Chikkaballapura

ಚಿಕ್ಕಬಳ್ಳಾಪುರ: ನಂದಿಬೆಟ್ಟಕ್ಕೆ 2 ದಿನ ಸಾರ್ವಜನಿಕರ ಪ್ರವೇಶ ನಿಷೇಧ
ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟಕ್ಕೆ ಇಂದಿನಿಂದ ಎರಡು ದಿನಗಳ ಕಾಲ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುದ್ದೇನಹಳ್ಳಿಗೆ ಆಗಮಿಸುತ್ತಿದ್ದು, ಸತ್ಯಸಾಯಿ ಲೋಕಸೇವಾ ಆಶ್ರಮದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕುಡಿದು ಬಂದು ಕಿರುಕುಳ; ಪೆಟ್ರೋಲ್ ಸುರಿದು ಪುತ್ರನನ್ನೇ ಸಜೀವ ದಹನ ಮಾಡಿದ ತಂದೆ!
ಚಿಕ್ಕಬಳ್ಳಾಪುರ ಜಿಲ್ಲೆಯ ವಾಣಿಗರಹಳ್ಳಿಯಲ್ಲಿ ಕುಡಿದು ಬಂದು ತನ್ನ ತಾಯಿಯ ಮೇಲೆ ಹಲ್ಲೆ ಮಾಡುತ್ತಿದ್ದ ಪುತ್ರನ ಕೃತ್ಯಕ್ಕೆ ಬೇಸತ್ತ ತಂದೆಯೊಬ್ಬರು, ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಶನಿವಾರ ನಡೆದಿದೆ.

ಪ್ರತಾಪ್ ಸಿಂಹ ಬಾಯಿ ಮುಚ್ಕೊಂಡಿರಬೇಕು; ಮುನಿಸ್ವಾಮಿ ಅಲ್ಲ 'ಮನಿ' ಸ್ವಾಮಿ ಚೈಲ್ಡ್ ಆರ್ಟಿಸ್ಟ್: ಸಂಸದಗೆ ಪ್ರದೀಪ್ ಈಶ್ವರ್ ಕೌಂಟರ್
ಪ್ರದೀಪ್ ಈಶ್ವರ್ ವಿರುದ್ಧ ಮಾತನಾಡಿದ್ದ ಬಿಜೆಪಿ ಸಂಸದ ಮುನಿಸ್ವಾಮಿ, ಇಲ್ಲಿ ಯಾರೋ ಒಬ್ಬ ಚಿಕ್ಕಬಳ್ಳಾಪುರಕ್ಕೆ ಬಂದಿದ್ದಾನೆ. ಬೆಳಗ್ಗೆಯಿಂದ ಸಂಜೆವರೆಗೂ ಅಪ್ಪ-ಅಮ್ಮ ಅಂತಿದ್ದಾನೆ. ಈ ಥರದವರನ್ನು ನಾನ್ ನೋಡಿಲ್ಲ, ಅಬ್ಬಬ್ಬಾ ಏನ್ ಡ್ರಾಮಾ. ಮುಂದಿದೆ ಮಾರಿ ಹಬ್ಬ ಎಂದು ಮುನಿಸ್ವಾಮಿ ಕಿಡಿಕಾರಿದ್ದರು.

ಚಿಕ್ಕಬಳ್ಳಾಪುರದಲ್ಲಿ ನೈತಿಕ ಪೊಲೀಸ್ ಗಿರಿ: ಚಾಟ್ಸ್ ತಿನ್ನುತ್ತಿದ್ದವರ ಮೇಲೆ ಹಲ್ಲೆಗೆ ಯತ್ನ; ಯುವತಿಯಿಂದ ದೂರು ದಾಖಲು
ನಗರದಲ್ಲಿ ಅನ್ಯಕೋಮಿನ ಯುವತಿಯೊಬ್ಬಳು ಹಿಂದೂ ಯುವಕನ ಜೊತೆಗೆ ಹೋಟೆಲ್ ಗೆ ಆಗಮಿಸಿದ ಹಿನ್ನೆಲೆಯಲ್ಲಿ, ಯುವಕರ ಗುಂಪು ಹಿಂದೂ ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

ನಾನು ಸುಧಾಕರ್ ನ್ನು ಸೋಲಿಸಿದ್ದಕ್ಕೆ ಸಿದ್ದರಾಮಯ್ಯ ಹಾಲು ಕುಡಿದಷ್ಟು ಖುಷಿಪಟ್ಟರು, ಉಳಿದ ಕಾಂಗ್ರೆಸ್ ನಾಯಕರೂ ಹರಸಿದರು: ಪ್ರದೀಪ್ ಈಶ್ವರ್
ತೆಲುಗು ಭಾಷಿಕರ ಪ್ರಭಾವವನ್ನು ಹೊಂದಿರುವ ಗಡಿಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಪ್ರಭಾವಿ ನಾಯಕ ಮಾಜಿ ಸಚಿವ ಡಾ ಕೆ ಸುಧಾಕರ್ ಅವರನ್ನು ಸೋಲಿಸಿ ರಾಜ್ಯಾದ್ಯಂತ ಸುದ್ದಿಯಾದವರು ಕಾಂಗ್ರೆಸ್ ನ ಪ್ರದೀಪ್ ಈಶ್ವರ್ (Pradeep Eshwar). ತಮ್ಮ ಮಾತಿನಿಂದ ಜನಮನ ಸೆಳೆದಿದ್ದಾರೆ.

ದೇವಸ್ಥಾನಕ್ಕೆ ತೆರಳುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರನ್ನು ಶೋಧಿಸಿದ ಚುನಾವಣಾಧಿಕಾರಿಗಳು!
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಕಾರನ್ನು ತಡೆದ ಚುನಾವಣಾಧಿಕಾರಿಗಳು ಶುಕ್ರವಾರ ಪರಿಶೀಲನೆ ನಡೆಸಿದರು. ಮೇ 10 ರಂದು ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.

ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಬಿಡಿಎ ನಿವೇಶನ ರದ್ದು: ತಮಟೆ ಜಾನಪದ ಕಲಾವಿದ ಮುನಿವೆಂಕಟಪ್ಪಗೆ ಪದ್ಮಶ್ರೀ ಪ್ರಶಸ್ತಿ
ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ಬಿಡಿಎ ನಿವೇಶನ (ಸಂಖ್ಯೆ ಬಿ4-ಎಸ್‌ಎ-70) ನೀಡಲಾಗಿದೆ. ಆದರೆ, ಹಣಕಾಸಿನ ಮುಗ್ಗಟ್ಟಿನಿಂದ ಸಂಪೂರ್ಣ 5 ಲಕ್ಷ ರೂ.ಗಳನ್ನು ಪಾವತಿಸಲು ಸಾಧ್ಯವಾಗದೆ ಕೇವಲ 26,000 ರೂ. ಮಾತ್ರ ಪಾವತಿಸಿದ್ದರು.

ಚಿಕ್ಕಬಳ್ಳಾಪುರ: ಅನ್ಯಜಾತಿ ಯುವಕನೊಂದಿಗೆ ಮಗಳು ಪರಾರಿ; ಮರ್ಯಾದೆಗೆ ಅಂಜಿ ಕುಟುಂಬದ ಮೂವರು ಆತ್ಮಹತ್ಯೆ
ಮಗಳು ಅನ್ಯ ಜಾತಿ ಯುವಕನ ಜೊತೆ ಪರಾರಿಯಾದ ಹಿನ್ನೆಲೆ ಮಾನ ಮರ್ಯಾದೆಗೆ ಅಂಜಿದ ತಂದೆ, ತಾಯಿ ಹಾಗೂ ಆಕೆಯ ತಮ್ಮ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ 2 ಬಾರಿ ಭೂಕಂಪನ: ಹಲವು ಗ್ರಾಮದಲ್ಲಿ ಭಾರೀ ಸ್ಪೋಟದ ಶಬ್ದ
ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಸ್ಫೋಟದ ಅನುಭವವಾಗಿದೆ. ಬೆಳಗ್ಗೆ 7 ಗಂಟೆಯಿಂದ 7.30ರೊಳಗೆ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.

