Childrens

ಒಡಿಶಾ: ವಿಷಕಾರಿ ಹಣ್ಣು ತಿಂದು 11 ಮಕ್ಕಳು ಅಸ್ವಸ್ಥ
ವಿಷಯುಕ್ತ ಹಣ್ಣು ತಿಂದು 11 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಒಡಿಶಾದ ಮಲ್ಕಂಗಾರಿ ಜಿಲ್ಲೆಯ ಜಾರಪಳ್ಳಿ ಪಂಚಾಯಿತಿ ವ್ಯಾಪ್ತಿಯ ತಾಳಿಮೇಟ ಗ್ರಾಮದಲ್ಲಿ ನಡೆದಿದೆ.

ಭಾರಿ ಮಳೆ: ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ತಾಯಿ, ಇಬ್ಬರು ಮಕ್ಕಳು
ಭಾನುವಾರ ಇಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಓರ್ವ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಕೊಚ್ಚಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಡ್ಯ: ಕಾವೇರಿ ನಾಲೆಯಲ್ಲಿ ಈಜಲು ತೆರಳಿದ್ದ ಬೆಂಗಳೂರಿನ ಒಂದೇ ಕುಟುಂಬದ ಐವರು ಮಕ್ಕಳು ಸಾವು
ಮಂಡ್ಯ ತಾಲೂಕಿನಲ್ಲಿ ಮಂಗಳವಾರ ನಡೆದ ದಾರುಣ ಘಟನೆಯೊಂದರಲ್ಲಿ, ಐವರು ಮಕ್ಕಳು ನಾಲೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮಂಡ್ಯದ ಬಸರಾಳು ಹೋಬಳಿಯ ದೊಡ್ಡಕೊತ್ತಗೆರೆಯ ಗ್ರಾಮದ ವಿಶ್ವೇಶ್ವರಯ್ಯ ನಾಲೆಯಲ್ಲಿ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ಚುನಾವಣೆ ನೀತಿಸಂಹಿತೆ ಜಾರಿ: ಉಡುಗೊರೆ ವಿತರಣೆಗೆ ರಾಜಕೀಯ ಪಕ್ಷಗಳಿಂದ ಫುಡ್ ಡೆಲಿವರಿ ಸಂಸ್ಥೆ, ಮಕ್ಕಳ ಬಳಕೆ!
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರ ಓಲೈಸಲು ಮದ್ಯ, ನಗದು, ಉಡುಗೊರೆ ಮತ್ತು ಇತರೆ ವಸ್ತುಗಳನ್ನು ನೀಡಲು ರಾಜಕೀಯ ಪಕ್ಷಗಳು ನವೀನ ಮಾರ್ಗಗಳನ್ನು ಕಂಡು ಕೊಂಡಿದ್ದು, ಆಹಾರ ವಿತರಕ ಸಂಸ್ಥೆ, ಮಕ್ಕಳ ಬಳಕೆ ಮಾಡಿಕೊಳ್ಳುತ್ತಿವೆ ಎಂದು ತಿಳಿದುಬಂದಿದೆ.

ಭೂಕಂಪದಿಂದ ಪಾರಾಗಿದ್ದ ಐವರು ಸಿರಿಯಾದ ಮಕ್ಕಳು, ಪೋಷಕರು ಬೆಂಕಿ ಅವಘಡದಲ್ಲಿ ಸಾವು
ಕಳೆದ ವಾರ ಸಂಭವಿಸಿದ ಭೂಕಂಪದಿಂದ ಬದುಕುಳಿದ ನಂತರ ಟರ್ಕಿಯ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಐವರು ಸಿರಿಯಾದ ಮಕ್ಕಳು ಮತ್ತು ಅವರ ಪೋಷಕರು ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಿಶಾಖಪಟ್ಟಣಂ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಿದ ಮಕ್ಕಳು; 2 ಕಿಟಕಿ ಗಾಜುಗಳಿಗೆ ಹಾನಿ
ವಿಶಾಖಪಟ್ಟಣಂನ ರೈಲ್ವೆ ಯಾರ್ಡ್‌ನಲ್ಲಿ ಹೊಸ ವಂದೇ ಭಾರತ್ ರೈಲಿನ ಕೋಚ್‌ಗೆ ಆಟವಾಡುತ್ತಿದ್ದ ಮಕ್ಕಳು ಕಲ್ಲು ತೂರಿದ್ದು, ಗಾಜಿನ ಕಿಟಕಿ ಒಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶ: ಶಾಲೆಯಿಂದ ಮನೆಗೆ ಮರಳುತ್ತಿದ್ದ ವೇಳೆ ಮಣ್ಣಿನ ಗುಡ್ಡ ಕುಸಿದು ಮೂವರು ಮಕ್ಕಳು ಸಾವು
ಬುಧವಾರ ಮಕ್ಕಳು ಶಾಲೆಯಿಂದ ತಮ್ಮ ಮನೆಗೆ ಮರಳುವಾಗ ಗುಡ್ಡದ ಮೂಲಕ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ನದಿಯಲ್ಲಿ ಮುಳುಗುತ್ತಿದ್ದ ತನ್ನಿಬ್ಬರು ಮಕ್ಕಳನ್ನು ರಕ್ಷಿಸಿದ ನಂತರ ತಾನೇ ನೀರುಪಾಲಾದ ಪೊಲೀಸ್ ಸಿಬ್ಬಂದಿ
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ನದಿಯಲ್ಲಿ ಮುಳುಗುತ್ತಿದ್ದ ತನ್ನ ಇಬ್ಬರು ಮಕ್ಕಳನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿಯೊಬ್ಬರು ಬುಧವಾರ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೀಘ್ರದಲ್ಲೇ ಕೋವಿಡ್-19 ಸೋಂಕು ಕೂಡ ಜ್ವರ, ಶೀತದಂತೆ ಮಕ್ಕಳಲ್ಲಿ ಸಾಮಾನ್ಯವಾಗಲಿದೆ: ತಜ್ಞರ ವರದಿ
ಶೀಘ್ರದಲ್ಲೇ ಕೋವಿಡ್-19 ಸೋಂಕು ಕೂಡ ಜ್ವರ, ಶೀತ, ಕೆಮ್ಮು ನೆಗಡಿಯಂತೆ ಮಕ್ಕಳಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಕಾಡಲಿದೆ ಎಂದು ಸಂಶೋಧಕರು ಆಘಾತಕಾರಿ ಮಾಹಿತಿ ಹೊರ ಹಾಕಿದ್ದಾರೆ.

