Children

ಕೋವಿಡ್ 3ನೇ ಅಲೆ ಆತಂಕ: ಶಾಲೆಗಳಲ್ಲೇ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ; ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ
ಕೊರೋನಾ 3ನೇ ಅಲೆ ಎದುರಿಸಲು ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಶಾಲಾ ಹಂತದಲ್ಲಿಯೇ ರಾಜ್ಯಾದ್ಯಂತ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.

ಮಕ್ಕಳ ಮೇಲೆ ಭಾರತ್ ಬಯೋಟೆಕ್ ನ ಕೊವಾಕ್ಸಿನ್ ಪ್ರಯೋಗ ಪ್ರಗತಿಯಲ್ಲಿ, ಸೆಪ್ಟೆಂಬರ್ ನಲ್ಲಿ ಫಲಿತಾಂಶ: ಏಮ್ಸ್ ನಿರ್ದೇಶಕ
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಕೊವಾಕ್ಸಿನ್ ಲಸಿಕೆಯ ಮಕ್ಕಳ ಮೇಲೆ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸುತ್ತಿದ್ದು ಸೆಪ್ಟೆಂಬರ್ ವೇಳೆಗೆ ಫಲಿತಾಂಶ ಹೊರಬೀಳಲಿದೆ.

ರಾಜ್ಯದ ಅಂಗವಾಡಿಯಲ್ಲಿನ ಶೇ.10ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ಸಮೀಕ್ಷಾ ವರದಿ
ರಾಜ್ಯದಲ್ಲಿ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಅಪೌಷ್ಟಿಕತೆಯಿಂದಾಗಿ ಹಲವು ಮಕ್ಕಳು ಸಾವಿನ ದವಡೆಯಲ್ಲಿ ಸಿಲುಕಿದ್ದಾರೆಂಬ ಆತಂಕಕಾರಿ ವಿಚಾರ ಸಮೀಕ್ಷಾ ವರದಿಯಿಂದ ಬಯಲಾಗಿದೆ.

ಕೋವಿಡ್ ಆತಂಕ, ಗೊಂದಲದ ನಡುವೆ ರಾಜ್ಯದ ಮಕ್ಕಳಿಗೆ ತಪ್ಪಿದ ನಿಯಮಿತ ಚುಚ್ಚುಮದ್ದು
2018ಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಕೋವಿಡ್- 19 ಸಾಂಕ್ರಾಮಿಕ ವೇಳೆಯಲ್ಲಿ ಹಲವು ಮಕ್ಕಳು ನಿಯಮಿತ ಚುಚ್ಚುಮದ್ದುವಿನಿಂದ ತಪ್ಪಿಸಿಕೊಂಡಿದ್ದಾರೆ ಎಂದು ಮಕ್ಕಳ ತಜ್ಞರು ತಿಳಿಸಿದ್ದಾರೆ.

ಕೋವಿಡ್ ಎಫೆಕ್ಟ್: ಕರ್ನಾಟಕದಲ್ಲಿ 56 ಮಕ್ಕಳು ಅನಾಥ
ಕೋವಿಡ್ 2ನೇ ಅಲೆ ಹಲವು ಕುಟುಂಬಗಳ ಖುಷಿ ಕಸಿದುಕೊಂಡಿದೆ. ಈ ಪಿಡುಗಿನಿಂದಾಗಿ ಪಾಲಕರನ್ನು ಕಳೆದುಕೊಂಡು ಅನಾಥರಾಗುತ್ತಿರುವ ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಈವರೆಗೆ ಒಟ್ಟು 56 ಮಂದಿ ಮಕ್ಕಳು ಹೆತ್ತವರನ್ನು ಕಳೆದುಕೊಂಡಿದ್ದಾರೆಂದು ತಿಳಿದುಬಂದಿದೆ.

ಕೌಟುಂಬಿಕ ಕಲಹ: ಬಳ್ಳಾರಿಯಲ್ಲಿ ಮಕ್ಕಳಿಬ್ಬರ ಉಸಿರು ನಿಲ್ಲಿಸಿ ತಾಯಿ ಆತ್ಮಹತ್ಯೆ
ಕೌಟುಂಬಿಕ ಕಲಹದಿಂದ ಮನನೊಂದು ಮಹಿಳೆಯೊಬ್ಬಳು ತನ್ನಿಬ್ಬರು ಮಕ್ಕಳನ್ನು ನೀರಿನ ಟ್ಯಾಂಕ್ ನಲ್ಲಿ ಮುಳುಗಿಸಿ ತಾನೂ ಆತಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯ ಇಂದಿರಾ ನಗರದಲ್ಲಿ ವರದಿಯಾಗಿದೆ.

ಕೋವಿಡ್ ಮಧ್ಯೆ ಮಕ್ಕಳಲ್ಲಿ ನಿರಂತರ ಕಲಿಕೆ ಪ್ರಕ್ರಿಯೆ: ಕಾರ್ಯಪಡೆ ರಚಿಸಲು ಶಿಕ್ಷಣ ಇಲಾಖೆ ನಿರ್ಧಾರ
ಶಾಲಾ ಮಕ್ಕಳಲ್ಲಿ ನಿರಂತರ ಕಲಿಕೆಗೆ ಕಾರ್ಯಪಡೆಯನ್ನು ರಚಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಹೃದ್ರೋಗ ತಜ್ಞ, ಕೋವಿಡ್ ಮೂರನೇ ಅಲೆ ತಡೆ ಸಮಿತಿಯ ಮುಖ್ಯಸ್ಥ ಡಾ ದೇವಿ ಶೆಟ್ಟಿಯವರು ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ಮಧ್ಯಂತರ ವರದಿ ಸಲ್ಲಿಸಿದ ನಂತರ ಸರ್ಕಾರ ಈ ಕ್ರಮ ಕೈಗೊಂಡಿದೆ.

ಕೊರೋನಾ 3ನೇ ಅಲೆಗೆ ಸಿದ್ಧತೆ: ಮಕ್ಕಳಿಗಾಗಿ ಪ್ರತ್ಯೇಕ ಕೋವಿಡ್ ಆಸ್ಪತ್ರೆ ನಿರ್ಮಿಸಲು ಸರ್ಕಾರ ಚಿಂತನೆ
ಕೊರೋನಾ 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಆತಂಕ ಶುರುವಾಗಿದ್ದು, ಹೀಗಾಗಿ ಮಕ್ಕಳಿಗಾಗಿಯೇ ನಗರದಲ್ಲಿ ಪ್ರತ್ಯೇಕ ಕೋವಿಡ್ ಆಸ್ಪತ್ರೆ ನಿರ್ಮಿಸುವಂತೆ ಸಲಹೆಗಳು ಬಂದಿದ್ದು, ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಸೋಮವಾರ ಹೇಳಿದ್ದಾರೆ.

ಮಕ್ಕಳಿಗೆ ನೀಡುವ ಭಾರತದ ಮೊದಲ ಕೋವಿಡ್ ಲಸಿಕೆಯ ಪ್ರಾಯೋಗಿಕ ಪರೀಕ್ಷೆ ಯಶಸ್ವಿ: ಡಿಜಿಸಿಐಯಿಂದ ಅನುಮತಿ ನಿರೀಕ್ಷೆ
ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ನಂತರ 12ರಿಂದ 18 ವರ್ಷದೊಳಗಿನ ಮಕ್ಕಳಿಗೆ ಔಷಧೀಯ ಸಂಸ್ಥೆ ಝೈಡಸ್ ಕ್ಯಾಡಿಲಾ ಝೈಕೊವ್-ಡಿಯ ತುರ್ತು ಬಳಕೆಗೆ ಅನುಮತಿ ಕೋರಿ ಭಾರತೀಯ ಡ್ರಗ್ ಕಂಟ್ರೋಲರ್ ಗೆ ಕಳುಹಿಸಿದೆ. ಮುಂದಿನ 8-10 ದಿನಗಳಲ್ಲಿ ಝೈಕೊವ್-ಡಿ ಬಳಕೆಗೆ ಡಿಸಿಜಿಐಯಿಂದ ಅನುಮತಿ ಸಿಕ್ಕಿದ ಕೂಡಲೇ ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಯಲಿದೆ.

