CCB

ಡ್ರಗ್ಸ್ ಪ್ರಕರಣ: ನಟ ದಿಗಂತ್'ಗೆ ತಪ್ಪದ ಕಂಟಕ, ಮತ್ತೆ ವಿಚಾರಣೆಗೆ ಸಿಸಿಬಿ ಮುಂದೆ ಹಾಜರ್!
ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿ ನಟ ದಿಗಂತ್ ಅವರು ಬುಧವಾರ ಮತ್ತೆ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.

ಡ್ರಗ್ಸ್ ಕೇಸ್: ಆದಿತ್ಯ ಆಳ್ವ ದೇಶ ಬಿಟ್ಟು ಹೋಗದಂತೆ ತಡೆಯಲು ಸಿಸಿಬಿ ಲುಕ್ ಔಟ್ ನೋಟಿಸ್
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಆರನೇ ಆರೋಪಿಯಾಗಿರುವ ಆದಿತ್ಯ ಆಳ್ವ ದೇಶ ಬಿಟ್ಟು ಪರಾರಿಯಾಗದಂತೆ ತಡೆಯಲು ಸಿಸಿಬಿ ಪೊಲೀಸರು ಲುಕ್ ಔಟ್ ನೋಟಿಸ್ ನೀಡಿದ್ದಾರೆ.

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ನಟಿ ರಾಗಿಣಿ, ಸಂಜನಾಗೆ ಇನ್ನು 3 ದಿನ ಜೈಲು ಫಿಕ್ಸ್!
ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಪ್ರಕರಣ ಸಂಬಂಧ ನಟಿ ರಾಗಿಣಿ, ಸಂಜನಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಎನ್ ಡಿಪಿಎಸ್ ವಿಶೇಷ ಕೋರ್ಟ್ ಸೆಪ್ಟೆಂಬರ್ 24ಕ್ಕೆ ಮುಂದೂಡಿದೆ.

ನಿರೂಪಕ ಅಕುಲ್ ಬಾಲಾಜಿ ಸೇರಿ ಮೂವರು ಸಿಸಿಬಿ ಎದುರು ಹಾಜರು
ಚಂದನವನಕ್ಕೆ ಮಾದಕ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಆರ್ ವಿ .ದೇವರಾಜ್ ಅವರ ಪುತ್ರ ಯುವರಾಜ್, ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸಂತೋಷ್ ಆರ್ಯನ್ ಹಾಗೂ ನಟ, ನಿರೂಪಕ ಅಕುಲ್ ಬಾಲಾಜಿ ಸಿಸಿಬಿ ಕಚೇರಿ ಬಂದು ವಿಚಾರಣೆಗೆ ಹಾಜರಾಗಿದ್ದಾರೆ.

ಡ್ರಗ್ ಮಾಫಿಯಾ: ಚಿತ್ರರಂಗದ ಇಬ್ಬರು ಸ್ಟಾರ್ ನಟರ ವಿವರ ಬಹಿರಂಗಪಡಿಸುತ್ತೇನೆ- ಪ್ರಶಾಂತ್ ಸಂಬರಗಿ ಹೊಸ ಬಾಂಬ್
ಡ್ರಗ್ಸ್ ಜಾಲದ ಕುರಿತಂತೆ ಸಾಕಷ್ಟು ಮಾಹಿತಿಗಳನ್ನು ನೀಡುತ್ತಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇದೀಗ ಚಿತ್ರರಂಗದ ಇಬ್ಬರು ಸ್ಟಾರ್ ನಟರ ವಿವರ ಬಹಿರಂಗಪಡಿಸುವುದಾಗಿ ಬಾಂಬ್ ಸಿಡಿಸಿದ್ದಾರೆ.

ಡ್ರಗ್ಸ್ ಸಾಗಾಟ ಆರೋಪ: ಮಂಗಳೂರಿನಲ್ಲಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ
ಪ್ರಸಿದ್ಧ ಡ್ಯಾನ್ಸರ್ ಕಿಶೋರ್ ಅಮನ್ ಅಲಿಯಾಸ್ ಕಿಶೋರ್ ಶೆಟ್ಟಿಯನ್ನು ಸೆಪ್ಟೆಂಬರ್ 19 ರ ಶನಿವಾರ ಮಂಗಳೂರು ನಗರ ಕ್ರೈಂ ಬ್ರ್ಯಾಂಚ್ ಪೊಲೀಸರು (ಸಿಸಿಬಿ) ಬಂಧಿಸಿದ್ದಾರೆ. ಆತ ಮಾದಕ ವಸ್ತು ಸಾಗಾಟ ನಡೆಸಿದ್ದನೆಂದು ವರದಿಯಾಗಿದೆ.

ಸ್ಯಾಂಡಲ್'ವುಡ್ ಡ್ರಗ್ಸ್ ದಂಧೆ ಪ್ರಕರಣ: ಮತ್ತಷ್ಟು ನಟ-ನಟಿಯರು, ಗಣ್ಯರ ಮೇಲೆ ಸಿಸಿಬಿ ಕಣ್ಣು
ಚಿತ್ರರಂಗದಲ್ಲಿನ ಮಾದಕ ವಸ್ತು ಮಾರಾಟ ಜಾಲದ ನಂಟು ಸಂಬಂಧ ಇಬ್ಬರು ನಟಿಯರು ಹಾಗೂ ಸ್ಟಾರ್ ದಂಪತಿ ಬಳಿಕ ಮತ್ತಷ್ಟು ನಟ-ನಟಿಯರು ಹಾಗೂ ಗಣ್ಯರಿಗೂ ಶೀಘ್ರದಲ್ಲಿಯೇ ಸಂಕಷ್ಟ ಎದುರಾಗಲಿದೆ.

ಬೆಂಗಳೂರು: ಇಬ್ಬರು ಡ್ರಗ್ಸ್ ಪೆಡ್ಲರ್ ಗಳ ಬಂಧಿಸಿದ ಸಿಸಿಬಿ ಪೊಲೀಸರು, ರೂ.4 ಲಕ್ಷ ಮೌಲ್ಯದ ವಸ್ತು ವಶ
ಜೆಲ್ಲಿ ಮಾದರಿಯ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಆರೋಪಿಗಳಿಂದ 4 ಲಕ್ಷ ರೂ. ಬೆಲೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಡಿಜೆ ಹಳ್ಳಿ ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್'ಗೆ ಮತ್ತೆ ಸಿಸಿಬಿ ಬುಲಾವ್
ಇತ್ತೀಚೆಗೆ ನಡೆದಿದ್ದ ಡಿಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ಹಾಗೂ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ವಿಚಾರಣೆಗೆ ಬರುವಂತೆ ಸಿಸಿಬಿಯು ಗುರುವಾರ ಎರಡನೇ ಬಾರಿಗೆ ನೋಟಿಸ್ ಜಾರಿ ಮಾಡಿದೆ.

