Cauvery river

ಕರ್ನಾಟಕದಲ್ಲಿ ಮಳೆ ಆರ್ಭಟ; 2 ವರ್ಷಗಳ ನಂತರ ಹೇಮಾವತಿ ಜಲಾಶಯ ಭರ್ತಿ
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹೇಮಾವತಿ ಜಲಾಶಯ ಬರೊಬ್ಬರಿ 2 ವರ್ಷಗಳ ಬಳಿಕ ಭರ್ತಿಯಾಗಿದೆ.

Karnataka Rains: ಕಾವೇರಿ ನೀರಿನ ಮಟ್ಟ ಏರಿಕೆ, ಹಾರಂಗಿ ಒಳಹರಿವು ಹೆಚ್ಚಳ
ಕರ್ನಾಟಕ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆ ಮುಂದುವರೆದಿದ್ದು, ಕಾವೇರಿ ಕೊಳ್ಳದಲ್ಲಿ ಸುರಿಯುತ್ತಿರುವ ಭಾರಿ ಮಳೆ ರಾಜ್ಯದ ಜಲಾಶಯಗಳ ಒಳಹರಿವಿನ ಮಟ್ಟ ಹೆಚ್ಚಾಗುವಂತೆ ಮಾಡಿದೆ.

ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗುತ್ತಿದ್ದವನನ್ನು ರಕ್ಷಿಸಲು ಹೋಗಿ ಒಟ್ಟು ನಾಲ್ವರು ಜಲಸಮಾಧಿ
ಕಾವೇರಿಯಲ್ಲಿ ನದಿಯಲ್ಲಿ ಈಜಲು ಹೋಗಿದ್ದ ಯುವಕರ ಪೈಕಿ ನಾಲ್ವರು ಜಲಸಮಾಧಿಯಾಗಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.

ಅಂತರ್ಜಲ ಕುಸಿತದಿಂದ ರೈತರು ಕಂಗಾಲು; ಲಕ್ಷಗಟ್ಟಲೆ ಖರ್ಚು ಮಾಡಿ ಕೊರೆದರೂ ಬೋರ್‌ವೆಲ್‌ಗಳಿಂದ ಬಾರದ ನೀರು
ಕಾವೇರಿ ನದಿ ಉಗಮ ಸ್ಥಾನವಾದ ಕೊಡಗಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಅಂತರ್ಜಲವೂ ಕುಸಿದಿದೆ. ಇದರಿಂದಾಗಿ ರೈತರು ಹೆಚ್ಚುವರಿ ನಷ್ಟವನ್ನು ಎದುರಿಸುತ್ತಿದ್ದು, ಬೋರ್‌ವೆಲ್‌ಗಳಿಗೆ ಲಕ್ಷಗಟ್ಟಲೆ ಖರ್ಚು ಮಾಡಿದರೂ ನೀರು ಸಿಗುತ್ತಿಲ್ಲ.

ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ 3 ಯುವಕರ ಸಾವು
ಕಾವೇರಿ ನದಿಯಲ್ಲಿ ಮುಳುಗಿ 3 ಯುವಕರು ಸಾವನ್ನಪ್ಪಿರುವ ಘಟನೆ ಗುರುವಾರ ಕೊಡಗಿನ ಕುಶಾಲನಗರದಲ್ಲಿ ವರದಿಯಾಗಿದೆ.

ಕಾವೇರಿ ನದಿ ಸ್ವಚ್ಛತೆಗೆ ತಲಕಾವೇರಿಯಿಂದ ಪೂಂಪುಹಾರ್‌ವರೆಗೆ ಸ್ವಾಮೀಜಿಗಳ ಜಾಗೃತಿ ರ್ಯಾಲಿ
ಕಾವೇರಿ ನದಿ ಸ್ವಚ್ಛತೆಯ ಸಂದೇಶ ಸಾರುವ ಧಾರ್ಮಿಕ ಜಾಗೃತಿ ಜಾಥಾ ಶುಕ್ರವಾರ ಕೊಡಗಿನ ತಲಕಾವೇರಿಯಿಂದ ಆರಂಭವಾಯಿತು.

ಕೊಡಗಿನಾದ್ಯಂತ ಸಾಧಾರಣ ಮಳೆ; ಸಣ್ಣಪುಟ್ಟ ಹಾನಿ, ಪ್ರವಾಹದ ಭೀತಿ ಸದ್ಯಕ್ಕಿಲ್ಲ
ಕೊಡಗಿನಾದ್ಯಂತ ಸಾಧಾರಣ ಮಳೆಯಾಗುತ್ತಿದ್ದು, ನದಿ ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುತ್ತಿದೆ. ಮಳೆಯ ನಂತರ ಸಣ್ಣಪುಟ್ಟ ಭೂಕುಸಿತಗಳು ಮತ್ತು ಕೆಲವು ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.

ಕರ್ನಾಟಕದಲ್ಲಿ ನೀರಿನ ಬಿಕ್ಕಟ್ಟು; ತಳಮಟ್ಟಕ್ಕೆ ಕುಸಿದ ನೀರಿನ ಮಟ್ಟ; ತಮಿಳುನಾಡಿನೊಂದಿಗೆ ಮತ್ತೆ ಸಂಘರ್ಷ ಸಾಧ್ಯತೆ
ರಾಜ್ಯದಲ್ಲಿ ಮಳೆ ಕೊರತೆಯಿಂದ ನೀರಿನ ಕೊರತೆ ಉಂಟಾಗಿದ್ದು, ರಾಜ್ಯದ ಡ್ಯಾಂಗಳಲ್ಲಿ ನೀರಿನ ಮಟ್ಟ ತಳಮಟ್ಟಕ್ಕೆ ಕುಸಿದಿದೆ.

ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ: ಡಿಕೆ ಶಿವಕುಮಾರ್
ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ಸಾಕಷ್ಟು ನೀರಿಲ್ಲದ ಕಾರಣ ಕರ್ನಾಟಕ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಹೇಳಿದ್ದಾರೆ.

