Congress MLA

ಕಾಂಗ್ರೆಸ್ ಶಾಸಕನಿಗೆ ಗದರಿದ ಸಚಿವ: ವಿಪಕ್ಷಗಳ ಆಕ್ರೋಶ, ಧರಣಿಗೆ ಕಲಾಪ ಬಲಿ
ಶಾಸಕನಿಗೆ ಗದರಿದ ಆಡಳಿತಾರೂಢ ಪಕ್ಷದ ಸಚಿವರು ಗದರಿದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸದನದ ಬಾವಿಗಿಳಿದು ತೀವ್ರ ಪ್ರತಿಭಟನೆ ನಡೆಸಿದರು. ಈ ಧರಣಿ ಎರಡು ಬಾರಿ ಸದನ ಮುಂದೂಡಿಕೆಯಾಗುವಂತೆ ಮಾಡಿ ಸರಿ ಸುಮಾರು ಅರ್ಧ ದಿನದ ಕಲಾಪವನ್ನು ಬಲಿ ಪಡೆದುಕೊಂಡಿತು.

ಜಾರ್ಖಂಡ್: 2016ರ ಶೂಟೌಟ್ ಪ್ರಕರಣ- ಕಾಂಗ್ರೆಸ್ ಶಾಸಕಿ ಮಮತಾ ದೇವಿ ಸೇರಿ 12 ಮಂದಿಗೆ ಐದು ವರ್ಷಗಳ ಜೈಲು ಶಿಕ್ಷೆ
ಗೋಲಾ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಜಾರಿಬಾಗ್ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ರಾಮಗಢ ಕಾಂಗ್ರೆಸ್ ಶಾಸಕಿ ಮಮತಾ ದೇವಿಗೆ ಐಪಿಸಿ ಸೆಕ್ಷನ್ 307 ರಲ್ಲಿ 5 ವರ್ಷ ಜೈಲು ವಾಸ ಸೇರಿದಂತೆ 15 ಮಂದಿಗೆ ಶಿಕ್ಷೆಯನ್ನು ವಿಧಿಸಿದೆ.

ಅತ್ಯಾಚಾರದ ಆರೋಪದ ಮೇಲೆ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕನ ವಿರುದ್ಧ ಪ್ರಕರಣ ದಾಖಲು
38 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮತ್ತು ಹಲ್ಲೆ ನಡೆಸಿದ ಆರೋಪದ ಸಂಬಂಧ ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವರಾದ ಉಮಂಗ್ ಸಿಂಘಾರ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಗುಜರಾತ್ ಕಾಂಗ್ರೆಸ್ ಶಾಸಕನ ಮೇಲೆ ಬಿಜೆಪಿ ಕಾರ್ಯಕಾರಿಯಿಂದ ಹಲ್ಲೆ; ಎಫ್‌ಐಆರ್ ದಾಖಲು
ನವಸಾರಿ ಜಿಲ್ಲೆಯಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕ ಮತ್ತು ಬುಡಕಟ್ಟು ಜನಾಂಗದ ಮುಖಂಡ ಅನಂತ್ ಪಟೇಲ್ ಅವರ ಮೇಲೆ ಸ್ಥಳೀಯ ಬಿಜೆಪಿ ಕಾರ್ಯಕಾರಿ ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸಿದ್ದು, ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಗಾಂಧಿ ಕುಟುಂಬದ ಬೆಂಬಲಕ್ಕೆ ನಿಲ್ಲದಿದ್ದರೆ ತಿನ್ನುವ ಅನ್ನಕ್ಕೆ ಹುಳ ಬೀಳುತ್ತೆ: ರಮೇಶ್ ಕುಮಾರ್ 'ಋಣ ಸಂದಾಯ' ಹೇಳಿಕೆ ಬಿಜೆಪಿ ನಾಯಕರ ಅಸ್ತ್ರ!
ಗಾಂಧಿ ಕುಟುಂಬದ ಹೆಸರಿನಲ್ಲಿ ಮೂರ್ನಾಲ್ಕು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಮಾಡಿಕೊಂಡಿರುವ ನಾವೆಲ್ಲರೂ ಈಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತು, ಗಾಂಧಿ ಕುಟುಂಬದ ಋಣ ತೀರಿಸಬೇಕಿದೆ ಎಂದು ಕಾಂಗ್ರೆಸ್ ಶಾಸಕ ಕೆ.ಆರ್. ರಮೇಶ್ ಕುಮಾರ್ ನೀಡಿರುವ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ.

ಕ್ಷೇತ್ರದಲ್ಲಿ ನೀವು ಮಾಡಿದ ಕೆಲಸವೇನು? ಎಂದು ಕೇಳಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಶಾಸಕ, ವಿಡಿಯೋ ವೈರಲ್
ಸರ್, ನೀವು ಕ್ಷೇತ್ರದಲ್ಲಿ ಇಲ್ಲಿಯವರೆಗೆ ಏನೇನು ಕೆಲಸ ಮಾಡಿದ್ದೀರಿ? ಎಂದು ಯುವಕನೋರ್ವ ಪಂಜಾಬ್ನ ಕಾಂಗ್ರೆಸ್ ಶಾಸಕ ಜೋಗಿಂದರ್ ಪಾಲ್ ಅವರಿಗೆ ಪ್ರಶ್ನಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಶಾಸಕರು ಆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಕಾಂಗ್ರೆಸ್ ನ ಹಲವು ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ: ಯಡಿಯೂರಪ್ಪ ಹೊಸ ಬಾಂಬ್
ಹಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಗೆ ಐಟಿ ಶಾಕ್: ಚಾಮರಾಜಪೇಟೆ ಶಾಸಕರ ಮನೆ ಮೇಲೆ ದಾಳಿ, ಪರಿಶೀಲನೆ
ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣ ಬಳಿಯಿರುವ ಮನೆಯ ಮೇಲೆ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಅವರನ್ನು ಬೂಟಿನಿಂದ ಹೊಡೆಯಬೇಕು: ಅಮಿತ್ ಶಾ-ಮೋದಿ ವಿರುದ್ಧ ನಾಲಗೆ ಹರಿಬಿಟ್ಟ ರಾಜಸ್ತಾನ ಕಾಂಗ್ರೆಸ್ ಶಾಸಕ!
ರಾಜಸ್ತಾನ ಕಾಂಗ್ರೆಸ್ ಶಾಸಕ ಗಣೇಶ್ ಘೋಗ್ರಾ ಗುರುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಹರಿಹಾಯ್ದಿದ್ದಾರೆ.

