Case

ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಡಿದ ಆರೋಪ: ಬಂಗಾಳ ಬಿಜೆಪಿ ಸಂಸದನ ವಿರುದ್ಧ ದೂರು
ಇಬ್ಬರ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಅಂತ್ಯಸಂಸ್ಕಾರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಕ್ಷೇಪಾರ್ಹ ಹೇಳಿಕೆ ಪ್ರಕಟಿಸಿದ್ದ ಬಂಕುರಾ ಕ್ಷೇತ್ರದ ಬಿಜೆಪಿ ಸಂಸದನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಪೊಲೀಸರದ್ದು ಅತಿರೇಕದ ವರ್ತನೆ: ಬಿಜೆಪಿ ಕಾರ್ಯಕರ್ತನ ವಿರುದ್ಧ ಕೇಸ್ ದಾಖಲಿಸಿದ್ದಕ್ಕೆ ಸಿ.ಟಿ.ರವಿ ಕಿಡಿ
ತಬ್ಲೀಘಿ ಜಮಾತ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಶೇರ್ ಮಾಡಿದ್ದ ಬಿಜೆಪಿ ಕಾರ್ಯಕರ್ತರೊಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಕ್ಕೆ ಸಚಿವ ಸಿ ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಷೇಧಾಜ್ಞೆ ಉಲ್ಲಂಘನೆ: 15 ಜನರ ಮೇಲೆ ದೂರು ದಾಖಲು
ದೇಶದಲ್ಲಿ ಲಾಕ್ ಡೌನ್ ಮತ್ತು ಜಿಲ್ಲೆಯಲ್ಲಿರುವ ನಿಷೇಧಾಜ್ಞೆ ಉಲ್ಲಂಘಿಸಿ ನಗರದ ಮಸೀದಿಯೊಂದರಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ಮಾಡಿದ ಪೊಲೀಸರು 15 ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.

ಬೆಳ್ತಂಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆ ಶಿಕ್ಷಕಿ ಮೇಲೆ ಜಾತಿ ತಾರತಮ್ಯ ಆರೋಪ: ಕೇಸು ದಾಖಲು
ದಲಿತ ವಿದ್ಯಾರ್ಥಿಗಳ ಮೇಲೆ ಜಾತಿ ತಾರತಮ್ಯ ತೋರಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ಶಾಲೆಯ ಶಿಕ್ಷಕಿ ಮೇಲೆ ಕೇಸು ದಾಖಲಾಗಿದೆ.

ಪೋರ್ನ್ ತಾರೆಯಾಗಿ ಬದಲಾಗಿದ್ದ ಮೈಕೆಲಾ ವಿರುದ್ಧ ಕೌಟುಂಬಿಕ ಹಿಂಸೆ ಪ್ರಕರಣ
ಸುಪ್ರಸಿದ್ಧ ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಪುತ್ರಿ ಮೈಕೆಲಾ ವಿರುದ್ಧ ಕೌಟುಂಬಿಕ ಹಿಂಸೆ ಪ್ರಕರಣ ದಾಖಲಿಸಲಾಗಿದೆ. ಈ ವಿಷಯವನ್ನು ಆಕೆಯ ಭಾವಿ ಪತಿ ಚಕ್ ಪಾಂಕೋ (೫೦) ಖಚಿತಪಡಿಸಿದ್ದಾರೆ.

100 ಕೋಟಿ ಜನರ ಮಣಿಸಲು 15 ಕೋಟಿ ಮುಸ್ಲಿಮರು ಸಾಕು ಹೇಳಿಕೆ: ವಾರಿಸ್ ಪಠಾಣ್ ವಿರುದ್ದ ಪ್ರಕರಣ ದಾಖಲು
ಮುಸ್ಲಿಮರ ಜನಸಂಖ್ಯೆ ದೇಶದಲ್ಲಿ 15 ಕೋಟಿ ಕಮ್ಮಿಯೇ ಇರಬಹುದು. ಆದರೆ, ಅಗತ್ಯಬಿದ್ದರೆ 100 ಕೋಟಿ ಬಹುಸಂಖಾತರಿಗೆ ತಕ್ಕ ತಿರುಗೇಟು ನೀಡಬಲ್ಲರು ಎಂದು ಹೇಳಿಕೆ ನೀಡಿದ್ದ ಮಹಾರಾಷ್ಟ್ರದ ಎಐಎಂಐಎಂ ಮುಖಂಡ ವಾರಿಸ್ ಪಠಾಣ್ ವಿರುದ್ದ ಪ್ರಕರಣ ದಾಖಲಾಗಿದೆ.

ಜಮ್ಮು-ಕಾಶ್ಮೀರ:ಷಾ ಫಾಸಲ್ ವಿರುದ್ಧ ಪಿಎಸ್ಎ ಪ್ರಕರಣ ದಾಖಲು, ಬಂಧನ
ಮಾಜಿ ನಾಗರಿಕ ಸೇವೆ ಅಧಿಕಾರಿ ಮತ್ತು ಜಮ್ಮು-ಕಾಶ್ಮೀರ ಪೀಪಲ್ಸ್ ಮೂವ್ ಮೆಂಟ್ (ಜೆಕೆಪಿಎಂ) ಮುಖ್ಯಸ್ಥ ಶಾ ಫಾಸಲ್ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಎಸ್ಎ) ಅಡಿ ಕೇಸು ದಾಖಲಾಗಿದೆ.

ಆನಂದ್ ಸಿಂಗ್ ಅವರನ್ನು ಅರಣ್ಯ ಖಾತೆ ಸಚಿವ ಮಾಡಿ 'ಕುರಿ ಕಾಯಲು ತೋಳವನ್ನು ಬಿಟ್ಟಂತೆ' ಆಗಿದೆ:ಸಿದ್ದರಾಮಯ್ಯ
ನೂತನ ಸಚಿವ ಆನಂದ್ ಸಿಂಗ್ ಗೆ ಅರಣ್ಯ ಖಾತೆ ನೀಡಿರುವುದಕ್ಕೆ ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ನಾಟಕ ಅರಣ್ಯ ಕಾಯ್ದೆ ಉಲ್ಲಂಘನೆ ಸೇರಿದಂತೆ 15 ಕೇಸುಗಳನ್ನು ಎದುರಿಸುತ್ತಿರುವ ಆನಂದ್ ಸಿಂಗ್ ಅವರನ್ನು ಅರಣ್ಯ ಖಾತೆ ಸಚಿವರನ್ನಾಗಿ ಮಾಡಿದ್ದು ಎಷ್ಟು ಸರಿ ಎಂದು ಕೇಳುತ್ತಿದ್ದಾರೆ.

ಮುನಿರತ್ನ ಚುನಾವಣಾ ಅಕ್ರಮಕ್ಕೆ ಸಾಕ್ಷಿ ಏನಿದೆ; ಹೈಕೋರ್ಟ್ ಪ್ರಶ್ನೆ?
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಹಿಂದೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ಅಕ್ರಮ ಎಸಗಿ, ಜಯ ಗಳಿಸಿದ್ದಾರೆ ಎಂಬುದಕ್ಕೆ ಸಾಕ್ಷಿ ಏನಿದೆ ಎಂದು ಹೈಕೋರ್ಟ್ ಪ್ರಶ್ನಿಸಿದ್ದಾರೆ.

