Central Government

ಕಳೆದ ಎರಡೂವರೆ ತಿಂಗಳಲ್ಲಿ ಎಲ್ ಐಸಿಗೆ 57 ಸಾವಿರ ಕೋಟಿ ನಷ್ಟ- ಪ್ರಿಯಾಂಕಾ ಪ್ರಶ್ನೆ
ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ಮುಂದುವರೆಸಿದ್ದು, ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರದ ನೀತಿಗಳನ್ನು ಪ್ರಶ್ನಿಸಿದ್ದಾರೆ.

ಮಹದಾಯಿ ಯೋಜನೆ; ಕೇಂದ್ರ ಸರ್ಕಾರದ ಒಪ್ಪಿಗೆಗೆ ಕಾಯುತ್ತಿರುವ ಕರ್ನಾಟಕ
ಕರ್ನಾಟಕ ಭಾಗದ 13.42 ಟಿಎಂಸಿ ನೀರು ಹಂಚಿಕೆ ಮಾಡುವಂತೆ ಕಳೆದ ವರ್ಷ ಆಗಸ್ಟ್ 14ರಂದು ಮಹದಾಯಿ ನೀರು ಹಂಚಿಕೆ ವಿವಾದ ನ್ಯಾಯಮಂಡಳಿ(ಎಂಡಬ್ಲ್ಯುಡಿಟಿ) ತೀರ್ಪು ನೀಡಿದ್ದರೂ ಕೂಡ ಕೇಂದ್ರ ಸರ್ಕಾರ ಕರ್ನಾಟಕ-ಗೋವಾ ಗಡಿಯಲ್ಲಿ ಮಹದಾಯಿ ಯೋಜನೆ ಆರಂಭಕ್ಕೆ ಗೆಜೆಟ್ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ನಿರಾಕರಿಸುತ್ತಿದೆ.

ಕನ್ನಡದಲ್ಲಿಲ್ಲ ಐಬಿಪಿಎಸ್ ಪರೀಕ್ಷೆ: ಕೇಂದ್ರದ ವಿರುದ್ಧ ಎಚ್ ಡಿಕೆ ಕಿಡಿ
ಕನ್ನಡಿಗರ ಹಲವು ಬೇಡಿಕೆಗಳ ಹೂರತಾಗಿಯೂ ರಾಷ್ಟ್ರೀಕೃತ ಬ್ಯಾಂಕ್ ಗಳ ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ-ಐಬಿಪಿಎಸ್ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದೆ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೇಂದ್ರಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ತಲುಪಿದರೂ ಕೇಂದ್ರಸರ್ಕಾರದಿಂದ ದ್ವೇಷದ ರಾಜಕೀಯ - ಸೋನಿಯಾ ಗಾಂಧಿ
ದೇಶದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ತಲುಪಿದೆ ಆದರೆ, ಕೇಂದ್ರ ಸರ್ಕಾರ ದ್ವೇಷದ ರಾಜಕೀಯದಲ್ಲಿ ತೊಡಗಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

7 ವರ್ಷಗಳಲ್ಲಿ ಮಿಲಿಟರಿ ಆಧುನೀಕರಣಕ್ಕೆ ಕ್ರಮ; ಕೇಂದ್ರದಿಂದ 130 ಶತಕೋಟಿ ರೂ. ವೆಚ್ಚ
ದೇಶದಲ್ಲಿ ಭದ್ರತೆ ವಿಚಾರದಲ್ಲಿ ಸಂಕೀರ್ಣ ಪರಿಸ್ಥಿತಿ ಇರುವಂತಹ ಸಂದರ್ಭದಲ್ಲಿ ಮಿಲಿಟರಿ ಪಡೆಯನ್ನು ಆಧುನೀಕರಣಗೊಳಿಸಿ ಬಲಪಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ನಿಧಾನಗತಿಯ ಆರ್ಥಿಕ ಬೆಳವಣಿಗೆ: ಜಿಎಸ್ಟಿ ಸಂಗ್ರಹ 98,202 ಕೋಟಿಗೆ ಇಳಿಕೆ!
ನಿಧಾನಗತಿಯ ಆರ್ಥಿಕ ಬೆಳವಣಿಗೆಯಿಂದಾಗಿ ಆಗಸ್ಟ್ ತಿಂಗಳಿನಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) 98,202 ಕೋಟಿ ಸಂಗ್ರಹವಾಗಿದ್ದು ಜುಲೈ ತಿಂಗಳಿಗೆ ಹೋಲಿಸಿಕೊಂಡರೆ ಜಿಎಸ್ಟಿ ಸಂಗ್ರಹ ಇಳಿಮುಖವಾಗಿದೆ.

ದೇಶಾದ್ಯಂತ 12,500 ಆಯುಷ್ ಕೇಂದ್ರ ಸ್ಥಾಪನೆಯ ಗುರಿ: ಪ್ರಧಾನಿ ಮೋದಿ
ದೇಶಾದ್ಯಂತ 12,500 ಆಯುಷ್ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಐಎಂಎ ಹಗರಣ ತನಿಖೆ ತ್ವರಿತಗೊಳಿಸಲು ಸಿಬಿಐಗೆ ನಿರ್ದೇಶನ ನೀಡಿ: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್
ಐಎಂಎ ಹಗರಣದಲ್ಲಿ ತನಿಖೆಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳುವಂತೆ ಸಿಬಿಐಗೆ ಕೇಂದ್ರ ಸರ್ಕಾರ ನೊಟೀಸ್ ಹೊರಡಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.

ಕಾಶ್ಮೀರದ ಭಿನ್ನಾಭಿಪ್ರಾಯದ ಧ್ವನಿಗಳನ್ನು ಕೇಂದ್ರ ಸರ್ಕಾರ ಅಡಗಿಸುತ್ತಿದೆ: ಮಮತಾ ಬ್ಯಾನರ್ಜಿ
ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಂಟುಮಾಡಿರುವ ವಿವಾದ ಚಾಲ್ತಿಯಲ್ಲಿರುವಾಗಲೇ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

