Children

'ನಿಮ್ಮ ಮಕ್ಕಳನ್ನು ಏನು ಮಾಡುವುದು'? ಗಂಭೀರ ಸ್ವರೂಪದಲ್ಲಿ ದಾಖಲಾಗುವ ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳ ಪ್ರಶ್ನೆ!
ಕೊರೋನಾ ಎರಡನೇ ಅಲೆ ಎಷ್ಟರ ಮಟ್ಟಿಗೆ ತೀವ್ರವಾಗಿದೆ ಎಂದರೆ ಅನೇಕರು ಮನೆ-ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ, ತಂದೆ-ತಾಯಿಗಳನ್ನು ಸೋಂಕಿನಿಂದ ಕಳೆದುಕೊಂಡು ಅನೇಕ ಮಕ್ಕಳು ಅನಾಥವಾಗಿದ್ದಾರೆ. ಅನಾಥ ಮಕ್ಕಳಿದ್ದಾರೆ, ಯಾರಾದರೂ ದತ್ತು ತೆಗೆದುಕೊಳ್ಳುವವರಿದ್ದರೆ ಮುಂದೆ ಬನ್ನಿ ಎಂದು ಮೊಬೈಲ್ ಸಂಖ್ಯೆ ಹಾಕಿರುವ ಸಂದೇಶಗಳು ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ಇತ್ತೀಚೆಗೆ ಸಾ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ, ಮಕ್ಕಳಿಗೆ ಕೋವಿಡ್-19 ಪಾಸಿಟಿವ್!
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ, ಪುತ್ರ ವಿಯಾನ್ -ರಾಜ್ , ಪುತ್ರಿ ಸಮಿಶಾ ಸೇರಿದಂತೆ ಕುಟುಂಬದ ಆರು ಸದಸ್ಯರಿಗೆ ಕೋವಿಡ್-19 ಸೋಂಕು ತಗುಲಿದೆ.

ಕೊರೋನಾ 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ: ತಜ್ಞರ ಎಚ್ಚರಿಕೆ
ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಗೆ ಭಾರತ ತತ್ತರಿಸಿ ಹೋಗಿದೆ. ಈಗಾಗಲೇ ದೇಶದಲ್ಲಿ ಪ್ರತಿನಿತ್ಯ ಲಕ್ಷ ಲಕ್ಷ ಮಂದಿಗೆ ಕೊವಿಡ್-19 ಸೋಂಕು ಪತ್ತೆಯಾಗುತ್ತಿವೆ. ಈ ನಡುವಲ್ಲೇ 3ನೇ ಅಲೆಯ ಆತಂಕ ಶುರುವಾಗಿದ್ದು, 3ನೇ ಅಲೆಯು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರ: 10 ವರ್ಷದೊಳಗಿನ ಮಕ್ಕಳಲ್ಲಿ ಕೊರೋನಾ ಸೋಂಕು ಹೆಚ್ಚಳ, ಆತಂಕದಲ್ಲಿ ಜನತೆ!
ಮಹಾರಾಷ್ಟ್ರ ರಾಜ್ಯದಲ್ಲಿ ಕೊರೋನಾ ಬೆನ್ನು ಬಿಡದಂತೆ ಕಾಡುತ್ತಿದೆ. ರಾಜ್ಯದಲ್ಲಿ ಇದೀಗ 10 ವರ್ಷದೊಳಗಿನ ಮಕ್ಕಳಿಗೆ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂಬ ಆಘಾತಕಾರಿ ಮಾಹಿತಿಯೊಂದನ್ನು ಆರೋಗ್ಯ ಇಲಾಖೆ ನೀಡಿದ್ದು, ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

ಶಿವಮೊಗ್ಗ: ಇಬ್ಬರು ಮಕ್ಕಳ ಜೊತೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ
ತನ್ನಿಬ್ಬರು ಮಕ್ಕಳನ್ನು ಕೆರೆಗೆ ಎಸೆದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಮೈದೊಳಲು ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.

ಮಂಡ್ಯ: ಇಬ್ಬರು ಮಕ್ಕಳಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆ
ತನ್ನ ಇಬ್ಬರು ಮಕ್ಕಳಿಗೆ ನೇಣು ಬಿಗಿದು ತಾಯಿಯೂ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಕುಪ್ಪಳ್ಳಿ ಗ್ರಾಮದಲ್ಲಿ ನಡೆದಿದೆ.

ಅಮೆರಿಕಾದಲ್ಲಿ 10 ಲಕ್ಷ ಮಕ್ಕಳಿಗೆ ಕೊರೊನಾ ಸೋಂಕು
ಪ್ರಪಂಚದಾದ್ಯಂತ ವ್ಯಾಪಿಸಿರುವ ಕೊರೊನಾ ವೈರಸ್ ಅಮೆರಿಕಾ ದೇಶದಲ್ಲಿ 10 ಲಕ್ಷ ಮಂದಿಗೂ ಹೆಚ್ಚು ಮಕ್ಕಳಿಗೆ ತಗುಲಿದೆ ಎಂದು ಅಮೆರಿಕಾ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ತನ್ನ ಹೊಸ ವರದಿಯಲ್ಲಿ ತಿಳಿಸಿದೆ.

ಬೆಂಗಳೂರು: ಪಟಾಕಿ ಸಿಡಿಸಿದ್ದ 10 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು
ನಿನ್ನೆ ದೀಪಾವಳಿ ಪ್ರಯುಕ್ತ ಪಟಾಕಿ ಸಿಡಿಸಲು ಹೋಗಿ ಸುಮಾರು 10 ಮಕ್ಕಳು ಗಾಯಗೊಂಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಹಾವೇರಿ: ಶಾಲಾ ಆವರಣದಲ್ಲಿನ ಹೊಂಡಕ್ಕೆ ಬಿದ್ದು ಮೂರು ಮಕ್ಕಳ ದಾರುಣ ಸಾವು
ಶಾಲಾ ಕಾಮಗಾರಿಗಾಗಿ ತೋಡಿದ್ದ ಗುಂಡಿಯೊಂದಕ್ಕೆ ಬಿದ್ದು ಮೂವರು ಮಕ್ಕಳು ದಾರುಣ ಸಾವಿಗೀಡಾಗಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ನಡೆದಿದೆ.

