಟ್?: 5 ಗಂಟೆಯಿಂದ ಕೇವಲ 40 ರೂ ಸಂಪಾದನೆ, ಪ್ರಯಾಣಿಕರಿಲ್ಲದೇ ಕಣ್ಣೀರು ಹಾಕಿದ ಆಟೋ ಚಾಲಕ!; ವಿಡಿಯೋ ವೈರಲ್
ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮಹಿಳೆಯ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಆರಂಭವಾದ ಬಳಿಕ ಆಟೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಕುಸಿತವಾಗಿದೆ ಎಂದು ಆರೋಪಿಸಿ ಆಟೋ ಚಾಲಕರೊಬ್ಬರು ಕಣ್ಣೀರು ಹಾಕಿರುವ ವಿಡಿಯೋ ವೈರಲ್ ಆಗುತ್ತಿದೆ.

ಶಕ್ತಿ ಯೋಜನೆಗೆ 'ಸ್ಮಾರ್ಟ್ ಕಾರ್ಡ್' ಕಡ್ಡಾಯ; ಕಾರ್ಡ್ ವಿತರಣೆಗೆ ಹೊಸ ಪೋರ್ಟಲ್ ಶೀಘ್ರದಲ್ಲೆ: ರಾಮಲಿಂಗಾ ರೆಡ್ಡಿ
ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ 'ಸ್ಮಾರ್ಟ್ ಕಾರ್ಡ್' ಕಡ್ಡಾಯವಾಗಲಿದ್ದು, ಶೀಘ್ರ ಕಾರ್ಡ್ ವಿತರಣೆಗೆ ಹೊಸ ಪೋರ್ಟಲ್ ಕಾರ್ಯಾರಂಭ ಮಾಡಲಿದೆ ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಮಂಗಳವಾರ ಹೇಳಿದ್ದಾರೆ.

ಕರ್ನಾಟಕ ಚುನಾವಣೆ 2023: ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಉತ್ಸಾಹ, ವಿಭಿನ್ನ ವಾತಾವರಣಕ್ಕೆ ಸಾಕ್ಷಿಯಾದ ಮತದಾನ
ಕರ್ನಾಟಕ ಚುನಾವಣೆ 2023ರ ಮತದಾನ ಪ್ರಕ್ರಿಯೆ ಹಲವು ವಿಭಿನ್ನ ವಾತಾವರಣಕ್ಕೆ ಸಾಕ್ಷಿಯಾಗಿದ್ದು, ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಉತ್ಸಾಹ ಇಮ್ಮಡಿಯಾಗಿದ್ದರೆ, ಮತದಾನ ಬಹಿಷ್ಕಾರದಂತಹ ಘಟನೆ ಕೂಡ ವರದಿಯಾಗಿತ್ತು.

ಬಹಿರಂಗ ಪ್ರಚಾರಕ್ಕೆ ಇಂದು ತೆರೆ, 3 ದಿನ ಮದ್ಯ ಮಾರಾಟ ಬಂದ್, ಧ್ವನಿ ವರ್ದಕ ಬಳಕೆ ಇಲ್ಲ.. ಚುನಾವಣಾ ಆಯೋಗ ಮಾರ್ಗಸೂಚಿ
ಕರ್ನಾಟಕ ವಿಧಾನಸಭೆ ಚುನಾವಣೆ ಅಖಾಡ ರಂಗೇರಿದ್ದು, ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳಿಗೆ ರಾಜ್ಯ ಚುನಾವಣಾ ಆಯೋದ ಮಹತ್ವದ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕರ್ನಾಟಕ ಚುನಾವಣೆಯ ನಿಖರ ಫಲಿತಾಂಶ ನುಡಿಯುವ ಜ್ಯೋತಿಷಿಗಳಿಗೆ 10 ಲಕ್ಷ ರೂ ಬಹುಮಾನ: ಡಾ.ನರೇಂದ್ರ ನಾಯಕ್ ಸವಾಲು!
ಕರ್ನಾಟಕ ಚುನಾವಣೆಯ ನಿಖರ ಫಲಿತಾಂಶ ನುಡಿಯುವ ಜ್ಯೋತಿಷಿಗಳಿಗೆ 10 ಲಕ್ಷ ರೂ ಬಹುಮಾನ ನೀಡಲಾಗುತ್ತದೆ ಎಂದು ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟ (ಎಫ್‌ಐಆರ್‌ಎ)ದ ಅಧ್ಯಕ್ಷ, ಮಂಗಳೂರಿನ ಡಾ.ನರೇಂದ್ರ ನಾಯಕ್ ಘೋಷಣೆ ಮಾಡಿದ್ದಾರೆ.

ಸಂದರ್ಶನ: ಸಿಎಂ ಗಾದಿ ಕುರಿತು ಖರ್ಗೆ ಅವರೇ ನಿರ್ಧರಿಸುತ್ತಾರೆ- ಡಿಕೆ ಶಿವಕುಮಾರ್
ಈ ಬಾರಿ ಕಾಂಗ್ರೆಸ್ ಸರಿಯಾದ ಚುನಾವಣಾ ತಂತ್ರಗಾರಿಕೆ ಮಾಡಿಕೊಂಡಿದ್ದು, 140ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆಲಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು: ಎಸ್ಎಂ ಕೃಷ್ಣ ಸಂಬಂಧಿ ಮನೆ ಮೇಲೆ ಐಟಿ ದಾಳಿ; ಶೋಧಕಾರ್ಯ ಮುಂದುವರಿಕೆ
ರಾಜ್ಯದಲ್ಲಿ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ಕರ್ನಾಟಕ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಸಂಬಂಧಿಕರ ಮನೆ ಸೇರಿದಂತೆ ಬೆಂಗಳೂರಿನ ಹಲವೆಡೆ ಐಟಿ ಆಧಿಕಾರಿಗಳು ದಾಳಿ ನಡೆಸಿದ್ದಾರೆ.

