Chandrayaan-2

ಇಸ್ರೋ ಭಾರತದ ಹೆಮ್ಮೆ: ವಿಜ್ಞಾನಿಗಳ ಅವಿರತ ಪರಿಶ್ರಮಕ್ಕೆ ಬೆನ್ತಟ್ಟಿದ ಭಾರತ
ಇಡೀ ವಿಶ್ವವೇ ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯ ಸಂಪರ್ಕ ಕೊನೆ ಕ್ಷಣದಲ್ಲಿ ಕಡಿತಗೊಂಡು ನಿರಾಸೆ ಮೂಡಿಸಿದ್ದರೂ, ಇಸ್ರೋ ವಿಜ್ಞಾನಿಗಳು ಕೋಟ್ಯಾಂತರ ಭಾರತೀಯರ ಹೃದಯ ಗೆದ್ದಿದ್ದಾರೆ.

ಇಸ್ರೋ ಅಸಾಧಾರಣ ಕಾರ್ಯತತ್ವ, ಧೈರ್ಯ ಕೊಂಡಾಡಿದ ರಾಷ್ಟ್ರಪತಿ ಕೋವಿಂದ್
ಚಂದ್ರಯಾನ-2 ಮೂಲಕ ಭಾರತದ ಜಾಣ್ಮೆ ಮತ್ತು ದೃಢತೆಯನ್ನು ಇಡೀ ವಿಶ್ವದ ಮುಂದಿಟ್ಟಿರುವ ಇಸ್ರೋವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಕ್ರವಾರ ಕೊಂಡಾಡಿದ್ದಾರೆ.

ಎಲ್ಲವೂ ಯೋಜನೆಯ ಪ್ರಕಾರವೇ ನಡೆಯುತ್ತಿದೆ: ವಿಕ್ರಮ್ ಲ್ಯಾಂಡಿಂಗ್ ಕುರಿತು ಇಸ್ರೋ ಮುಖ್ಯಸ್ಥ
ಚಂದ್ರಯಾನ-2 ಬಾಹ್ಯಾಕಾಶ ನೌಕೆ 'ವಿಕ್ರಮ್' ಲ್ಯಾಂಡರ್ ಅನ್ನು ಚಂದ್ರನ ಮೇಲೆ ಸುರಕ್ಷಿತವಾಗಿ ಲ್ಯಾಂಡ್ ಮಾಡುವ ಐತಿಹಾಸಿಕ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದ್ದು, ನಮ್ಮ ಯೋಜನೆಯ...

ಬೆಂಗಳೂರಿಗೆ ಪ್ರಧಾನಿ ಮೋದಿ: ವಿದ್ಯಾರ್ಥಿಗಳ ಜತೆಗೂಡಿ ಇಸ್ರೋ ಸಾಧನೆ ವೀಕ್ಷಣೆ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ರಾಜಧಾನಿಗೆ ಆಗಮಿಸಲಿದ್ದು, 70 ವಿದ್ಯಾರ್ಥಿಗಳ ಜೊತೆ ಗೂಡಿ ಇಸ್ರೋ ನಡೆಸಿರುವ ಚಂದ್ರಯಾನ-2 ಸಾಧನೆಯನ್ನು ವೀಕ್ಷಣೆ ಮಾಡಲಿದ್ದಾರೆ.

ಚಂದ್ರನ ದಕ್ಷಿಣ ಧ್ರುವದಲ್ಲಿ 'ವಿಕ್ರಮ್' ಇಳಿಕೆ: ಇಸ್ರೋ ಸಾಹಸಕ್ಕೆ ಕ್ಷಣಗಣನೆ ಆರಂಭ
ಚಂದ್ರನ ಮೇಲೆ ಲ್ಯಾಂಡರ್ ಇಳಿಸಿವ ಇಸ್ರೋ ಸಾಹಸವನ್ನು ನೋಡಲು ಇಡೀ ದೇಶ ಕಾತರದಿಂದ ಕಾಯುತ್ತಿದ್ದ ಘಳಿಗೆ ಇನ್ನೇನು ಹತ್ತಿರವಾಗುತ್ತಿದೆ. ಶುಕ್ರವಾರ ತಡರಾತ್ರಿ ಚಂದ್ರನಲ್ಲಿರುವ ಕಾಣಿಸದ ನೆಲದಲ್ಲಿ ಇಳಿಯುವ ಸಾಹಸವನ್ನು ವಿಕ್ರಮ್ ನಡೆಸಲಿದೆ.

ಚಂದ್ರಯಾನ-2: ಮೊದಲ ಹಂತದ ಮೂನ್ ಲ್ಯಾಂಡರ್ ಡಿ-ಆರ್ಬಿಟ್ ಮ್ಯಾನೋವರ್ ಯಶಸ್ವಿ
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2ನ ಮತ್ತೊಂದು ಹಂತ ಕೂಡ ಯಶಸ್ವಿಯಾಗಿದ್ದು, ಮೊದಲ ಹಂತದ ಮೂನ್ ಲ್ಯಾಂಡರ್ ಡಿ-ಆರ್ಬಿಟ್ ಮೆನೋವರ್ ಪ್ರಕ್ರಿಯೆಯನ್ನು ವಿಜ್ಞಾನಿಗಳು ಮಂಗಳವಾರ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಚಂದ್ರಯಾನ-2 ಪಾದಾರ್ಪಣೆ: ಪ್ರಧಾನಿ ಜೊತೆ ವೀಕ್ಷಿಸಲಿರುವ ರಾಯಚೂರು ಹುಡುಗಿ
ಚಂದ್ರಯಾನ-2 ಗಗನ ನೌಕೆ ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕುಳಿತು ನೇರ ಪ್ರಸಾರ ಕಣ್ತುಂಬಿಕೊಳ್ಳುವ ಅವಕಾಶ ಬಿಸಿಲನಾಡು ರಾಯಚೂರಿನ ವಿದ್ಯಾರ್ಥಿನಿ ವೈಷ್ಣವಿಗೆ ಲಭಿಸಿದೆ.

ಚಂದ್ರಯಾನ-2; ಇಸ್ರೋ ಐತಿಹಾಸಿಕ ಸಾಧನೆ, ಆರ್ಬಿಟರ್ ನಿಂದ ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್!
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ಚಂದ್ರಯಾನ 2 ಆರ್ಬಿಟರ್ ನಿಂದ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಬೇರ್ಪಟ್ಟಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇಸ್ರೋ ಸ್ಪರ್ಧೆಯಲ್ಲಿ ವೈಷ್ಣವಿ ಪ್ರಥಮ: ಪ್ರಧಾನಿಯೊಂದಿಗೆ ಚಂದ್ರಯಾನ-2 ಇಳಿಯುವ ಕ್ಷಣ ವೀಕ್ಷಿಸಲು ಅವಕಾಶ
ಬೆಂಗಳೂರಿನ ಇಸ್ರೋ ಸಂಸ್ಥೆ ನಡೆಸಿದ ಸ್ಪರ್ಧೆಯಲ್ಲಿ ಸಿಂಧನೂರಿನ ಡಾಡಿಲ್ಸ್ ಕಾನ್ಸೆಪ್ಟ್ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿ ವೈಷ್ಣವಿ ಜಿ ನಾಗರಾಜ ಆಯ್ಕೆಯಾಗಿದ್ದು, ಸೆಪ್ಟೆಂಬರ್ 7 ರಂದು ಚಂದ್ರಯಾನ-2 ನೌಕೆ ಇಳಿಯುವ ಅಭೂತಪೂರ್ವ ಕ್ಷಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ವೀಕ್ಷಣೆ ಮಾಡಲಿದ್ದಾರೆ.

