child

ಸಂತಾನ ಪಡೆಯಲು ಕೈದಿಗೆ ಪೆರೋಲ್; ಪತ್ನಿಯ ಮನವಿ ಪುರಸ್ಕರಿಸಿದ ಹೈಕೋರ್ಟ್!
ಸೆರೆವಾಸ ಅನುಭವಿಸುತ್ತಿರುವ ಸಮಯದಲ್ಲೇ ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾಗಲು ಸಜಾಬಂಧಿಗೆ ಅವಕಾಶ ಮಾಡಿಕೊಟ್ಟಿದ್ದ ಹೈಕೋರ್ಟ್, ಇದೀಗ ಮಗು ಹೊಂದಲು ಪರೋಲ್ ಮಂಜೂರು ಮಾಡಿ ಆದೇಶಿಸಿದೆ.

ಚೆನ್ನೈ: 4ನೇ ಮಹಡಿಯಿಂದ ಬಿದ್ದ ಮಗು ರಕ್ಷಣೆ ಪ್ರಕರಣ; ನಿರ್ಲಕ್ಷ್ಯ ಕುರಿತು ಟೀಕೆ ಬೆನ್ನಲ್ಲೇ ತಾಯಿ ಆತ್ಮಹತ್ಯೆಗೆ ಶರಣು!
ಚೆನ್ನೈನ ಅಪಾರ್ಟ್‌ಮೆಂಟ್‌ನ ಬಾಲ್ಕನಿಯೊಂದರಿಂದ ಬೀಳುತ್ತಿದ್ದ ಮಗುವನ್ನು ರಕ್ಷಣೆ ಮಾಡಿ ವಾರಗಳ ಬಳಿಕ ಮಗುವಿನ ತಾಯಿ ಶವವಾಗಿ ಪತ್ತೆಯಾಗಿದ್ದಾರೆ.

ಹೈದರಾಬಾದ್: ಭಾರಿ ಮಳೆಯಿಂದಾಗಿ ತಡೆಗೋಡೆ ಕುಸಿದು 4 ವರ್ಷದ ಮಗು ಸೇರಿ 7 ಮಂದಿ ಸಾವು
ಹೈದರಾಬಾದಿನ ಬಾಚುಪಲ್ಲಿ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ನ ತಡೆಗೋಡೆ ಕುಸಿದು ನಾಲ್ಕು ವರ್ಷದ ಮಗು ಸೇರಿದಂತೆ ಏಳು ಮಂದಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಚೆನ್ನೈ: ಅಪಾರ್ಟ್‌ಮೆಂಟ್ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವನ್ನು ನಿವಾಸಿಗಳು ರಕ್ಷಿಸಿದ ಪರಿ ನೋಡಿ...!
ಚೆನ್ನೈನ ಅವಡಿಯಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯದ ಟಿನ್ ಛಾವಣಿಯ ಅಂಚಿನಲ್ಲಿ ಶಿಶುವೊಂದು ನಾಲ್ಕನೇ ಮಹಡಿಯಿಂದ ಆಕಸ್ಮಿಕವಾಗಿ ಜಾರಿ ಬಿದ್ದಿತ್ತು. ಮಗು ರೂಫ್ ಟಾಪ್ ನಲ್ಲಿರುವುದು ಮತ್ತು ಹರಸಾಹಸಪಟ್ಟು ಮಗುವನ್ನು ನಿವಾಸಿಗಳು ರಕ್ಷಿಸಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Deepika-Ranveer ಮೊದಲ ಮಗುವಿನ ನಿರೀಕ್ಷೆಯಲ್ಲಿ ತಾರಾ ದಂಪತಿ
ಬಾಲಿವುಡ್ ನ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಬಾಳಲ್ಲಿ ಮಗುವಿನ ಆಗಮನವಾಗಲಿದೆ. ಇಂದು ಇನ್ಸ್ಟಾಗ್ರಾಂ ಮೂಲಕ ಜೋಡಿ ಸಿಹಿಸುದ್ದಿಯನ್ನು ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.

ರಾಮಲಲ್ಲಾ ವಿಗ್ರಹ ಬಾಲರಾಮನಂತೆ ಕಾಣಿಸುತ್ತಿಲ್ಲ: ದಿಗ್ವಿಜಯ್ ಸಿಂಗ್ ಕೊಂಕು
ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಿರುವ ರಾಮಲಲ್ಲಾ ಮೂರ್ತಿ ಮಗುವಿನಂತೆ ಕಾಣುತ್ತಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಸುಚನಾ ಸೇಠ್ ಮಗುವಿನ ಹತ್ಯೆ ಪ್ರಕರಣ: ತಂದೆ ವೆಂಕಟ ರಮಣರಿಂದ ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಸಂಸ್ಕಾರ
ತನ್ನ ನಾಲ್ಕು ವರ್ಷದ ಮಗುವನ್ನು ಕೊಂದ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪೆನಿ ಸಿಇಒ ಸುಚನಾ ಸೇಠ್ ಪತಿ ವೆಂಕಟ ರಮಣ ಅವರಿಗೆ ಸುದ್ದಿ ತಿಳಿದ ತಕ್ಷಣವೇ ಇಂಡೋನೇಷಿಯಾದಿಂದ ಚಿತ್ರದುರ್ಗಕ್ಕೆ ಬಂದು ಹಿರಿಯೂರಿನ ಶವಾಗಾರದಲ್ಲಿ ಪುತ್ರ ಚಿನ್ಮಯ್‌ನ ಪಾರ್ಥಿವ ಶರೀರವನ್ನು ನೋಡಿ ಕಂಗೆಟ್ಟು ಕುಸಿದು ಹೋದರು.

ಸುಚನಾ ಸೇಠ್ 6 ದಿನ ಪೊಲೀಸ್ ಕಸ್ಟಡಿಗೆ: ಮಗುವಿನ ಮರಣೋತ್ತರ ಪರೀಕ್ಷೆ ಮುಕ್ತಾಯ, ಇಂದು ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ
ಇಡೀ ದೇಶದ ಜನರನ್ನು ಬೆಚ್ಚಿಬೀಳಿಸಿದ ಪಶ್ಚಿಮ ಬಂಗಾಳ ಮೂಲದ ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಕಂಪೆನಿ ಹೊಂದಿದ್ದ ಮಹಿಳಾ ಸಿಇಒ ಸುಚನಾ ಸೇಠ್(39ವ) ತನ್ನ ನಾಲ್ಕು ವರ್ಷದ ಮುದ್ದಾದ ಮಗು ಚಿನ್ಮಯ್ ನನ್ನು ಹತ್ಯೆ ಮಾಡಿರುವ ಪ್ರಕರಣದಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ಚಿತ್ರದುರ್ಗದ ಹಿರಿಯೂರಿನಲ್ಲಿ ಮುಗಿದು ಬೆಂಗಳೂರಿಗೆ ಇಂದು ಬುಧವಾರ ಕಳುಹಿಸಲಾಗುತ್ತಿದೆ.

ವಿಷಪೂರಿತ ನಾಗರ ಹಾವು ಕಚ್ಚಿಸಿ ಪತ್ನಿ ಮತ್ತು 2 ವರ್ಷದ ಮಗಳನ್ನು ಹತ್ಯೆಗೈದ ವ್ಯಕ್ತಿ ಬಂಧನ!
ವಿಷಪೂರಿತ ಹಾವನ್ನು ಕೊಠಡಿಗೆ ಬಿಡುವ ಮೂಲಕ ತನ್ನ ಪತ್ನಿ ಮತ್ತು ಎರಡು ವರ್ಷದ ಮಗಳನ್ನು ಕೊಂದ ಆರೋಪದ ಮೇಲೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ 25 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

