Cheating

ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಹೆಸರು ಬಳಸಿ ವಂಚನೆ: ಇಬ್ಬರು ಯುವತಿಯರ ವಿರುದ್ಧ ಕೇಸ್ ದಾಖಲು
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾಮೂರ್ತಿ ಅವರ ಹೆಸರು ಬಳಸಿಕೊಂಡು ವಂಚನೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಹಾಲಶ್ರೀ ಸ್ವಾಮಿಯ ಮತ್ತೊಂದು ದೋಖಾ: ಶಿರಹಟ್ಟಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಪಿಡಿಒಗೆ ಕೋಟಿ ರು. ವಂಚನೆ
ಟಿಕೆಟ್ ಕೊಡಿಸಲು ಒಂದು ಕೋಟಿ ರೂ.ಗೆ ಡೀಲ್ ಆಗಿತ್ತು. ಸಂಜಯ್ ಒಂದು ಕೋಟಿ ರೂ. ಹಣವನ್ನು ಹಾಲಶ್ರೀ ಅವರಿಗೆ ನೀಡಿದ್ದರು ಎನ್ನಲಾಗಿದೆ.

ಕುವೈತ್‌ನಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ವಂಚನೆ; ಆರು ತಿಂಗಳ ಸಂಕಷ್ಟದ ನಂತರ ತವರಿಗೆ ಮರಳಿದ ಯುವಕರು
ಉದ್ಯೋಗ ಅರಸಿ ಕುವೈತ್‌ಗೆ ತೆರಳಿ ಸಂಕಷ್ಟಕ್ಕೆ ಸಿಲುಕಿದ್ದ ಸಚಿನ್ ಜಂಗಮಶೆಟ್ಟಿ ಮತ್ತು ವಿಶಾಲ್ ಸೆಲಾರ್ ಎಂಬ ಇಬ್ಬರು ಯುವಕರು ಆರು ತಿಂಗಳ ಸಂಕಷ್ಟದ ನಂತರ ಭಾರತಕ್ಕೆ ಮರಳಿದ್ದಾರೆ. ಉತ್ತಮ ಉದ್ಯೋಗದ ಆಮಿಷಕ್ಕೆ ಬಲಿಯಾಗಿ ಅವರು ಆರು ತಿಂಗಳ ಹಿಂದೆ ಅಲ್ಲಿಗೆ ತೆರಳಿದ್ದರು.

ಮದುವೆಯಾಗುವುದಾಗಿ ಹೇಳಿ ವಂಚನೆ: 70 ವರ್ಷದ ವೃದ್ಧನ ಮೇಲೆ 63ರ ವೃದ್ಧೆಯಿಂದ ದೂರು ದಾಖಲು!
ಐದು ವರ್ಷಗಳಿಂದ ಜೊತೆಗೆ ಸುತ್ತಾಡಿ, ಮದುವೆಯಾಗುವುದಾಗಿ ನಂಬಿಸಿ ಇದೀಗ ಮೋಸ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ 70 ವರ್ಷದ ವೃದ್ಧನ ಮೇಲೆ 63 ವರ್ಷದ ವೃದ್ಧೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು: ವೃದ್ಧೆಗೆ 3.5 ಕೋಟಿ ರೂಪಾಯಿ ವಂಚಿಸಿದ ನಾಲ್ವರ ಬಂಧನ
ವೃದ್ಧೆಗೆ 3.5 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಬ್ಯಾಂಕ್ ಮಾಜಿ ಉದ್ಯೋಗಿ ಸೇರಿದಂತೆ ನಾಲ್ವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮಗಳನ್ನು ಡಾಕ್ಟರ್ ಮಾಡುವ ಕನಸು: ಸೀಟು ಕೊಡಿಸುವುದಾಗಿ 16 ಲಕ್ಷ ರು. ದೋಖಾ; ಬೀದರ್ ನ ಬಡಪಾಯಿ ತಂದೆಯ ಅಳಲು
ಮಗಳನ್ನು ಡಾಕ್ಟರ್ ಮಾಡುವ ಕನಸು ಕಟ್ಟಿಕೊಂಡಿದ್ದ ಬಡಪಾಯಿ ತಂದೆಗೆ ಮೂವರು ವಂಚಿಸಿ ಹಣ ಲಪಾಟಿಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಗಳಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿದ ಮೂವರು ಬೀದರ್ ಮೂಲದ ವ್ಯಕ್ತಿಗೆ ವಂಚಿಸಿದ್ದಾರೆ.

ಸ್ಯಾಂಡಲ್ ವುಡ್ ಚಿತ್ರ ನಿರ್ಮಾಪಕನ ವಿರುದ್ಧ ವಂಚನೆ, ಬೆದರಿಕೆ ಆರೋಪ
ಸಾಲ ತೀರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಿರ್ಮಾಪಕರೊಬ್ಬರು ತಮ್ಮ ಸಹೋದರನಿಗೆ ವಂಚಿಸಿ, ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಪಿಎಸ್ ಅಧಿಕಾರಿ ಸೋಗಿನಲ್ಲಿ ಹಲವರಿಗೆ ವಂಚನೆ; 45 ವರ್ಷದ ವ್ಯಕ್ತಿ ಬಂಧನ
ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಜನರಿಗೆ ಮತ್ತು ಹಲವಾರು ಪೊಲೀಸರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಕಾಟನ್‌ಪೇಟೆ ಪೊಲೀಸರು 45 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಬೆಂಗಳೂರು: ಡೇಟಿಂಗ್ ಆ್ಯಪ್'ನಲ್ಲಿ ಮಹಿಳಾ ಟೆಕ್ಕಿಗೆ ವಂಚನೆ: ಆರೋಪಿ ಬಂಧನ
ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿ ಮಹಿಳಾ ಟೆಕ್ಕಿಗೆ ವಂಚನೆ ಮಾಡಿದ್ದ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

