Compensation

ಕೊರೋನಾದಿಂದ ಸಾವಿಗೀಡಾಗುವ ಪೌರಕಾರ್ಮಿಕರಿಗೆ ರೂ.50 ಲಕ್ಷ ರೂ ಪರಿಹಾರ ಕೊಡಿ: ಹೆಚ್.ಡಿ. ಕುಮಾರಸ್ವಾಮಿ ಆಗ್ರಹ
ಕರ್ತವ್ಯ ನಿರತ ಪೌರಕಾರ್ಮಿಕರು ಕೊರೋನಾ ಸೋಂಕಿನಿಂದ ಸಾವಿಗೆ ತುತ್ತಾದರೆ ಅವರ ಅವಲಂಭಿತ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕೇಂದ್ರದಿಂದ ಜಿಎಸ್‌ಟಿ ಪರಿಹಾರ ಮೊತ್ತ ಬಿಡುಗಡೆ, ಕರ್ನಾಟಕಕ್ಕೆ 18,628 ಕೋಟಿ ರೂ.!
2019-20ನೇ ಸಾಲಿನಲ್ಲಿ ಕೇಂದ್ರದಿಂದ ರಾಜ್ಯಗಳಿಗೆ 1,65,302 ಕೋಟಿ ರೂ ಜಿಎಸ್ ಟಿ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದ್ದು, ಇದೇ ಅವಧಿಯಲ್ಲಿ 95,444 ಕೋಟಿ ರೂ. ಸೆಸ್(ಹೆಚ್ಚುವರಿ ಕರ) ಸಂಗ್ರಹಿಸಲಾಗಿದೆ.

ತಹಸೀಲ್ದಾರ್ ಹತ್ಯೆ: 25 ಲಕ್ಷ ರೂ. ಪರಿಹಾರ, ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಲು ಮುಖ್ಯಮಂತ್ರಿ ಆದೇಶ
ಕೋಲಾರ ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರು ಕರ್ತವ್ಯ ನಿರತ ಸಂದರ್ಭದಲ್ಲಿ ಹತ್ಯೆಯಾಗಿದ್ದು, ಈ ಸಂಬಂಧ ಸರ್ಕಾರಿ ನೌಕರರಿಗೆ ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ.

ಭಿನ್ನಾಭಿಪ್ರಾಯಗಳ ನಡುವೆಯೂ ಸಹಬಾಳ್ವೆಗೆ ಮುಂದಾಗಬೇಕು; ಅಮೆರಿಕಕ್ಕೆ ಚೀನಾ ಸಲಹೆ
ಚೀನಾ ಮತ್ತು ಅಮೆರಿಕ ದೇಶಗಳು ತಮ್ಮ ಶಾಂತಿಯುತ ಸಹಬಾಳ್ವೆಗೆ ಮಾರ್ಗಗಳನ್ನು ಕಂಡುಕೊಳ್ಳಬೇಕು ಮತ್ತು ವಿಭಿನ್ನ ರಾಜಕೀಯ ವ್ಯವಸ್ಥೆಗಳು ಮತ್ತು ಸಂಸ್ಕೃತಿಗಳ ನಡುವೆಯೂ ಈ ಸಹಬಾಳ್ವೆ ಸಾಧ್ಯ ಎಂಬುದನ್ನು ಸಾಬೀತುಪಡಿಸಬೇಕು ಎಂದು ಚೀನಾ ವಿದೇಶಿ ಸಚಿವರಾದ ವಾಂಗ್ ಯಿ ಹೇಳಿದ್ದಾರೆ.

ಖಾಸಗಿ ಶಾಲಾ ಸಿಬ್ಬಂದಿಗಳಿಗೂ ನೆರವು ನೀಡಿ: ಸರ್ಕಾರಕ್ಕೆ ಎಂಎಲ್ಸಿಗಳ ಆಗ್ರಹ
ಲಾಕ್'ಡೌನ್ ಬಳಿಕ ವೇತನ ಸಿಗದೆ ಖಾಸಗಿ ಶಾಲಾ ಸಿಬ್ಬಂದಿಗಳೂ ಕೂಡ ಸಂಕಷ್ಟ ಎದುರಿಸುತ್ತಿದ್ದು, ಅವರಿಗೂ ನೆರವು ನೀಡುವಂತೆ ವಿಧಾನ ಪರಿಷತ್ ಸದಸ್ಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಪ್ರತಿ ಹೆಕ್ಟೇರಿಗೆ 50 ಸಾವಿರ ಪರಿಹಾರ ಕೊಡಬೇಕು: ಮಾಜಿ ಸಚಿವ ಶಿವರಾಜ ತಂಗಡಗಿ ಆಗ್ರಹ
ಆಲಿಕಲ್ಲುಮಳೆ ಹಾಗೂ ಬಿರುಗಾಳಿಯಿಂದಾಗಿ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲ್ಲೂಕಿನ ಅಪಾರ ಪ್ರಮಾಣದ ಭತ್ತ ನಾಶವಾಗಿದೆ. ಕೂಡಲೇ ಸರ್ಕಾರ ಹೆಕ್ಟೇರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಒತ್ತಾಯಿಸಿದ್ದಾರೆ.

ಕೋವಿಡ್-19: ದೈನಂದಿನ ವೇತನ ಪಡೆಯುವವರಿಗಾದ ನಷ್ಟಕ್ಕೆ ಯೋಗಿ ಸರ್ಕಾರದಿಂದ ಪರಿಹಾರ!
ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಭಾರತದ ಸರ್ಕಾರ ಲಾಕ್ ಡೌನ್ ಕ್ರಮ ಕೈಗೊಂಡಿದ್ದು, ಇದರ ನೇರ, ಪರೋಕ್ಷ ಪರಿಣಾಮ ದೈನಂದಿನ ವೇತನಕ್ಕಾಗಿ ದುಡಿಯುವ ವರ್ಗದವರ ಮೇಲೆ ಬೀರಿದೆ.

ದೆಹಲಿ ಹಿಂಸಾಚಾರ: ಸಂತ್ರಸ್ತರಿಗೆ ಆಪ್ ನೀಡಿದ ಪರಿಹಾರದಲ್ಲಿ ಯಾವುದೇ ದೋಷವಿಲ್ಲ; 'ಹೈ' ಆದೇಶ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆದ ಹಿಂಸಾಚಾರದ ವೇಳೆ ಮೃತಪಟ್ಟವರಿಗೆ ಆಮ್ ಆದ್ಮಿ ಸರ್ಕಾರ ನೀಡಿರುವ ಪರಿಹಾರದಲ್ಲಿ ಯಾವುದೇ ತಪ್ಪಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದ್ದು, ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ಚಿರತೆ ದಾಳಿಯಿಂದ ಮೃತಪಟ್ಟ ಬಾಲಕನ ಕುಟುಂಬಕ್ಕೆ 7.5 ಲಕ್ಷ ಪರಿಹಾರ
ಚಿರತೆ ದಾಳಿಗೆ ತುತ್ತಾಗಿ ಮೃತಪಟ್ಟ ಐದು ವರ್ಷದ ಬಾಲಕನ ಕುಟುಂಬಕ್ಕೆ ರಾಜ್ಯ ಸರ್ಕಾರ 7.5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ

