Chikamagaluru

ಸಿದ್ದರಾಮಯ್ಯ 'ಮುಸ್ಲಿಂ ಏರಿಯಾ' ಹೇಳಿಕೆ: ಕೊಡಗು ನಂತರ ಚಿಕ್ಕಮಗಳೂರಿನಲ್ಲೂ ಪ್ರತಿಭಟನೆ ಬಿಸಿ
ಶಿವಮೊಗ್ಗದಲ್ಲಿ ಮೊನ್ನೆ ಸ್ವಾತಂತ್ರ್ಯ ದಿನಾಚರಣೆ ದಿನ ವೀರ ಸಾವರ್ಕರ್ ಫ್ಲೆಕ್ಸ್ ಹಾಕಿದ ವಿಚಾರದಲ್ಲಿ ಗಲಾಟೆಯಾಗಿ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ್ದ ಮುಸ್ಲಿಂ ಏರಿಯಾ ವಿವಾದಾತ್ಮಕ ಹೇಳಿಕೆ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಆರ್ ಎಸ್ ಎಸ್ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.

'ನಾನು ಶ್ಯಾಡೋ ಸಿಎಂ, ವಿಪಕ್ಷ ನಾಯಕನಿಗೆ ಸೂಕ್ತ ಭದ್ರತೆ ಕೊಡುವುದು ಸರ್ಕಾರದ ಕರ್ತವ್ಯ': ಸಿದ್ದರಾಮಯ್ಯ
ರಾಜ್ಯದ ಜನತೆಯ ಭಾವನೆಯನ್ನು ಬೇರೆಡೆಗೆ ಸೆಳೆಯಲು ಮೊಟ್ಟೆ ಎಸೆತದಂತಹ ನೀಚಕೃತ್ಯ ಮಾಡುತ್ತಾರೆ. ಸಚಿವ ಮಾಧುಸ್ವಾಮಿ ಹೇಳಿಕೆ ಇದಕ್ಕೆ ಕನ್ನಡಿ, ನನ್ನ ವಿರುದ್ಧದ ಪ್ರತಿಭಟನೆ ಸರ್ಕಾರದ ಪ್ರಾಯೋಜಿತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಚಿಕ್ಕಮಗಳೂರು: ಭಾರೀ ಮಳೆಗೆ ಮನೆ ಮೇಲೆ ಮರ ಬಿದ್ದು ತಾಯಿ-ಮಗಳು ಸಾವು
ರಾಜ್ಯದಲ್ಲಿ ವರುಣಾರ್ಭಟ ಮುಂದುವರಿಯುತ್ತಿರುವಂತೆ ಮಳೆ ಸಂಬಂಧಿ ಅವಘಡಗಳು ಹೆಚ್ಚಾಗುತ್ತಿದೆ.

ಅಧಿಕ ಮಳೆಯಿಂದ ಬೆಳೆಗಳಿಗೆ ಹಾನಿ?: ಚಿಕ್ಕಮಗಳೂರು ಎಂಜಿನಿಯರಿಂಗ್ ವಿದ್ಯಾರ್ಥಿಯಿಂದ ಮಳೆನೀರು ಕೊಯ್ಲು ತಂತ್ರಜ್ಞಾನ!
ಬೆಳೆ, ಇಳುವರಿ ಕೈಗೆ ಸಿಗಲು ಸಕಾಲದಲ್ಲಿ ಉತ್ತಮ ಮಳೆಯಾಗಲಿ ಎಂದು ರೈತರು ಆಶಿಸುತ್ತಾರೆ. ಆದರೆ ಈ ಬಾರಿ ಅಕಾಲಿಕ ಮಳೆ ರೈತರು ನಿರೀಕ್ಷೆ ಮಾಡದ ರೀತಿ ಬಂದು ಹೋಗಿದೆ. ಸಾಕಷ್ಟು ಬೆಳೆಹಾನಿಯಾಗಿದೆ. ಆದರೆ ಮಲೆನಾಡಿನ ಈ ಭಾಗದ ಜನರು ಮಳೆನೀರನ್ನು ಚೆನ್ನಾಗಿ ಸಂಗ್ರಹಿಸಿಟ್ಟುಕೊಳ್ಳುವ ಕಲೆ ಕರಗತ ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಕೊರೋನಾ ಸ್ಫೋಟ: 70 ವಿದ್ಯಾರ್ಥಿಗಳಿಗೆ ಸೋಂಕು
ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಧಾರವಾಡ, ಬೆಂಗಳೂರು, ಹಾಸನ ನಂತರ ಇದೀಗ ಚಿಕ್ಕಮಗಳೂರಿನ ಜವಾಹರ್ ನವೋದಯ ವಿದ್ಯಾಲಯದಲ್ಲಿನ ಸುಮಾರು 70 ಮಕ್ಕಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಚಿಕ್ಕಮಗಳೂರು: ಹಸುವಿನ ಹೊಟ್ಟೆಯಿಂದ 21 ಕೆಜಿ ಪ್ಲಾಸ್ಟಿಕ್ ಹೊರ ತೆಗೆದ ವೈದ್ಯರು!
ಮಣ್ಣಿನಲ್ಲಿ ಕರಗಿ ಹೋಗದ ವಸ್ತುಗಳ ಬಗ್ಗೆ ಪರಿಸರ ಕಾಳಜಿಯುಳ್ಳವರು ಆಗಾಗ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ, ಇದರಿಂದ ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳಿಗೂ ಅಪಾಯ ಎಂದು ಹೇಳುತ್ತಲೇ ಇದ್ದರೂ ಪ್ಲಾಸ್ಟಿಕ್ ವಸ್ತುಗಳನ್ನು, ಪ್ಲಾಸ್ಟಿಕ್ ಗಳನ್ನು ಸಿಕ್ಕಾಪಟ್ಟೆ ಬಿಸಾಕುವುದು, ಎಲ್ಲೆಂದರಲ್ಲಿ ಎಸೆಯುವುದು ನಡೆಯುತ್ತಲೇ ಇರುತ್ತದೆ.

ಪೊಲೀಸ್ ಕಸ್ಟಡಿಯಲ್ಲಿರುವಾಗ ಒತ್ತಾಯಪೂರ್ವಕವಾಗಿ ತನಗೆ ಮೂತ್ರ ಕುಡಿಸಲಾಗಿತ್ತು: ಚಿಕ್ಕಮಗಳೂರಿನ ದಲಿತ ವ್ಯಕ್ತಿಯಿಂದ ದೂರು
ಪೊಲೀಸ್ ಕಸ್ಟಡಿಯಲ್ಲಿರುವಾಗ ತಮಗೆ ಒತ್ತಾಯಪೂರ್ವಕವಾಗಿ ಮೂತ್ರ ಕುಡಿಸಲಾಗಿತ್ತು ಎಂದು ದಲಿತ ವ್ಯಕ್ತಿಯೊಬ್ಬ ದೂರು ದಾಖಲಿಸಿ ಡಿಜಿಪಿಗೆ ಪತ್ರ ಬರೆದಿದ್ದಾರೆ.

ಚಿಕ್ಕಮಗಳೂರು: ಕೊರೋನಾ ಸೋಂಕಿತ ಅಣ್ಣ ಆಸ್ಪತ್ರೆಯಿಂದ ಮನೆಗೆ ಬಂದಿದ್ದಕ್ಕೆ ಮಚ್ಚಿನಿಂದ ಕೊಚ್ಚಿ ಕೊಂದ ತಮ್ಮ!
ಕೊರೋನಾ ಮಹಾಮಾರಿ ಜನರನ್ನು ಕೊಲ್ಲುತ್ತಿದ್ದರೆ ಇತ್ತ ಸಂಬಂಧಗಳಲ್ಲೂ ಬಿರುಕು ಮೂಡಿಸುತ್ತಿದೆ. ಒಂದೆಡೆ ಸೋಂಕಿತ ತಾಯಿಯನ್ನು ಮಗ ಹೊರಗೆ ಹಾಕಿದ್ದರೆ, ಇಲ್ಲೊಬ್ಬ ತಮ್ಮ ಅಣ್ಣನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಚಿಕ್ಕಮಗಳೂರು: ಕ್ಯಾಸನೂರು ಅರಣ್ಯ ಕಾಯಿಲೆ ಮೂವರಲ್ಲಿ ಪತ್ತೆ
ಕಳೆದ ಭಾನುವಾರ ಸಾಗರ ತಾಲ್ಲೂಕಿನ ಹೊಡಂತೆ ಗ್ರಾಮದಲ್ಲಿ ಮಂಗನ ಸಾವಿನ ಪ್ರಕರಣ ಮತ್ತು ಎನ್ ಆರ್ ಪುರ ತಾಲ್ಲೂಕಿನಲ್ಲಿ ಮಂಗನ ಜ್ವರ ಮಡಬಾರು ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರಲ್ಲಿ ಪತ್ತೆಯಾದ ನಂತರ ಜಿಲ್ಲೆಯಲ್ಲಿ ತೀವ್ರ ಎಚ್ಚರಿಕೆ ಘೋಷಿಸಲಾಗಿದೆ.

