Cauvery

ಕಾವೇರಿ ವಿವಾದ: ಕೇಂದ್ರ ಸರ್ಕಾರದಿಂದ ಅಸಾಧ್ಯ, ಸೋನಿಯಾ ಗಾಂಧಿಯೇ ಸಮಸ್ಯೆ ಬಗೆಹರಿಸಲಿ; ಬಿಜೆಪಿ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಬಿಜೆಪಿ ನಾಯಕರು ಶನಿವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ವಿವಾದ ಸಂಬಂಧ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.

ಕರ್ನಾಟಕ ಕಾವೇರಿ ನದಿಯ ಮಾಲೀಕನಲ್ಲ: ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ನಿಲ್ಲಿಸುವಂತೆ ಕರ್ನಾಟಕಗಳಲ್ಲಿ ಭಾರೀ ಹೋರಾಟ ನಡೆಯುತ್ತಿದ್ದು, ಈ ನಡುವಲ್ಲೇ ಕನ್ನಡಿಗರ ಕಣ್ಣು ಮತ್ತಷ್ಟು ಕೆಂಪಗಾಗುವಂತಹ ಹೇಳಿಯೊಂದನ್ನು ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್ ಅವರು ನೀಡಿದ್ದಾರೆ.

ರಾಜ್ಯದ ಹಿತಕ್ಕೆ ಪ್ರತಿಭಟನೆ ಮಾಡುವುದು ಅವರ ಹಕ್ಕು; ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಬೇಡಿ: ಡಾ. ಜಿ.ಪರಮೇಶ್ವರ್
ಮುಂಗಾರು ಮಳೆ ವೈಫಲ್ಯದಿಂದ ನಮ್ಮ ರೈತರ ಬೆಳೆಗಳಿಗೆ, ಕುಡಿಯಲು ನೀರಿಲ್ಲದಿರುವಾಗ ತಮಿಳು ನಾಡಿಗೆ ಕರ್ನಾಟಕ ಸರ್ಕಾರ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಮಂಡ್ಯ ಜಿಲ್ಲೆಯಲ್ಲಿ ಬಂದ್ ತೀವ್ರವಾಗಿದೆ. ಕಾವೇರಿದ ಕಿಚ್ಚು ಉಂಟಾಗಿದೆ ಮದ್ದೂರು ಭಾಗದಲ್ಲಿ ಪ್ರತಿಭಟನಾಕಾರರ ಹೋರಾಟ ತೀವ್ರವಾಗಿದೆ.

ಕಾವೇರಿ ವಿವಾದ: ಜನವರಿ ಬಳಿಕ ಬೆಂಗಳೂರಿಗೆ ತಟ್ಟಲಿದೆ ನೀರಿನ ಅಭಾವದ ಬಿಸಿ!
ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 5,000 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು, ಈ ಆದೇಶ ಕುಡಿಯುನ ನೀರಿಗೆ ಕಾವೇರಿ ನದಿ ನೀರನ್ನೇ ಸಂಪೂರ್ಣವಾಗಿ ಅವಲಂಬಿಸಿರುವ ಬೆಂಗಳೂರಿಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ.

ಕಾವೇರಿ ವಿವಾದವನ್ನು ಮಾನವೀಯ ಬಿಕ್ಕಟ್ಟು ಎಂದು ಪರಿಗಣಿಸಿ: ಸ್ಟಾಲಿನ್, ಸಿದ್ದರಾಮಯ್ಯಗೆ ಬಿಜೆಪಿ ಸಂಸದ ಲಹರ್ ಸಿಂಗ್
ಬೆಂಗಳೂರು: ಕಾವೇರಿ ನದಿ ನೀರು ಬಿಡುವ ಸಂಬಂಧ ಉಂಟಾಗಿರುವ ಬಿಕ್ಕಟ್ಟು ಬಗೆಹರಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತುಕತೆ ನಡೆಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಪತ್ರ ಬರೆದಿದ್ದಾರೆ.

ಕಾವೇರಿ 5ನೇ ಹಂತ: ನೀರು ಸರಬರಾಜಿಗೆ ಇನ್ನೂ ಕಾಯಬೇಕು!
110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಉದ್ದೇಶಿಸಿರುವ 5,500 ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷೆಯ ಕಾವೇರಿ ನೀರು ಸರಬರಾಜು ಹಂತ 5 ಯೋಜನೆಯು ಫೆಬ್ರವರಿ ಅಥವಾ ಮಾರ್ಚ್ 2024 ರೊಳಗೆ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ.

ಕಾವೇರಿ ವಿವಾದ: ತಮಿಳುನಾಡಿಗೆ ಹರಿಯುತ್ತಿದ್ದ ನೀರಿನ ಮಟ್ಟ 3 ಸಾವಿರ ಕ್ಯೂಸೆಕ್'ಗೆ ಇಳಿಕೆ, ಸಿಡಬ್ಲ್ಯೂಆರ್'ಸಿ ಮೊರೆ ಹೋಗಲು ನೆರೆರಾಜ್ಯ ನಿರ್ಧಾರ!
ರಾಜ್ಯದಲ್ಲಿ ಪ್ರತಿ ಮಳೆಗಾಲಕ್ಕೂ ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು ಖ್ಯಾತೆ ತೆಗೆಯುತ್ತಲೇ ಇರುತ್ತದೆ. ಅಗತ್ಯಕ್ಕೆ ತಕ್ಕಂತೆ ಕಾವೇರಿ ನೀರು ಹರಿಸಿದರೂ ಇನ್ನೂ ಬೇಕು...ಇನ್ನೂ ಬೇಕು ಎನ್ನುವ ದುರಾಸೆ ಮಾತ್ರ ತಮಿಳುನಾಡು ಸರ್ಕಾರಕ್ಕೆ ಹೋಗಿಲ್ಲ. ಈ ಬಾರಿ ರಾಜ್ಯದಲ್ಲಿ ನಿರೀಕ್ಷಿತ ಮಳೆ ಬಾರದಿರುವುದರಿಂದ ಕಾವೇರಿ ಜಲಾಶಯದಲ್ಲಿ ನೀರಿನ ಶೇಕರಣೆ ಪ್ರಮಾಣ...

ನಿಮ್ಮ ನೆರವಿಗೆ ಸರ್ಕಾರವಿದೆ, ಪ್ರತಿಭಟನೆ ಕೈಬಿಡಿ; ಪ್ರತಿಭಟನಾನಿರತ ರೈತರಿಗೆ ಕೃಷಿ ಸಚಿವ ಮನವಿ
ನೆರೆ ರಾಜ್ಯ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಅವರು ಮಂಗಳವಾರ ಭೇಟಿ ಮಾಡಿದರು.

ರಾಜ್ಯದ ಅಣೆಕಟ್ಟುಗಳಲ್ಲಿನ ಪರಿಸ್ಥಿತಿ ಅವಲೋಕನಕ್ಕೆ ತಂಡ ರವಾನಿಸದ ಕೇಂದ್ರದ ವಿರುದ್ಧ ಕಾಂಗ್ರೆಸ್ ಕಿಡಿ
ರಾಜ್ಯದ ಅಣೆಕಟ್ಟುಗಳಲ್ಲಿನ ಪರಿಸ್ಥಿತಿ ಅವಲೋಕನಕ್ಕೆ ತಂಡ ರವಾನಿಸದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಭಾನುವಾರ ತೀವ್ರವಾಗಿ ಕಿಡಿಕಾರಿತು.

