chitradurga

ಚಿತ್ರದುರ್ಗ: ದೆವ್ವ ಬಿಡಿಸುವ ನೆಪದಲ್ಲಿ 2 ವರ್ಷದ ಹೆಣ್ಣು ಮಗುವಿನ ಹತ್ಯೆ
ಭೂತೋಚ್ಛಾಟನೆ ನೆಪದಲ್ಲಿ ಎರಡು ವರ್ಷದ ಹೆಣ್ಣು ಮಗುವನ್ನು ಮಾಂತ್ರಿಕನೊಬ್ಬ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹೊಳಲ್ಕೆರೆ ತಾಲ್ಲೂಕಿನ ಅಜ್ಜಿ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿತ್ರದುರ್ಗ: ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ 4 ಎಕರೆ ಭೂಮಿ ಜಪ್ತಿ, ಮೂವರ ಬಂಧನ
ಡ್ರಗ್ಸ್ ಮಾಫಿಯಾ ಕೊರೋನಾಗಿಂತಲೂ ಹೆಮ್ಮಾರಿಯಾಗಿ ದೇಶ, ವಿದೇಶಗಳಲ್ಲಿ ಹರಡಿಕೊಂಡಿದ್ದು, ಪೊಲೀಸರು ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

ಚಿತ್ರದುರ್ಗ; ಹಂದಿ ಕದಿಯಲು ಹೋದ ಕಳ್ಳರಿಂದ ಶೆಡ್‌ನಲ್ಲಿ ಮಲಗಿದ್ದ ಮೂವರ ಬರ್ಬರ ಕೊಲೆ
ಹಂದಿಗಳನ್ನು ಕಳವು ಮಾಡಲು ಬಂದ ದುಷ್ಕರ್ಮಿಗಳು ಹಂದಿ ಶೆಡ್‌ನಲ್ಲಿ ಮಲಗಿದ್ದ ಮೂವರನ್ನು ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ಚಿತ್ರದುರ್ಗ: ಚಲಿಸುತ್ತಿದ್ದ ಬಸ್ ಬೆಂಕಿಗಾಹುತಿ, ಐವರು ಸಾವು, ಹಲವರ ಸ್ಥಿತಿ ಗಂಭೀರ
ಚಲಿಸುತ್ತಿದ್ದ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಹಿರಿಯೂರು ತಾಲ್ಲೂಕಿನ ಕೆ.ಆರ್.ಹಳ್ಳಿ ಬಳಿ ಬುಧವಾರ ನಸುಕಿನಲ್ಲಿ ನಡೆದಿದೆ. ಇಬ್ಬರು ಮಕ್ಕಳು ಸೇರಿ ಐವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಚಿತ್ರದುರ್ಗ: ಕೊರೋನಾ ಗೆದ್ದ 110 ವರ್ಷದ ವೃದ್ಧೆ!
ಕೊರೋನಾ ಮಹಾಮಾರಿಗೆ ಹೆಚ್ಚಾಗಿ ವಯಸ್ಕರು ಹಾಗೂ ವೃದ್ಧರೇ ಹೆಚ್ಚಾಗಿ ಬಲಿಯಾಗುತ್ತಿರುವ ನಡುವಲ್ಲಿ ಅಚ್ಚರಿ ಎಂಬಂತೆ 110 ವರ್ಷದ ವೃದ್ಧೆಯೊಬ್ಬರು ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಚಿತ್ರದುರ್ಗದಲ್ಲಿ 400 ಪೊಲೀಸರಿಗೆ ಹೋಮ್ ಕ್ವಾರಂಟೈನ್: ಕರ್ತವ್ಯಕ್ಕೆ ಸಿಬ್ಬಂದಿ ಕೊರತೆ
ಕೊರೋನಾದಿಂದಾಗಿ 400 ಪೊಲೀಸರು ಹೋಮ್ ಕ್ವಾರಂಟೈನ್ ನಲ್ಲಿದ್ದು ಜಿಲ್ಲೆಯಲ್ಲಿ ಭದ್ರತೆಗೆ ಸಿಬ್ಬಂದಿ ಕೊರತೆ ಎದುರಾಗಿದೆ.

'ದೇವರ ಕೃಪೆ ನಮ್ಮ ಮೇಲಿರಬೇಕೆಂದು' ಸಾಮಾನ್ಯ ಅರ್ಥದಲ್ಲಿ ಹೇಳಿದ್ದೇನೆ; ನಮ್ಮ ಕೈ ಮೀರಿಲ್ಲ: ಸಚಿವ ಶ್ರೀರಾಮುಲು ಸ್ಪಷ್ಟನೆ
ಮುಖ್ಯಮಂತ್ರಿ ಅವರ ಜತೆ ನಾವೆಲ್ಲರೂ ಹಗಲಿರುಳೂ ಕೆಲಸ ಮಾಡುತ್ತಿದ್ದೇವೆ. 'ದೇವರ ಕೃಪೆಯೂ ನಮ್ಮೆಲ್ಲರ ಮೇಲಿರಬೇಕು' ಎಂಬ ಮಾತನ್ನು ಸಾಮಾನ್ಯ ಅರ್ಥದಲ್ಲಿ ಹೇಳಿದ್ದೇನೆಯೇ ಹೊರತು, ಹತಾಶೆಯಿಂದಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟೀಕರಣ ನೀಡಿದ್ದಾರೆ.

ಇವರು ವಿದ್ಯಾರ್ಥಿಗಳ ಪಾಲಿಗೆ 'ಸ್ವಾಮಿ';ಲಾಕ್ ಡೌನ್ ಸಮಯದಲ್ಲಿ ಮಕ್ಕಳ ಮನೆ ಮನೆಗೆ ಹೋಗಿ ಪಾಠ ಮಾಡಿದ ಶಿಕ್ಷಕ!
ಈ ವರ್ಷ ಕೋವಿಡ್-19ನಿಂದ ಮನುಷ್ಯನ ಜೀವನ ರೀತಿಯೇ ಕಳೆದ ಮೂರು ತಿಂಗಳಿನಿಂದ ಬದಲಾಗಿದೆ ಎನ್ನಬಹುದು. ಇನ್ನು ಲಾಕ್ ಡೌನ್ ಕಾರಣದಿಂದ ಮಾರ್ಚ್ 25ರಂದು ಶಾಲಾ-ಕಾಲೇಜುಗಳು ಹಠಾತ್ತನೆ, ಅರ್ಧಕ್ಕೆ ನಿಂತುಹೋಯಿತು. ಆಗುತ್ತಿದ್ದ ಪರೀಕ್ಷೆಗಳು ರದ್ದಾದವು.

ಆರೋಗ್ಯ ಸಚಿವರಿಗೆ ಸನ್ಮಾನ ಮಾಡಲು ನಡೆಯಿತು ಭರ್ಜರಿ ಕಾರ್ಯಕ್ರಮ: ಸಾಮಾಜಿಕ ಅಂತರಕ್ಕೆ ಇಲ್ಲಿ ಅರ್ಥವೇ ಇರಲಿಲ್ಲ!
ಕೊರೋನ ಭೀತಿ ರಾಜ್ಯವನ್ನು ಎಡಬಿಡದೇ ಕಾಡುತ್ತಿದೆ, ಇಂತಹ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನತೆಯಲ್ಲಿ ಅರಿವು ಮೂಡಿಸಬೇಕ್ದಿದ ಜವಾಬ್ದಾರಿ ಆರೋಗ್ಯ ಸಚಿವರದ್ದು. ಆದರೆ

