CM Mamata Banerjee

ತಾರಕಕ್ಕೇರಿದ ಬಂಗಾಳ ವೈದ್ಯರ ಪ್ರತಿಭಟನೆ, 43 ವೈದ್ಯರಿಂದ ರಾಜಿನಾಮೆ!
ಪಶ್ಚಿಮ ಬಂಗಾಳದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ವೈದ್ಯರ ಪ್ರತಿಭಟನೆ ತಾರಕಕ್ಕೇರಿದ್ದು, ಸರ್ಕಾರದ ಮಧ್ಯ ಪ್ರವೇಶದಿಂದಲೂ ತೃಪ್ತರಾಗದ ವೈದ್ಯರು ಇದೀಗ ರಾಜಿನಾಮೆ ನೀಡುವ ಹಂತಕ್ಕೆ ಬಂದಿದ್ದಾರೆ.

ಇವಿಎಂಗಳ ಮಾಹಿತಿ ಪತ್ತೆಗೆ ಸತ್ಯಶೋಧನಾ ಸಮಿತಿ ರಚಿಸಬೇಕು- ಮಮತಾ ಬ್ಯಾನರ್ಜಿ
ಲೋಕಸಭಾ ಚುನಾವಣೆಯಲ್ಲಿ ಬಳಸಲಾದ ವಿಇಎಂಗಳ ವಿಶ್ವಾಸಾರ್ಹತೆ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದು, ಮತ್ತೆ ಬ್ಯಾಲೆಟ್ ಕಾಗದದಲ್ಲಿ ಚುನಾವಣೆಗಾಗಿ ಪ್ರತಿಪಕ್ಷಗಳು ಒಗ್ಗಟ್ಟಾಗಿ ಹೋರಾಡುವಂತೆ ಆಗ್ರಹಿಸಿದ್ದಾರೆ.

ಪಶ್ಚಿಮ ಬಂಗಾಳ: ದೀದಿಗೆ 10 ಲಕ್ಷ ಜೈ ಶ್ರೀ ರಾಮ್ ಅಂಚೆ ಕಾರ್ಡ್ಸ್ ರವಾನೆ- ಬಿಜೆಪಿ ಮುಖಂಡ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಜೈ ಶ್ರೀರಾಮ್ ಎಂದು ಬರೆದಿರುವ 10 ಲಕ್ಷ ಅಂಚೆ ಕಾರ್ಡ್ ಗಳನ್ನು ರವಾನಿಸಲಾಗುವುದು ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

ಶಿಲ್ಲಾಂಗ್: ಸಿಬಿಐ ನಿಂದ ಕೋಲ್ಕತಾ ಪೊಲೀಸ್ ಆಯುಕ್ತರ ತೀವ್ರ ವಿಚಾರಣೆ
ಶಾರದಾ ಚಿಟ್ ಫಂಡ್ ಮತ್ತು ರೋಸ್ ವ್ಯಾಲಿ ಪಾಂಝಿ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಶಿಲ್ಲಾಂಗ್ ನಲ್ಲಿ ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.

ಮೋದಿ ವರ್ಸಸ್ ದೀದಿ: 3ನೇ ದಿನಕ್ಕೆ ಕಾಲಿಟ್ಟ ಸಿಎಂ ಧರಣಿ, ವಿಪಕ್ಷ ನಾಯಕರ ಸಾಥ್
ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ನಡೆಸುತ್ತಿರುವ ಅಹೋರಾತ್ರಿ ಧರಣಿ 2ನೇ ದಿನಕ್ಕೆ ಕಾಲಿಟ್ಟಿದ್ದು, ದೀದಿ ಧರಣಿಗೆ ಪ್ರತಿಪಕ್ಷ ನಾಯಕರುಗಳು ಸಾಥ್ ನೀಡಿದ್ದಾರೆ.
ಸಿಬಿಐಗೆ ಬಂಗಾಳ ಪೊಲೀಸ್ ತಿರುಗೇಟು: ಸಿಆರ್ ಪಿಸಿ ಅಡಿ ಅಧಿಕಾರಿಗೆ ನೋಟಿಸ್ ಜಾರಿ
ಪಶ್ಚಿಮ ಬಂಗಾಳದ ಪೊಲೀಸ್ ವರ್ಸಸ್ ಸಿಬಿಐ ಹೈಡ್ರಾಮ ಮತ್ತೊಂದು ತಿರುವು ಪಡೆದಿದ್ದು, ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಸಿಬಿಐ ವಿರುದ್ಧ ಕೊಲ್ಕತಾ ಹೈಕೋರ್ಟ್ನಲ್ಲಿ ದೂರು ದಾಖಲಿಸುವ ಮೂಲಕ ಪಶ್ಚಿಮ ಬಂಗಾಳ ಪೊಲೀಸರು ತಿರುಗೇಟು ನೀಡಿದ್ದಾರೆ.

ಕೋಲ್ಕತಾದ ಎಲ್ಲ ಸಿಬಿಐ ಅಧಿಕಾರಿಗಳ ಮನೆಗೆ ಭದ್ರತೆಗೆ ಅರೆಸೇನಾ ಪಡೆ ನಿಯೋಜನೆ
ಕೋಲ್ಕತಾ ಪೊಲೀಸರಿಂದಲೇ ಜೀವಭಯದ ಕುರಿತು ಸಿಬಿಐ ಅಧಿಕಾರಿ ಪಂಕಜ್ ಕುಮಾರ್ ಶ್ರೀವಾಸ್ತವ್ ಅವರು ಆತಂಕ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಎಲ್ಲ ಸಿಬಿಐ ಅಧಿಕಾರಿಗಳ ಮನೆ ಹಾಗೂ ಕಚೇರಿಗೆ ಕೇಂದ್ರ ಸರ್ಕಾರ ಅರೆಸೇನಾ ಪಡೆಯನ್ನು ಭದ್ರತೆಗೆ ನಿಯೋಜಿಸಿದೆ ಎಂದು ತಿಳಿದುಬಂದಿದೆ.

ಕೋಲ್ಕತಾ ಪೊಲೀಸರ ನೋಟಿಸ್ಗೆ ಉತ್ತರಿಸುವ ಮುನ್ನ ಕಾನೂನು ತಜ್ಞರ ಸಲಹೆ ಪಡೆಯುತ್ತೇವೆ: ಸಿಬಿಐ
ಪಶ್ಚಿಮ ಬಂಗಾಳದ ಪೊಲೀಸರು ಸಿಬಿಐ ಅಧಿಕಾರಿ ಪಂಕಜ್ ಕುಮಾರ್ ಶ್ರೀವಾಸ್ತವ್ ಅವರಿಗೆ ನೀಡಿರುವ ನೋಟಿಸ್ ಗೆ ಕಾನೂನು ತಜ್ಞರನ್ನು ಸಂಪರ್ಕಿಸಿ ಬಳಿಕ ಉತ್ತರ ನೀಡುತ್ತೇವೆ ಎಂದು ಸಿಬಿಐ ಸ್ಪಷ್ಟಪಡಿಸಿದೆ.

ಸಿಬಿಐ-ಬಂಗಾಳ ಪೊಲೀಸ್ ಹೈಡ್ರಾಮ; ಕೇಂದ್ರ ಸರ್ಕಾರದ ವಿರುದ್ಧ ಧರಣಿ ಕುಳಿತ ಸಿಎಂ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು, ಕೇಂದ್ರ ಸರ್ಕಾರದ ವಿರುದ್ಧ ಸ್ವತಃ ಸಿಎಂ ಮಮತಾ ಬ್ಯಾನರ್ಜಿ ಅಹೋರಾತ್ರಿ ಧರಣಿ ನಡೆಸಿದ್ದಾರೆ.

