Cinema

ಕಿರುತೆರೆಯಿಂದ ಬೆಳ್ಳಿತೆರೆಗೆ 'ಪಾರು' ಧಾರಾವಾಹಿ ಶರತ್ ಪದ್ಮನಾಭ ಎಂಟ್ರಿ!
ಈ ಹಿಂದೆ ಹಲವು ನಾಯಕರು ಕಿರುತೆರೆಯಿಂದ ಬೆಳ್ಳಿತೆರೆಗೆ ಪ್ರವೇಶಿಸಿ ಯಶಸ್ಸು ಕಂಡಿದ್ದಾರೆ, ಅವರ ಪಟ್ಟಿಗೆ ಈಗ ನಟ ಶರತ್ ಪದ್ಮನಾಭ ಸೇರುತ್ತಿದ್ದಾರೆ ಪಾರು ಧಾರಾವಾಹಿಯಲ್ಲಿನ ಜನಪ್ರಿಯ ಪಾತ್ರಕ್ಕೆ ಹೆಸರುವಾಸಿಯಾದ ನಟ, ಈಗ ವರ್ಧನ್ ಎಂಹೆಚ್ ಅವರ ಸಸ್ಪೆನ್ಸ್ ಥ್ರಿಲ್ಲರ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ಸಿನಿಮಾಗಳತ್ತ ಗಮನಹರಿಸಲು ಕಿರುತೆರೆಗೆ ಮೇಘಾ ಶೆಟ್ಟಿ ವಿದಾಯ: 'ಜೊತೆಜೊತೆ'ಯಲ್ಲಿ ಸೀರಿಯಲ್ ಗೆ ಗುಡ್ ಬೈ!
ಕಿರುತೆರೆಯ ಜನಪ್ರಿಯ ಟಿವಿ ಧಾರಾವಾಹಿಯಾದ ಜೊತೆ ಜೊತೆಯಲ್ಲಿ ಸೀರಿಯಲ್ ನ ಅಂತಿಮ ದೃಶ್ಯಗಳನ್ನು ಚಿತ್ರೀಕರಿಸಲು ತಯಾರಿ ನಡೆಯುತ್ತಿದೆ. ಜೊತೆಜೊತೆಯಲಿ ಸೀರಿಯಲ್ ನಟಿ ಮೇಘಾ ಶೆಟ್ಟಿ ಭಾವುಕರಾಗಿದ್ದಾರೆ.

ಮಹಿಳೆಯರ ಹತ್ಯೆಯ ಹಿಂದಿನ ಕಥನವೇ ‘ಕ್ರೀಮ್’ ಸಿನಿಮಾ
ಅಗ್ನಿ ಶ್ರೀಧರ್ ಕಥೆ ಹಾಗೂ ಸಂಭಾಷಣೆ ಬರೆದಿರುವ, ದೇವೇಂದ್ರ ಡಿ.ಕೆ ನಿರ್ಮಿಸಿರುವ ಹಾಗೂ ಅಭಿಷೇಕ್ ಬಸಂತ್ ನಿರ್ದೇಶನದ “ಕ್ರೀಮ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್‌ನ್ ಹಂತದಲ್ಲಿದ್ದು, ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ.

ದಶಕದ ವಿರಾಮದ ನಂತರ ಮತ್ತೆ ನಟನೆಯತ್ತ ಸಂಗೀತ ನಿರ್ದೇಶಕ ಗುರುಕಿರಣ್!
ಖ್ಯಾತ ಸಂಗೀತ ಸಂಯೋಜಕ ಗುರುಕಿರಣ್ ಅವರು ನಟನೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ, ವಿರಾಮದ ನಂತರ ಮತ್ತೆ ಕ್ಯಾಮೆರಾ ಎದುರಿಸಲು ಸಜ್ಜಾಗಿದ್ದಾರೆ. ವಿಷ್ಣುವರ್ಧನ್ ಅಭಿನಯದ ಏಕದಂತ (2007) ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

ಕೆ.ಶಿವರುದ್ರಯ್ಯ ನಿರ್ದೇಶನದ ವಿಭಿನ್ನ ಕಥೆಯ 'ಸಿಗ್ನಲ್ ಮ್ಯಾನ್ 1971' ಬಿಡುಗಡೆಗೆ ಸಿದ್ಧ!
ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಮತ್ತು ವನ್ಯಜೀವಿ ಛಾಯಾಗ್ರಾಹಕ ಕೆ ಶಿವರುದ್ರಯ್ಯ ಅವರ ಮುಂದಿನ ಸಿಗ್ನಲ್ ಮ್ಯಾನ್ -1971 ಸಿನಿಮಾ ನಡೆಯುತ್ತಿರುವ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಬಿಗ್ ಬಜೆಟ್ ಸಿನಿಮಾ ನಿರ್ದೇಶನಕ್ಕಿಳಿದ ರಾಜ್ ಬಿ ಶೆಟ್ಟಿ: 'ಟೋಬಿ' ಟೈಟಲ್ ಫಿಕ್ಸ್!
ಆದಷ್ಟು ಕಡಿಮೆ ಬಜೆಟ್ ನಲ್ಲಿ ಚಿತ್ರೀಕರಣ ಮುಗಿಸುವುದು ರಾಜ್ ಬಿ ಶೆಟ್ಟಿ ಶೈಲಿ. ಅದೇ ಪ್ರಕಾರ ಅವರು ಸ್ವಾತಿ ಮುತ್ತಿನ ಮಳೆ ಸಿನಿಮಾ ಶೂಟಿಂಗ್ ಮುಗಿಸಿದ್ದಲ್ಲದೇ ಸೈಲೆಂಟಾಗಿ ಟೋಬಿ ಸಿನಿಮಾ ಕೆಲಸವನ್ನೂ ಮುಗಿಸಿದ್ದಾರೆ.

ಸೆಟ್ಟೇರುವ ಮುನ್ನವೇ ಡ್ರಾಪ್: ಉರಿಗೌಡ-ನಂಜೇಗೌಡ ಸಿನಿಮಾ ನಿರ್ಮಾಣ ಯೋಜನೆ ಕೈಬಿಟ್ಟ ಸಚಿವ ಮುನಿರತ್ನ
ಸೆಟ್ಟೇರುವ ಮುನ್ನವೇ ಸಿನಿಮಾ ಡ್ರಾಪ್ ಆಗಿದೆ. ಇತ್ತೀಚೆಗೆ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಉರಿಗೌಡ ನಂಜೇಗೌಡ ಶೀರ್ಷಿಕೆಯಲ್ಲಿ ಸಿನಿಮಾ ಮಾಡುವುದಾಗಿ ತೋಟಗಾರಿಕೆ ಸಚಿವ ಮುನಿರತ್ನ ಘೋಷಿಸಿದ್ದರು.

ಉರಿಗೌಡ, ನಂಜೇಗೌಡ ಎಂಬ ಕಲ್ಪಿತ ಹೆಸರುಗಳ ಸೃಷ್ಟಿ, ಸಿನಿಮಾ ಮಾಡುವ ದುರುಳ ಐಡಿಯಾ, ಒಕ್ಕಲಿಗರ ಮೇಲೆ ಬೀರುತ್ತಿರುವ ವಕ್ರದೃಷ್ಟಿ!
ಕಲ್ಪಿತಕಥೆ, ಸುಳ್ಳುಗಳಿಂದಲೇ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತಿ ಕರ್ನಾಟಕವನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವ ಬಿಜೆಪಿಯ ವಕ್ರದೃಷ್ಟಿ ಸದ್ಯಕ್ಕೆ ಒಕ್ಕಲಿಗರ ಮೇಲೆ ಬಿದ್ದಿದೆ. ಸ್ವಾಭಿಮಾನಿ ಒಕ್ಕಲಿಗರನ್ನು ಹೇಗಾದರೂ ಹಳ್ಳ ಹಿಡಿಸಲೆಬೇಕೆಂಬ ಹಿಡೆನ್ ಅಜೆಂಡಾ ಬಿಜೆಪಿಗೆ ಇರುವುದಂತೂ ಸತ್ಯ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ತ್ರಿಕೋನ ಪ್ರೇಮಕಥೆಯಲ್ಲಿ ಪೃಥ್ವಿ ಅಂಬರ್!
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ತ್ರಿಕೋನ ಪ್ರೇಮಕಥೆಯಲ್ಲಿ ನಿರೂಪ್ ಭಂಡಾರಿ ಮತ್ತು ಶಾನ್ವಿ ಶ್ರೀವಾಸ್ತವ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ಚಿತ್ರತಂಡಕ್ಕೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಕೂಡ ಸೇರಿದ್ದಾರೆ.

