Challenging Star Darshan

ಬಹುನಿರೀಕ್ಷಿತ ಸಿನಿಮಾಗಳ ಪೈಪೋಟಿ: ಡಾಲಿ ಧನಂಜಯ್ ನಟನೆಯ 'ಉತ್ತರಕಾಂಡ' ಡಿಸೆಂಬರ್‌ನಲ್ಲಿ ತೆರೆಗೆ ಬರಲು ಸಿದ್ಧ
ಡಿಸೆಂಬರ್ ತಿಂಗಳಿನಲ್ಲಿ ರಾಜ್ಯದ ಎಲ್ಲಾ ಚಿತ್ರಮಂದಿರಗಳು ಭರ್ತಿಯಾಗಲಿವೆ. ಏಕೆಂದರೆ, ಆ ವೇಳೆಗೆ ಕನ್ನಡದ ಬಹುನಿರೀಕ್ಷಿತ ಹಲವು ಸಿನಿಮಾಗಳು ತೆರೆಗೆ ಬರಲು ಯೋಜಿಸುತ್ತಿದ್ದು, ಪ್ರೇಕ್ಷಕರಿಗೆ ಹಬ್ಬ. ದರ್ಶನ್, ಧ್ರುವ ಸರ್ಜಾ ಮತ್ತು ಡಾಲಿ ಧನಂಜಯ್ ಅಭಿನಯದ ತೀವ್ರ ಕುತೂಹಲ ಕೆರಳಿಸಿರುವ ಸಿನಿಮಾಗಳು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲು ಸಿದ್ಧವಾಗುತ್ತಿವೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ‘ಡೆವಿಲ್’ ಟೀಸರ್ ಟ್ರೀಟ್...

'ಡೆವಿಲ್-ದಿ ಹೀರೋ' ಚಿತ್ರೀಕರಣಕ್ಕೂ ಮುನ್ನವೇ ಭರ್ಜರಿ ಬೆಲೆಗೆ ಚಿತ್ರದ ಆಡಿಯೋ ಹಕ್ಕು ಮಾರಾಟ!
ಕಾಟೇರ ಚಿತ್ರದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಚಿತ್ರ ಡೆವಿಲ್-ದಿ ಹೀರೋ ಈಗಾಗಲೇ ಭಾರಿ ಸದ್ದು ಮಾಡುತ್ತಿದೆ. ಪ್ರಕಾಶ್ ವೀರ್ ನಿರ್ದೇಶನದ ಈ ಚಿತ್ರದ ಘೋಷಣೆಯಾದಾಗಿನಿಂದ ಸಖತ್ ಸೌಂಡ್ ಮಾಡುತ್ತಿದೆ.

ಹುಟ್ಟುಹಬ್ಬಕ್ಕೆ ಮುನ್ನ ಕುಟುಂಬ ಸದಸ್ಯರು-ಆಪ್ತರ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಕಾಟೇರ ಸಿನಿಮಾದ ಯಶಸ್ಸು ಮತ್ತು ಮುಂದಿನ ಡೆವಿಲ್ ಚಿತ್ರದ ಆರಂಭಕ್ಕೆ ಮುನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ, ಮಗ ಮತ್ತು ಅವರ ಸ್ನೇಹಿತರ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಇದರ ಫೋಟೋ ವಿಡಿಯೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಹರಿದಾಡುತ್ತಿವೆ.

'ಡೆವಿಲ್' ಚಿತ್ರದ ಬಗ್ಗೆ ವದಂತಿ ಬೇಡ, ಎಲ್ಲದಕ್ಕೂ ಫೆ.16 ದರ್ಶನ್ ಹುಟ್ಟುಹಬ್ಬ ದಿನ ಉತ್ತರ: ನಿರ್ದೇಶಕ ಮಿಲನ ಪ್ರಕಾಶ್
ಕಾಟೇರ ಚಿತ್ರದ ಯಶಸ್ಸಿನ ನಂತರ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ಮುಂಬರುವ ಸಿನಿಮಾಗಳ ಮೇಲೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ‘ಮಿಲನ’ ಚಿತ್ರದ ಖ್ಯಾತಿಯ ನಿರ್ದೇಶಕ ಪ್ರಕಾಶ್ ವೀರ್ ಅವರು ದರ್ಶನ್ ಜೊತೆ ಹೊಸ ಸಿನಿಮಾ ಮಾಡುತ್ತಿದ್ದು, ಅದರ ಶೀರ್ಷಿಕೆ 'ಡೆವಿಲ್’ ಎಂದು ಇಡಲಾಗಿದೆ.

ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡ ಪವಿತ್ರ ಗೌಡ: ಕಾನೂನು ಹೋರಾಟದ ಎಚ್ಚರಿಕೆ ನೀಡಿದ ವಿಜಯಲಕ್ಷ್ಮಿ...!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವೈಯಕ್ತಿಕ ಜೀವನ ಮತ್ತೆ ಸುದ್ದಿಯಾಗಿದೆ. ನಟಿ ಪವಿತ್ರ ಗೌಡ ಅವರು ತಾವು ಮತ್ತು ತಮ್ಮ ಪುತ್ರಿ ದರ್ಶನ್ ಅವರ ಜೊತೆ ಆತ್ಮೀಯವಾಗಿರುವ ಫೋಟೋ ಹಂಚಿಕೊಂಡು ಈ ಸಂಬಂಧಕ್ಕೆ 10 ವರ್ಷ ಎಂದು ಬರೆದುಕೊಂಡಿದ್ದು ಅದನ್ನು ನೋಡಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಕೆಂಡಮಂಡಲವಾಗಿದ್ದಾರೆ.

ನಿಲ್ಲದ ಕಾಟೇರ ಅಬ್ಬರ; ಫೆಬ್ರುವರಿಯಲ್ಲಿ ತಮಿಳು, ತೆಲುಗು, ಹಿಂದಿಯಲ್ಲಿ ತೆರೆಕಾಣಲಿದೆ ದರ್ಶನ್ ಅಭಿನಯದ ಚಿತ್ರ
ತರುಣ್ ಕಿಶೋರ್ ಸುಧೀರ್ ನಿರ್ದೇಶನದ ದರ್ಶನ್ ಅಭಿನಯದ ಕಾಟೇರ ಮೂರನೇ ವಾರವು ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಕರ್ನಾಟಕದಲ್ಲಿ ವಿವಿಧ ಭಾಷೆಗಳು ಸೇರಿದಂತೆ ಇತರ ಸಿನಿಮಾಗಳು ಬಿಡುಗಡೆಯಾಗಿದ್ದರೂ, ಕಾಟೇರ ಸುಮಾರು 416 ಚಿತ್ರಮಂದಿರಗಳಲ್ಲಿ ಮತ್ತು 72 ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ.

ಬಾಕ್ಸ್ ಆಫಿಸ್‌ನಲ್ಲಿ ನಿಲ್ಲದ ದರ್ಶನ್ ಅಬ್ಬರ: ಮೂರನೇ ವಾರವೂ 'ಕಾಟೇರ' ಭರ್ಜರಿ ಪ್ರದರ್ಶನ, ಸದ್ಯ ಗಳಿಸಿರುವುದೆಷ್ಟು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್ ಅಭಿನಯದ ಕಾಟೇರ ಸಿನಿಮಾ ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದಿನದಿಂದ ದಿನಕ್ಕೆ ಕಾಟೇರ ಕ್ರೇಜ್ ಹೆಚ್ಚುತ್ತಿದ್ದು, ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆತರುವಲ್ಲಿ ಕಾಟೇರ ಯಶಸ್ವಿಯಾಗಿದೆ.

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ದರ್ಶನ್ ಅಭಿನಯದ 'ಕಾಟೇರ': 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ರಿಲೀಸ್ ಆದ ಮೊದಲ ವಾರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವುದಕ್ಕೆ ದರ್ಶನ್ ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ.

