complaint

ನನ್ನ ನಾಟಕವನ್ನು ತಿರುಚಿದವರ ವಿರುದ್ಧ ಕ್ರಮ ಕೈಗೊಳ್ಳಿ: ಡಾ.ಚಂದ್ರಶೇಖರ ಕಂಬಾರ ಆಗ್ರಹ
ಮೈಸೂರಿನ ರಂಗಾಯಣದಲ್ಲಿ ನನ್ನ ನಾಟಕ ''ಸಾಂಬಶಿವ ಪ್ರಹಸನ''ವನ್ನು ನನ್ನ ಅನುಮತಿ ಇಲ್ಲದೆ ಪ್ರದರ್ಶಿಸಿದ್ದಲ್ಲದೆ ಅಸಹ್ಯಕರವಾಗಿ ಪ್ರದರ್ಶ ಮಾಡಲಾಗಿದ್ದು, ಇದಕ್ಕೆ ಕಾರಣರಾದ ಎಲ್ಲರ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರು ಆಗ್ರಹಿಸಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಕಾರು ಪಡೆದು ಸ್ನೇಹಿತನಿಗೆ ಕಿರಿಕ್- ಮೊಹಮದ್ ನಲಪಾಡ್ ವಿರುದ್ಧ ದೂರು
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ವಿರುದ್ದ ಸ್ನೇಹಿತನೇ ದೂರು ದಾಖಲಿಸಿದ್ದಾರೆ. ಉದ್ಯಮಿ ನಜೀರ್ ದೂರು ನೀಡಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಗಂಭೀರ ಸ್ವರೂಪವಲ್ಲದ ಪ್ರಕರಣ(NCR) ದಾಖಲಾಗಿದೆ.

ಕಂಪನಿ ಅಗೆದಿದ್ದ ಗುಂಡಿಗೆ ಬಿದ್ದ ಮಹಿಳೆ: ಏರ್ಟೆಲ್ ವಿರುದ್ಧ ದೂರು ದಾಖಲು
ಮಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಕೇಬಲ್ ರಿಪೇರಿ ಕಾರ್ಯಕ್ಕಾಗಿ ಕಂಪನಿ ಅಗೆದಿದ್ದ ಗುಂಡಿಗೆ ಮಹಿಳೆಯೊಬ್ಬರು ಬಿದ್ದಿದ್ದು, ಈ ಹಿನ್ನಲೆಯಲ್ಲಿ ದೂರಸಂಪರ್ಕ ಸೇವಾ ಸಂಸ್ಥೆ ಏರ್ಟೆಲ್ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಪೊಲೀಸರಿಗೆ ದೂರು ನೀಡಿದೆ.

ಕೋಳಿ ಕೂಗೋದ್ರರಿಂದ ತೊಂದರೆಯಾಗುತ್ತಿದೆ: ಬೆಂಗಳೂರು ಪೊಲೀಸ್ ಕಮೀಷನರ್ಗೆ ವಿಲಕ್ಷಣ ದೂರು!
ಪಕ್ಕದ ಮನೆಯವರ ಕೋಳಿ ಕೂಗುವುದರಿಂದ ರಾತ್ರಿಹೊತ್ತು ನಾವು ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ತುಂಬಾ ತೊಂದರೆಯಾಗುತ್ತಿದೆ ಎಂದು ಬೆಂಗಳೂರು ಪೊಲೀಸರಿಗೆ ವ್ಯಕ್ತಿಯೊಬ್ಬ ದೂರು ನೀಡಿದ್ದಾನೆ.

ಪತ್ನಿ ನನ್ನನ್ನು ಮತ್ತು ಪೋಷಕರನ್ನು ಮತಾಂತರಗೊಳ್ಳುವಂತೆ ಬಲವಂತ ಮಾಡುತ್ತಾಳೆ, ಹಿಂಸೆ ಕೊಡುತ್ತಾಳೆ: ಬೆಂಗಳೂರು ಯುವಕನ ಆರೋಪ
ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ತನಗೆ ಮತ್ತು ತನ್ನ ಹೆತ್ತವರಿಗೆ ಪತ್ನಿ ಒತ್ತಡ ಹಾಕುತ್ತಿದ್ದಾಳೆ ಎಂದು 28ರ ಹರೆಯದ ಯುವಕ ನೀಡಿರುವ ಖಾಸಗಿ ದೂರಿನ ತನಿಖೆ ನಡೆಸುವಂತೆ ಸಿಟಿ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ರಾಮನಗರ: ಧಾರ್ಮಿಕ ಮತಾಂತರದ ವಿರುದ್ಧ ದೂರು ಸಲ್ಲಿಸಿದ ಹಿಂದೂ ಜಾಗರಣ ವೇದಿಕೆ
ಹಿಂದೂ ಜಾಗರಣ ವೇದಿಕೆ ಮತ್ತು ಗ್ರಾಮಸ್ಥರು ಬುಧವಾರ ರಾಮನಗರ ಜಿಲ್ಲೆಯ ಫಾರ್ಮ್ ಹೌಸ್ನಲ್ಲಿ ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.

ಬೆಂಗಳೂರು: ಹೆಂಡತಿ ಚಿನ್ನಾಭರಣ ಕದ್ದಿದ್ದಾಳೆ, ದೂರು ದಾಖಲಿಸಿದ 70 ವರ್ಷದ ಪತಿ!
70ರ ಹರೆಯದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಆಭರಣಗಳನ್ನು ಕದ್ದಿದ್ದಾಳೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾನೆ. ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ವಿವಿ ಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತದಾರರ ಮಾಹಿತಿ ಕಳವು ಪ್ರಕರಣ: ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ಮತದಾರರ ಪಟ್ಟಿ ಪರಿಷ್ಕರಣೆ ಹಗರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ರಾಜ್ಯ ಕಾಂಗ್ರೆಸ್ ಶನಿವಾರ ದೂರು ನೀಡಿದೆ.

ವೋಟರ್ ಐಡಿ ಹಗರಣ: ಕಾಂಗ್ರೆಸ್ ನಾಯಕರಿಂದ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆ
ಮತದಾರರ ಸಮೀಕ್ಷೆ ಹೆಸರಲ್ಲಿ ಜನರ ಮಾಹಿತಿಯನ್ನು ಬಿಜೆಪಿ ಸರ್ಕಾರ ಕದಿಯುವ ಕೆಲಸ ಮಾಡಿದೆ, ಇದರ ವಿರುದ್ಧ ಸಿಎಂ ಬೊಮ್ಮಾಯಿ ಹಾಗೂ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ನಾಯಕರು ಇಂದು ಗುರುವಾರ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

