CM Nitish Kumar

ಬಿಜೆಪಿ ಸಂಪರ್ಕದಲ್ಲಿ ನಿತೀಶ್, ಮತ್ತೆ ಕಮಲ ಹಿಡಿದರೂ ಆಶ್ಚರ್ಯವಿಲ್ಲ: ಪ್ರಶಾಂತ್ ಕಿಶೋರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಸಂಪರ್ಕದಲ್ಲಿರುವುದಾಗಿ ಬುಧವಾರ ಹೇಳಿರುವ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ಮತ್ತೆ ಅವರು ಕಮಲ ಹಿಡಿದರೂ ಆಶ್ಚರ್ಯವಿಲ್ಲ ಎಂದಿದ್ದಾರೆ.

ಸಿಎಂ ನಿತೀಶ್ ಕುಮಾರ್ ಇದ್ದ ದೋಣಿ ಸೇತುವೆ ಪಿಲ್ಲರ್ ಗೆ ಡಿಕ್ಕಿ: ಸ್ವಲ್ಪದರಲ್ಲೇ ಅಪಾಯದಿಂದ ಪಾರು!
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಸ್ವಲ್ಪದರಲ್ಲಿಯೇ ಅಪಾಯದಿಂದ ಪಾರಾಗಿದ್ದಾರೆ. ಗಂಗಾ ನದಿಯ ದಡದಲ್ಲಿರುವ ಛತ್ ಫಾಟ್ ನ್ನು ಪರಿಶೀಲಿಸಲು ಹೋದಾಗ ಅವರಿದ್ದ ದೋಣಿ ಜೆಪಿ ಸೇತುವೆ ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ.

ಕಾಂಗ್ರೆಸ್ ಜೊತೆ ಜೆಡಿಯು ವಿಲೀನಕ್ಕೆ ಪ್ರಶಾಂತ್ ಕಿಶೋರ್ ಹೇಳಿದ್ರು- ನಿತೀಶ್ ಕುಮಾರ್
ಕಾಂಗ್ರೆಸ್ ನೊಂದಿಗೆ ಜೆಡಿಯು ವಿಲೀನಗೊಳಿಸುವಂತೆ ಚುನಾವಣಾ ತಂತ್ರಗಾರ-ರಾಜಕಾರಣಿ ಪ್ರಶಾಂತ್ ಕಿಶೋರ್ ತನಗೆ ಹೇಳಿದ್ರು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.

ಬಿಹಾರದ ರಾಜಕೀಯ ಬೆಳವಣಿಗೆ ದೇಶದ ರಾಜಕೀಯದ ಮೇಲೆ ಪರಿಣಾಮ ಬೀರಲ್ಲ: ಪ್ರಶಾಂತ್ ಕಿಶೋರ್
ಬಿಹಾರದಲ್ಲಿನ ರಾಜಕೀಯ ಬೆಳವಣಿಗೆ ಆ ರಾಜ್ಯಕ್ಕೆ ಮಾತ್ರ ಸೀಮಿತವಾಗಿದ್ದು, ರಾಷ್ಟ್ರ ರಾಜಕೀಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬೆಂಗಾವಲು ವಾಹನದ ಮೇಲೆ ದಾಳಿ, ಕಲ್ಲು ತೂರಾಟ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೆಂಗಾವಲು ವಾಹನದ ಮೇಲೆ ಭಾನುವಾರ ಕಲ್ಲು ತೂರಾಟ ನಡೆದಿದೆ. ಪಾಟ್ನಾದಲ್ಲಿ ನಡೆದ ಈ ಘಟನೆ ವೇಳೆ ಬೆಂಗಾವಲು ವಾಹನ ಪಡೆಯಲ್ಲಿ ನಿತೀಶ್ ಕುಮಾರ್ ಇರಲಿಲ್ಲ ಎಂದು ತಿಳಿದುಬಂದಿದೆ.

ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ 2025 ರವರೆಗೂ ಮುಂದುವರಿಕೆ: ಧರ್ಮೇಂದ್ರ ಪ್ರಧಾನ್
ಬಿಹಾರದ ಎನ್ ಡಿಎ ಮೈತ್ರಿಕೂಟದಲ್ಲಿ ಎಲ್ಲವೂ ಚೆನ್ನಾಗಿದೆ. ಬಿಜೆಪಿ ಮತ್ತು ಜೆಡಿಯು ನಡುವಿನ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ತಮ್ಮ ಪ್ರಸ್ತುತ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಪ್ರತಿಪಾದಿಸಿದರು.

ಬಿಹಾರ ಸಿಎಂ ನಿತೀಶ್ ಕುಮಾರ್ ನನ್ನ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಿದ್ದಾರೆ: ಬಿಜೆಪಿ ಶಾಸಕಿ ಆರೋಪ
ಈ ವಾರದ ಆರಂಭದಲ್ಲಿ ನಡೆದ ಆಡಳಿತಾರೂಢ ಎನ್‌ಡಿಎಯ ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಿದ್ದಾರೆ ಎಂದು ಬಿಹಾರದ ಬಿಜೆಪಿ ಶಾಸಕಿಯೊಬ್ಬರು ಶುಕ್ರವಾರ ಆರೋಪಿಸಿದ್ದಾರೆ.

ಸಿಎಂ ನಿತೀಶ್ ರನ್ನು ತೃಪ್ತಿಪಡಿಸಲು ಪ್ರಧಾನಿ ನನ್ನ ವಿರುದ್ಧ ಮಾತನಾಡಲು ಮುಕ್ತವಾಗಿದ್ದಾರೆ: ಚಿರಾಗ್ ಪಾಸ್ವಾನ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತೃಪ್ತಿಪಡಿಸಲು ಪ್ರಧಾನಿ ನರೇಂದ್ರ ಮೋದಿ ತಮ್ಮ ವಿರುದ್ಧ ಏನು ಬೇಕಾದರೂ ಹೇಳಬಹುದು ಎಂದು ಲೋಕ ಜನಶಕ್ತಿ ಪಾರ್ಟಿ(ಎಲ್ ಜೆಪಿ)ಯ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಬಿಜೆಪಿ ಶಾಸಕನಿಗೆ ಅಕ್ರಮವಾಗಿ ಸಂಚಾರಿ ಪಾಸ್; ಬಿಹಾರದಲ್ಲಿ ಅಧಿಕಾರಿ ಅಮಾನತು!
ಶಾಸಕನ ಮಗಳನ್ನು ಕರೆತರಲು ಅಕ್ರಮವಾಗಿ ಸಂಚಾರಿ ಪಾಸ್ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ.

