Congress government

ಮತ್ತೊಂದು 'ಐಎಎಸ್ ದಂಪತಿ' ಕೈಯಲ್ಲಿ ಶಕ್ತಿ ಸೌಧ: ರಜನೀಶ್ ಗೋಯೆಲ್ ಪತ್ನಿ ಶಾಲಿನಿ ಸರ್ಕಾರದ ಮುಂದಿನ ಮುಖ್ಯಕಾರ್ಯದರ್ಶಿ?
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್ ಜೂನ್‌ನಲ್ಲಿ ಮತ್ತು ಅವರ ಪತ್ನಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಆಗಸ್ಟ್‌ನಲ್ಲಿ ನಿವೃತ್ತಿಯಾಗಲಿದ್ದಾರೆ, ಇದರ ನಂತರ ಮತ್ತೊಂದು ಐಎಎಸ್ ಅಧಿಕಾರಿ ದಂಪತಿಗಳು ಮುಖ್ಯ ಹುದ್ದೆ ಅಲಂಕರಿಸುವ ನಿರೀಕ್ಷೆಯಲ್ಲಿದ್ದಾರೆ.

'ಶಕ್ತಿ' ಯೋಜನೆ ಉಚಿತ ಪ್ರಯಾಣವನ್ನಷ್ಟೇ ಅಲ್ಲ, ಮಹಿಳೆಯರಿಗೆ ಹೆಚ್ಚಿನ 'ಸ್ವಾತಂತ್ರ್ಯ'ದತ್ತ ದಾರಿ ಮಾಡಿಕೊಟ್ಟಿದೆ!
ರಾಜ್ಯದಲ್ಲಿ ಅಧಿಕಾರಕ್ಕೇರಿದರೆ ಐದು ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್, ಈ ಪೈಕಿ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ 'ಶಕ್ತಿ' ಯೋಜನೆಗೆ ಚಾಲನೆ ನೀಡಿದೆ. ಇತ್ತ ಮಹಿಳೆಯರು ಸಂತಸದೊಂದಿಗೆ ಬಸ್ಸುಗಳನ್ನು ಏರುತ್ತಿದ್ದರೆ, ಅತ್ತ ಕಾಂಗ್ರೆಸ್ ಕೂಡ ತಮ್ಮ ಭರವಸೆಯನ್ನು ಈಡೇರಿಸಿದ ಹರ್ಷದಲ್ಲಿದೆ.

ಬಿಜೆಪಿ ಅವಧಿಯ ರೈತ ವಿರೋಧಿ ನೀತಿಗಳನ್ನು ಹಿಂಪಡೆಯಬೇಕು: ಜೂನ್ 15ರಿಂದ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ 'ರೈತ ವಿರೋಧಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು' ಹಿಂಪಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ (ಕೆಆರ್‌ಆರ್‌ಎಸ್) ಜೂನ್ 15 ರಿಂದ ರಾಜ್ಯಾದ್ಯಂತ ‘ರೈತಾಗ್ರಹ ಧರಣಿ’ ಆರಂಭಿಸಲು ನಿರ್ಧರಿಸಿದೆ

ಆರ್‌ಎಸ್‌ಎಸ್‌ಗೆ ಭೂಮಿ ನೀಡಿರುವುದರ ಪರಿಶೀಲನೆ; ಕಾಂಗ್ರೆಸ್ ಸರ್ಕಾರ ಸೇಡಿನಿಂದ ವರ್ತಿಸಬಾರದು: ಅಶ್ವತ್ಥ್ ನಾರಾಯಣ
ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಆರ್‌ಎಸ್‌ಎಸ್‌ಗೆ ಮಂಜೂರು ಮಾಡಿದ ಭೂಮಿಯನ್ನು ಪರಿಶೀಲಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದ್ದು, ಕಾಂಗ್ರೆಸ್‌ನ ಈ ಕ್ರಮವನ್ನು ಬಿಜೆಪಿ ನಾಯಕ ಡಾ. ಸಿಎನ್ ಅಶ್ವತ್ಥ್ ನಾರಾಯಣ ಟೀಕಿಸಿದ್ದಾರೆ. ಸೇಡಿನಿಂದ ಈ ರೀತಿ ಮಾಡಬಾರದು ಎಂದು ಹೇಳಿದ್ದಾರೆ.

ಎಣ್ಣೆ ಪ್ರಿಯರಿಗೆ ಶಾಕ್; ಗ್ಯಾರಂಟಿಗಳ ಜಾರಿಗೆ ಸಿದ್ದರಾಮಯ್ಯ ಸರ್ಕಾರ ಮದ್ಯದ ಬೆಲೆ ಹೆಚ್ಚಿಸುವ ಸಾಧ್ಯತೆ
ರಾಜ್ಯದಲ್ಲಿ ತನ್ನ ಐದು ಚುನಾವಣಾ ಭರವಸೆಗಳನ್ನು ಪೂರೈಸಲು ಹೆಚ್ಚುವರಿ ಸಂಪನ್ಮೂಲಗಳನ್ನು ಸಂಗ್ರಹಿಸಲು ಕಾಂಗ್ರೆಸ್ ಸರ್ಕಾರವು ಮದ್ಯದ ಬೆಲೆಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ.

ರಾಜಕಾರಣಿಗಳ ಲಾಬಿಗೆ ಸೊಪ್ಪು ಹಾಕದ ಸರ್ಕಾರ: ಬಿಡಿಎ ಅಧ್ಯಕ್ಷರಾಗಿ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ನೇಮಕ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆಯಾಗಬೇಕು: ಲಕ್ಷ್ಮಿ ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂದು ತಿಂಗಳಾಗುತ್ತಾ ಬರುತ್ತಿದ್ದು ಗೋಹತ್ಯೆ ನಿಷೇಧ ಕಾಯ್ದೆ (Cow Slaughter Prohibition Act) ನಿಷೇಧ ಮತ್ತು ಕಾಂಗ್ರೆಸ್ ನ 5 ಗ್ಯಾರಂಟಿ ಯೋಜನೆಗಳ ಸೂಕ್ತ ಜಾರಿಗೆ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.

ಬಾಡಿಗೆ ಮನೆಗಳಲ್ಲಿ ವಾಸಿಸುವವರು ಸರ್ಕಾರದ 'ಗೃಹ ಜ್ಯೋತಿ' ಯೋಜನೆಗೆ ಅರ್ಹರು: ಇಂಧನ ಸಚಿವ ಕೆ ಜೆ ಜಾರ್ಜ್
ಬಾಡಿಗೆ ಮನೆಗಳಲ್ಲಿ ವಾಸಿಸುವವರು ಕೂಡ ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಗೆ ಅರ್ಹರಾಗಿರುತ್ತಾರೆ. ತಿಂಗಳಿಗೆ ಪ್ರತಿ ಮನೆಗೆ 200 ಯೂನಿಟ್‌ಗಳವರೆಗೆ ವಿದ್ಯುತ್ ನ್ನು ಉಚಿತವಾಗಿ ನೀಡುವ 'ಗೃಹ ಜ್ಯೋತಿ' ಖಾತರಿಗೆ ಅರ್ಹರಾಗಿರುತ್ತಾರೆ.

ಸಚಿವ ವೆಂಕಟೇಶ್ ಗೋವಧೆ ಹೇಳಿಕೆ ಖಂಡನೆ, ಜನರ ಕಿವಿಯಲ್ಲಿ ಹೂವಿಟ್ಟ ಸರ್ಕಾರ: ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ
ಕರ್ನಾಟಕದಲ್ಲಿ ವಿದ್ಯುತ್ ಬೆಲೆ ಏರಿಕೆ, ಗೋಹತ್ಯೆ ನಿಷೇಧ ಕಾಯ್ದೆ ರದ್ದತಿ, ಹಾಲಿಗೆ ಪ್ರೋತ್ಸಾಹ ಧನ ಕಡಿತ ವಿರೋಧಿಸಿ ವಿರೋಧ ಪಕ್ಷ ಬಿಜೆಪಿ ಬೀದಿಗಿಳಿದು ಹೋರಾಟ ನಡೆದಿದ್ದು ನಿನ್ನೆ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಇಂದು ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಪ್ರತಿಭಟನೆ ನಡೆಸುತ್ತಿದೆ.

