Centre

ಸಂಸತ್ತಿನ ಬಜೆಟ್ ಅಧಿವೇಶನ: ಜುಲೈ 21ಕ್ಕೆ ಸರ್ವ ಪಕ್ಷ ಸಭೆ, ಟಿಎಂಸಿ ಗೈರು
ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 22 ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 12 ರಂದು ಮುಕ್ತಾಯಗೊಳ್ಳಲಿದೆ. ಜುಲೈ 23 ರಂದು ಬಜೆಟ್ ಮಂಡಿಸಲಾಗುವುದು. ಹುತಾತ್ಮರ ದಿನವಾದ ಜುಲೈ 21 ರಂದು ಸರ್ವ ಪಕ್ಷ ಸಭೆಯಲ್ಲಿ ಪಕ್ಷದ ಯಾವುದೇ ಪ್ರತಿನಿಧಿಗಳು ಹಾಜರಾಗುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಮೂಲಗಳು ಹೇಳಿವೆ.

ಬಿಹಾರಕ್ಕೆ ವಿಶೇಷ ಸ್ಥಾನಮಾನ ಬೇಡಿಕೆಯನ್ನು ಬಿಗಿಗೊಳಿಸುತ್ತೇವೆ: ನಿತೀಶ್ ಆಪ್ತ
ಮಾಜಿ ಐಎಎಸ್ ಅಧಿಕಾರಿ ವರ್ಮಾ ಅವರು ನಿತೀಶ್ ಕುಮಾರ್ ಮುಂದಿನ ಉತ್ತರಾಧಿಕಾರಿ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಬಿಹಾರ ವಿಶೇಷ ಸ್ಥಾನಮಾನ ಕುರಿತು ಅವರ ಹೇಳಿಕೆ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ಸಿಖ್ಸ್ ಫಾರ್ ಜಸ್ಟಿಸ್ ಮೇಲಿನ ನಿಷೇಧ ಮತ್ತೆ 5 ವರ್ಷ ವಿಸ್ತರಿಸಿದ ಕೇಂದ್ರ
ಎಸ್‌ಎಫ್‌ಜೆಯನ್ನು ಐದು ವರ್ಷಗಳ ಹಿಂದೆ ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯ್ದೆಯಡಿ ನಿಷೇಧಿತ ಸಂಘಟನೆ ಎಂದು ಘೋಷಿಸಲಾಗಿದ್ದು, ಈ ನಿಷೇಧವನ್ನು 5 ವರ್ಷಗಳವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.

ಮಹದಾಯಿ ನೀರು ವಿವಾದ: ಕಣಕುಂಬಿಗೆ ಕೇಂದ್ರ 'ಪ್ರವಾಹ್' ತಂಡ ಭೇಟಿ, ಪರಿಶೀಲನೆ
ಯೋಜನೆ ನಕ್ಷೆಯೊಂದಿಗೆ ಕೇಂದ್ರದ ತಂಡಕ್ಕೆ ನೀರಾವರಿ ಅಧಿಕಾರಿಗಳು ವಿವರಿಸಿ ಗೋವಾ ಆರೋಪಿಸುತ್ತಿರುವ ಪ್ರಕಾರ ಯೋಜನೆ ಪ್ರದೇಶದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು.

ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುವ ಮಹಿಳಾ ಸಿಬ್ಬಂದಿಗೂ 6 ತಿಂಗಳ ಹೆರಿಗೆ ರಜೆ
ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಮಹಿಳಾ ಸರ್ಕಾರಿ ನೌಕರರಿಗೆ ಹೆರಿಗೆ ರಜೆ ನೀಡಲು ಇದುವರೆಗೂ ಯಾವುದೇ ನಿಯಮವಿರಲಿಲ್ಲ.

ಹಣಕಾಸು ಆಯೋಗ ಶಿಫಾರಸ್ಸಿನಂತೆ 11,495 ಕೋಟಿ ರೂ. ಅನುದಾನ ಬಿಡುಗಡೆಗೆ ಕೇಂದ್ರಕ್ಕೆ ಒತ್ತಾಯ: ಕೃಷ್ಣ ಬೈರೇಗೌಡ
ಹಣಕಾಸು ಆಯೋಗ ಶಿಫಾರಸು ಮಾಡಿರುವ ರೂ.11,495 ಕೋಟಿ ಅನುದಾನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ರಾಮನಗರ: ರಾಜ್ಯದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ- ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ರಾಜ್ಯದ ಹಲವು ಸಮಸ್ಯೆಗಳ ಪರಿಹಾರಕ್ಕೆ ಪ್ರಮಾಣಿಕ ಯತ್ನ ಮಾಡುವ ಮೂಲಕ ರಾಜ್ಯದ ಅಭಿವೃದ್ದಿಗೆ ಆದ್ಯತೆ ಮೇಲೆ ಕ್ರಮ ವಹಿಸುವೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆಯ ಸಚಿವ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

RBI ನಿಂದ ಕೇಂದ್ರ ಸರ್ಕಾರಕ್ಕೆ ದಾಖಲೆಯ 2.11 ಲಕ್ಷ ಕೋಟಿ ರೂ. ಡಿವಿಡೆಂಡ್
2024ನೇ ಸಾಲಿನ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ದಾಖಲೆಯ 2.11 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ವರ್ಗಾವಣೆ/ಲಾಭಾಂಶ ಪಾವತಿ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಬುಧವಾರ ನಿರ್ಧರಿಸಿದೆ.

ಭಾರತದಿಂದ ರಫ್ತು ಮಾಡುವ ಮಸಾಲೆ ಪದಾರ್ಥಗಳಲ್ಲಿ EtO ಮಾಲಿನ್ಯ ತಡೆಗೆ ಕೇಂದ್ರ ಸರ್ಕಾರ ಮಾರ್ಗಸೂಚಿ!
ಕೆಲವು ಮಸಾಲೆ ಪದಾರ್ಥಗಳಲ್ಲಿ EtO ಅಂಶದಿಂದಾಗಿ ಸಿಂಗಾಪುರ ಮತ್ತು ಹಾಂಗ್ ಕಾಂಗ್‌ನಲ್ಲಿ ಭಾರತದ ಎರಡು ಮಸಾಲೆ ಬ್ರಾಂಡ್ ಗಳಾದ MDH ಮತ್ತು ಎವರೆಸ್ಟ್ ಉತ್ಪನ್ನಗಳ ವಾಪಸ್ ಪಡೆಯುತ್ತಿರುವ ವರದಿಗಳ ಬೆನ್ನಲ್ಲೆ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ.

