Chris Gayle

ಟಿ20 ವಿಶ್ವಕಪ್ ತಯಾರಿಗಾಗಿ ಐಪಿಎಲ್-2021 ಟೂರ್ನಿ ತೊರೆದ ಕ್ರಿಸ್ ಗೇಯ್ಲ್
ಮುಂಬರುವ ಟಿ20 ವಿಶ್ವಕಪ್ ಟೂರ್ನಿಯ ತಯಾರಿಗಾಗಿ ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಐಪಿಎಲ್ 2021 ಟೂರ್ನಿಯಿಂದ ಹೊರಬಿದ್ದಿದ್ದಾರೆ.

ನಾಳೆ ಪಾಕ್ ಗೆ ಹೋಗ್ತಿದ್ದೀನಿ ನನ್ನೊಂದಿಗೆ ಯಾರೆಲ್ಲಾ ಬರ್ತೀರಿ?: ನ್ಯೂಜಿಲ್ಯಾಂಡ್ ಸರಣಿ ರದ್ದು ಬಳಿಕ ಗೇಲ್ ಟ್ವೀಟ್
ಉಗ್ರ ದಾಳಿ ಎಚ್ಚರಿಕೆ ಹಿನ್ನಲೆಯಲ್ಲಿ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿರುವುದರ ಬಗ್ಗೆ ಕ್ರಿಕೆಟ್ ದಿಗ್ಗಜರು ಟ್ವೀಟ್ ಮಾಡುತ್ತಿದ್ದಾರೆ.

ಟಿ-20 ಕ್ರಿಕೆಟ್ ನಲ್ಲಿ ಗೇಲ್ ದಾಖಲೆ: 14 ಸಾವಿರ ದಾಟಿದ ಮೊದಲ ಕ್ರಿಕೆಟಿಗ
ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಟಿ 20 ಸ್ವರೂಪದಲ್ಲಿ 14,000 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಟಿ20 ಮಾದರಿಯಲ್ಲಿ ಸಹಸ್ರ ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಶುಕ್ರವಾರ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 8 ಸಿಕ್ಸರ್ ಗಳಿಸುವ ಮೂಲಕ ಟಿ20 ಮಾದರಿಯಲ್ಲಿ ಸಾವಿರಕ್ಕೂ ಅಧಿಕ ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಔಟ್ ಆಗಿದ್ದಕ್ಕೆ ಮೈದಾನದಲ್ಲೇ ಬ್ಯಾಟ್ ಎಸೆದು ಗೇಯ್ಲ್ ಹುಚ್ಚಾಟ, ಕ್ರಿಸ್ ಗೆ ಬಿತ್ತು ಭಾರೀ ದಂಡ, ವಿಡಿಯೋ!
ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ಅಕ್ಟೋಬರ್ 30ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 50ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಕೇವಲ 63 ಎಸೆತಗಳಲ್ಲಿ 99 ರನ್ ಸಿಡಿಸಿದ್ದರು.

ಐಪಿಎಲ್: ಗೇಲ್ ಅಬ್ಬರದ ಆಟ ವ್ಯರ್ಥ, ಪಂಜಾಬ್ ವಿರುದ್ಧ ರಾಜಸ್ಥಾನಕ್ಕೆ 7 ವಿಕೆಟ್ ಭರ್ಜರಿ ಜಯ
13ನೇ ಆವೃತ್ತಿ ಐಪಿಎಲ್ ನ 50ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ ರಾಯಲ್ಸ್ 7 ವಿಕೆಟ್ ಗಳ ಜಯ ಸಾಧಿಸಿದೆ.

ಮತ್ತೆ ಒಂದಾದ ಟಿಮೊನ್, ಪುಂಬಾ: ಕ್ರಿಸ್ ಗೇಲ್ ಜೊತೆಗಿನ ಅದ್ಭುತ ಕ್ಷಣವನ್ನು ನೆನಪಿಸಿಕೊಂಡ ಚಾಹಲ್
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರೊಂದಿಗಿನ ಅದ್ಭುತವಾದ ಕ್ಷಣವೊಂದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ಯಜ್ವೇಂದ್ರ ಚಾಹಲ್ ನೆನಪಿಸಿಕೊಂಡಿದ್ದಾರೆ.

ಕ್ರಿಕೆಟ್ ಕೂಡ ವರ್ಣಭೇದ ನೀತಿಯಿಂದ ಮುಕ್ತವಾಗಿಲ್ಲ, ನಾನೂ ಅದನ್ನು ಎದುರಿಸಿದ್ದೇನೆ: ಕ್ರಿಸ್ ಗೇಲ್
ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಅಭಿಯಾನಕ್ಕೆ ಬೆಂಬಲ ಸೂಚಿಸಿರುವ ವೆಸ್ಟ್ ಇಂಡೀಸ್ ಸ್ಟಾರ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ತಾವೂ ಸಹ ತಮ್ಮ ವೃತ್ತಿಜೀವನದಲ್ಲಿ ಜನಾಂಗೀಯ ಟೀಕೆಗಳನ್ನು ಎದುರಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಾಗೆಯೇ ಫುಟ್ ಬಾಲ್ ಮಾತ್ರವಲ್ಲ ಕ್ರಿಕೆಟ್ ಸಹ ವರ್ಣಭೇದ ನೀತಿಯಿಂದ ಮುಕ್ತವಾಗಿಲ್ಲ ಎಂದಿದ್ದಾರೆ.

ಸಿಪಿಎಲ್: ನನ್ನ ಹೇಳಿಕೆಗೆ ಬದ್ಧ ಆದರೆ, ಕ್ರಿಕೆಟ್ ಗೆ ಕೆಟ್ಟ ಹೆಸರು ಬರಬಾರದು; ಸರವಣ್ ಗೆ ಕ್ಷಮೆ ಯಾಚಿಸಿದ ಕ್ರಿಸ್ ಗೇಯ್ಲ್
ಮಾಜಿ ಕ್ರೆಕೆಟಿಗ ರಾಮ್ ನರೇಶ್ ಸರವಣ್ ರನ್ನು ಕೊರೋನಾ ಗಿಂತಲೂ ಅಪಾಯಕಾರಿ ಎಂದು ಕರೆದಿದ್ದ ವಿಂಡೀಸ್ ದೈತ್ಯ ಬ್ಯಾಟ್ಸ್ ಮನ್ ಇದೀಗ ಕ್ಷಮೆ ಯಾಚಿಸುವ ಮೂಲಕ ಪ್ರಕರಣಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

