Case register

TNIE ವರದಿ ಫಲಶ್ರುತಿ: ಹೊಡಿಕೆ ಶಿರೂರು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀರು ಹೊತ್ತು ತರುವ ಕೆಲಸ; ಉಪ ಲೋಕಾಯುಕ್ತರಿಂದ ಕೇಸು ದಾಖಲು
ಹೊಡಿಕೆ ಶಿರೂರು ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಬಾವಿಯಿಂದ ನೀರು ಸೇದಿ, ಅದನ್ನು ಶೌಚಾಲಯಗಳಿಗೆ ಕೊಂಡೊಯ್ಯುವಂತೆ ಹಾಗೂ ಕುಡಿಯಲು ನೀರು ತರುವಂತೆ ಒತ್ತಾಯಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇನ್ಫೋಸಿಸ್ ಸಹ ಸಂಸ್ಥಾಪಕ, IISc ಮಾಜಿ ನಿರ್ದೇಶಕ ವಿರುದ್ಧ SC/ST ಕಾಯ್ದೆಯಡಿ ಪ್ರಕರಣ ದಾಖಲು
71ನೇ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನಿರ್ದೇಶನದ ಆಧಾರದ ಮೇಲೆ ನಗರದ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಬೆಂಗಳೂರು: ಖಾಸಗಿ ಕ್ಷಣಗಳ ಫೋಟೋ, ವಿಡಿಯೋ ಬಳಸಿ ವಿವಾಹಿತ ಮಹಿಳೆಯ ಸುಲಿಗೆ; ರೌಡಿ ಕುಣಿಗಲ್ ಸೂರಿ ವಿರುದ್ಧ ಕೇಸ್ ದಾಖಲು
37 ವರ್ಷದ ಸಂತ್ರಸ್ತ ಮಹಿಳೆ ದೂರಿನ ಅನ್ವಯ ಸದ್ಯ ಪ್ರಕರಣವೊಂದರಲ್ಲಿ ಜೈಲಿನಲ್ಲಿರುವ ಕುಣಿಗಲ್ ಸೂರಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಳವಾರ್ ಝಳಪಿಸಿದ ಯತ್ನಾಳ್ ಬೆಂಬಲಿಗ, ಬೆಳಗಾವಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ: ಕೇಸು ದಾಖಲಿಸಿ ಆರೋಪಿಗಳ ಬಂಧನ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆಲುವು ಸಾಧಿಸಿದ ಸಂತೋಷದಲ್ಲಿ ಬಿಜೆಪಿ ಕಾರ್ಯಕರ್ತನೋರ್ವ ಸಾರ್ವಜನಿಕವಾಗಿ ಖಡ್ಗ ಪ್ರದರ್ಶನ ಮಾಡಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಮತ್ತು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

ಬೆಂಗಳೂರಿನಲ್ಲಿ ಗಗನಸಖಿ ಅರ್ಚನಾ ಸಾವಿನ ಪ್ರಕರಣಕ್ಕೆ ತಿರುವು: ಪ್ರಿಯಕರ ಆದೇಶ್ ಬಂಧನ, ಕೇಸು ದಾಖಲು
ನಗರದ ಕೋರಮಂಗಲದಲ್ಲಿ ಹಿಮಾಚಲ ಪ್ರದೇಶ ಮೂಲದ ಗಗನ ಸಖಿ ಅರ್ಚನಾ(28ವ) ಬಹು ಮಹಡಿ ಅಪಾರ್ಟ್ ಮೆಂಟಿನಿಂದ ಬಿದ್ದು ಮೃತಪಟ್ಟ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅರ್ಚನಾಳ ಪ್ರಿಯಕರ ಕಾಸರಗೋಡು ಮೂಲದ ಆದೇಶ್ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದ್ದು ಆತನನ್ನು ಬಂಧಿಸಲಾಗಿದೆ.

'ದಿ ಕಾಶ್ಮೀರ್ ಫೈಲ್ಸ್' ವಿರುದ್ಧ ಐಎಫ್ ಎಫ್ಐ ಜ್ಯೂರಿ ಮುಖ್ಯಸ್ಥ ಅವಹೇಳನಕಾರಿ ಟೀಕೆ: ಸುಪ್ರೀಂ ಕೋರ್ಟ್ ವಕೀಲರಿಂದ ಕೇಸು ದಾಖಲು
'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಬಗ್ಗೆ ಜ್ಯೂರಿ ಮುಖ್ಯಸ್ಥರು ವಿವಾದಾತ್ಮಕ ಹೇಳಿಕೆ ನೀಡಿರುವ ಬಗ್ಗೆ ತೀವ್ರ ಟೀಕೆಗಳು ಕೇಳಿಬರುತ್ತಿರುವುದರ ಮಧ್ಯೆ ಸುಪ್ರೀಂ ಕೋರ್ಟ್ ನಲ್ಲಿ ಅಭ್ಯಾಸನಿರತ ವಕೀಲರೊಬ್ಬರು ಮಂಗಳವಾರ ಗೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಂಡೇಮಠ ಬಸವಲಿಂಗ ಸ್ವಾಮಿಗಳ ಆತ್ಮಹತ್ಯೆ ಕೇಸು: ಡೆತ್ ನೋಟ್ ವಶ, ಪೊಲೀಸರಿಂದ ಕೇಸು ದಾಖಲು
ಕಂಚುಗಲ್ ಬಂಡೇಮಠದ ಬಸವಲಿಂಗ ಸ್ವಾಮಿಗಳ ಆತ್ಮಹತ್ಯೆ ಕೇಸ್ಗೆ ದೊಡ್ಡ ತಿರುವು ಸಿಕ್ಕಿದೆ. ಸ್ವಾಮೀಜಿ ಮಹಿಳೆಯ ಹನಿಟ್ರ್ಯಾಪ್ ಮತ್ತು ಬೆದರಿಕೆಗೆ ಒಳಗಾಗಿ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ದಟ್ಟವಾಗಿದೆ ಎಂದು ಬುಧವಾರ ಪೊಲೀಸ್ ಮೂಲಗಳು ತಿಳಿಸಿವೆ.

ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ: 27 ಆರೋಪಿಗಳ ಬಂಧನ, ಸ್ವಯಂಪ್ರೇರಿತ ದೂರು ದಾಖಲು, ಬೆಳಗಾವಿಯಲ್ಲಿ ಸೆಕ್ಷನ್ 144 ಜಾರಿ
ಬೆಳಗಾವಿಯಲ್ಲಿ ಪುಂಡರ ಅಟ್ಟಹಾಸ ಮಿತಿಮೀರಿದೆ. ಬೆಳಗಾವಿಯಲ್ಲಿ ಕೆಲ ಪುಂಡರು ಇಂದು ನಸುಕಿನ ಜಾವ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಭಗ್ನಗೊಳಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 27 ಮಂದಿಯನ್ನು ಬಂಧಿಸಲಾಗಿದೆ.

ನಟ ವಿನೋದ್ ರಾಜ್ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ: ಅಶ್ಲೀಲ ಚಿತ್ರ ಅಪ್ ಲೋಡ್, ದೂರು ದಾಖಲು
ಅಭಿನಯದಿಂದ ದೂರವುಳಿದು ಕೃಷಿ ಕಾಯಕವಾಯಿತು, ತಾವಾಯಿತು ಎಂಬಂತಿರುವ ನಟ ವಿನೋದ್ ರಾಜ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಅಶ್ಲೀಲ ಭಾವಚಿತ್ರಗಳನ್ನು ಅಪ್ ಲೋಡ್ ಮಾಡಲಾಗುತ್ತಿದೆ.

