channapattana bypoll

ಪರಂಪರೆ ಮುಂದುವರಿಸಿದ ನಿಖಿಲ್: ಕಣ್ಣೀರು ಹಾಕುವುದು ನಾಯಕನ ಲಕ್ಷಣವಲ್ಲ, ಇದು ರಾಜಕೀಯ ಗಿಮ್ಮಿಕ್- ಯೋಗೇಶ್ವರ್
ಒಬ್ಬ ವ್ಯಕ್ತಿ ಯುದ್ಧದಲ್ಲಿ ಸೋಲುತ್ತಿರುವಾಗ ಅವನ ಕೊನೆ ಅಸ್ತ್ರವೇ ಕಣ್ಣೀರು. ಒಬ್ಬ ನಾಯಕ ಜನರ ಕಣ್ಣೀರು ಒರೆಸಬೇಕೇ ಹೊರತು ಕಣ್ಣೀರು ಹಾಕಬಾರದು ಎಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವ್ ಕಿಡಿ ಕಾರಿದ್ದಾರೆ.

ಸುಳ್ಳಿಗೆ ಮತ್ತೊಂದು ಹೆಸರೇ ಕುಮಾರಸ್ವಾಮಿ; ಬಿಜೆಪಿ- ಜೆಡಿಎಸ್ ನಲ್ಲಿ ಭವಿಷ್ಯವಿಲ್ಲ ಎಂದು ಗುಂಪು ಗುಂಪಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ: DKS
ಕುಮಾರಸ್ವಾಮಿ ತನ್ನ ಸ್ಥಾನವನ್ನೇ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಬಿಜೆಪಿ ನಾಯಕರೇ ಕುಮಾರಸ್ವಾಮಿ ಅವರಿಗೆ ಉತ್ತರ ನೀಡುತ್ತಾರೆ. ಅವರ ಪಕ್ಷ ಗಟ್ಟಿಯಾಗಿ ಉಳಿಯುತ್ತದೆಯೋ ಇಲ್ಲವೋ ಎಂಬುದನ್ನು ಸಮಯ ಬಂದಾಗ ಉತ್ತರ ನೀಡುತ್ತೇನೆ.

ರಾಜಮನೆತನದಿಂದ ಚಾಮುಂಡೇಶ್ವರಿ ಸೇವೆ ಅವಕಾಶವನ್ನು ಸಿದ್ದರಾಮಯ್ಯ ಸರ್ಕಾರ ಕಿತ್ತುಕೊಂಡಿದೆ: ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿ ಅರಸು ಮನೆತನದ ದೇವತೆ. ಅವರ ಕುಟುಂಬದ ಆರಾಧ್ಯದೈವ. ಅವರ ಮನೆತನದಿಂದ ದೇವರನ್ನು ದೂರ ಮಾಡುವ ಕೇಡಿನ ಕೆಲಸ ಮಾಡುತ್ತಿದೆ ಈ ಸರ್ಕಾರ ಎಂದು ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಚನ್ನಪಟ್ಟಣ ಉಪ ಚುನಾವಣೆ: ಅಖಾಡಕ್ಕೆ ದೇವೇಗೌಡ ಎಂಟ್ರಿ; ನಿಖಿಲ್ ಪರ ಬಿರುಸಿನ ಪ್ರಚಾರಕ್ಕೆ ವೇದಿಕೆ ಸಜ್ಜು!
ಚನ್ನಪಟ್ಟಣ ಉಪಚುನಾವಣೆಯಲ್ಲಿ ಈ ಬಾರಿ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿರುವ ದೇವೇಗೌಡ ಅವರು, ಮೊಮ್ಮಗನ ಪರ ಪ್ರಚಾರ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಪ್ರಚಾರಕ್ಕೆ ವೇದಿಕೆ ಕೂಡ ಸಜ್ಜಾಗಿದೆ.

ಕುಮಾರಸ್ವಾಮಿ ಚದುರಂಗದಾಟದಿಂದ ನಿಖಿಲ್ ಗೆ ಟಿಕೆಟ್; ನಾಮಪತ್ರ ಸಲ್ಲಿಕೆ ನಂತರ ಕಣ್ಣೀರಿನ ನಾಟಕ ಪ್ರಾರಂಭ: ಡಿ.ಕೆ ಸುರೇಶ್
ಜೆಡಿಎಸ್ ಪಕ್ಷಕ್ಕೆ ಕುಮಾರಸ್ವಾಮಿ ಅವರೇ ಅಧಿನಾಯಕರು. ಎಲ್ಲವೂ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಲವಂತವಾಗಿ ಚುನಾವಣೆಗೆ ನಿಖಿಲ್ ಅವರನ್ನು ನಿಲ್ಲಿಸಲಾಗುತ್ತಿದೆ ಎನ್ನುವುದೆಲ್ಲಾ ಸುಳ್ಳು, ಅವರ ಉದ್ದೇಶ ಈ ಮೂಲಕ ಫಲ ನೀಡಿದೆ ಎಂದರು.

ಎರಡು ಬಾರಿ ಸೋತಿರುವ ನಿಖಿಲ್ ಕುಮಾರಸ್ವಾಮಿಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ: ಸಿ.ಪಿ ಯೋಗೇಶ್ವರ್
ಯೋಗೇಶ್ವರ ಅವರು ಈ ಹಿಂದೆ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಲು ಶ್ರಮಿಸಿದ್ದು. ಉತ್ತಮ ಶಾಸಕರಾಗಿ ಜನಪ್ರಿಯತೆ ಪಡೆದಿರುವ ಹಿನ್ನೆಲೆಯಲ್ಲಿ 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ಸಿಎಂ ಹೇಳಿದರು.

ಯೋಗೇಶ್ವರ್ ಹುಲಿ ಬೋನಿಗೆ ಹೋಗಿದ್ದಾರೆ, ಹುಲಿ ಮಣಿಸ್ತಾರಾ? ಬಲಿಯಾಗ್ತಾರಾ? ಕಾದು ನೋಡಬೇಕು: ಸಿ.ಟಿ ರವಿ
ಡಿ.ಕೆ.ಶಿವಕುಮಾರ್ ಅವರಂತಹ ಪ್ರಬಲ ನಾಯಕರು ಹಾಗೂ 136 ಶಾಸಕರು ಇದ್ದರೂ ಯೋಗೇಶ್ವರ್ ಅವರಿಗೆ ಚುನಾವಣೆಗೆ ಟಿಕೆಟ್ ನೀಡುತ್ತಿದ್ದಾರೆ. ಇದು ಕಾಂಗ್ರೆಸ್ ತನ್ನ ದೌರ್ಬಲ್ಯವನ್ನು ಈಗಾಗಲೇ ಒಪ್ಪಿಕೊಂಡಿದೆ ಎಂದು ಅವರು ಹೇಳಿದರು.

ಯೋಗೇಶ್ವರ್ ಬಿಜೆಪಿಯ ಕಟ್ಟಾಳು ಅಲ್ಲ; ತಮ್ಮ ಕಾಲಿನ ಮೇಲೆ ತಾವೇ ಕಲ್ಲಾಕಿಕೊಂಡಿದ್ದಾರೆ: ಆರ್.ಅಶೋಕ್
ಯೋಗೇಶ್ವರ್ ಅವರನ್ನು ಉಳಿಸಿಕೊಳ್ಳಲು ಹೈಕಮಾಂಡ್ ಜೊತೆ ಚರ್ಚೆ ಮಾಡಿದ್ದೆವು. ಅವರು ಐದು ಕಡೆಯಿಂದ ಬಿ ಫಾರಂ ತಂದಿದ್ದರು ಎಂದು ಸುದ್ದಿ ಇದೆ. ನಮ್ಮ ಮಾತು ಕೇಳದೆ ಕಾಂಗ್ರೆಸ್ ಸೇರಿದ್ದಾರೆ ಎಂದರು.

ರಾಜ್ಯದ ಗಮನ ಸೆಳೆದ ಚನ್ನಪಟ್ಟಣ: ನಿಖಿಲ್ ಗೆ ಬಲವಂತದ ಮಾಘಸ್ನಾನ; ಬೊಂಬೆನಾಡಿನಲ್ಲಿ 'ಸನ್ ರೈಸ್' ಗಾಗಿ HDK ಪಣ!
ಕಾಂಗ್ರೆಸ್ ಪಕ್ಷ ಸೇರಲು ಸಜ್ಜಾಗಿರುವ ಸಿ.ಪಿ.ಯೋಗೇಶ್ವರ್ ಜೇಬಿನಲ್ಲಿ ಐದು ಬಿ ಫಾರಂ ಇಟ್ಟುಕೊಂಡು ತಿರುಗಾಡುತ್ತಿದ್ದಾರೆಂಬ ಮಾಹಿತಿ ಬಂದಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

