Canada

ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ ಕೆನಡಾದಲ್ಲಿ ವೀಸಾ ಸೇವೆ ಪುನರಾಂಭಿಸಿದ ಭಾರತ!
ಎರಡು ದೇಶಗಳ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ ಭಾರತವು ಕೆನಡಾದಲ್ಲಿ ವೀಸಾ ಸೇವೆಗಳನ್ನು ಪುನರಾರಂಭಿಸಿದೆ. ಪ್ರವೇಶ ಸೇರಿದಂತೆ ವ್ಯಾಪಾರ, ವೈದ್ಯಕೀಯ ವೀಸಾ ಮತ್ತು ಕಾನ್ಫರೆನ್ಸ್ ವೀಸಾ ಸೇವೆಯನ್ನು ಪುನರಾರಂಭಿಸಲಿದೆ ಎಂದು ಕೆನಡಾದಲ್ಲಿರುವ ಭಾರತದ ಹೈಕಮಿಷನ್ ಬುಧವಾರ ತಿಳಿಸಿದೆ.

ಭಾರತ-ಕೆನಡಾ ಸಂಬಂಧ ಕಠಿಣ ಹಂತದಲ್ಲಿ ಸಾಗುತ್ತಿದೆ: ವಿದೇಶಾಂಗ ಸಚಿವ ಎಸ್ ಜೈಶಂಕರ್
ಕೆನಡಾದ ರಾಜತಾಂತ್ರಿಕ ಸಿಬ್ಬಂದಿ ಭಾರತದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಕಳವಳವನ್ನು ಗಮನದಲ್ಲಿಟ್ಟುಕೊಂಡು ಕೆನಡಾದ ರಾಜತಾಂತ್ರಿಕ ಉಪಸ್ಥಿತಿಯಲ್ಲಿ ಭಾರತವು ಸಮಾನತೆಯನ್ನು ಒದಗಿಸುವಂತೆ ಒತ್ತಾಯಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾನುವಾರ ಹೇಳಿದ್ದಾರೆ.

ನಿಜ್ಜರ್ ಹತ್ಯೆ: ರಾಜತಾಂತ್ರಿಕ ಕಿರಿಕ್ ಬಳಿಕ ಬೆಂಗಳೂರು, ಚಂಡೀಗಢ, ಮುಂಬೈನಲ್ಲಿ ವೀಸಾ ಸೇವೆ ಸ್ಥಗಿತಗೊಳಿಸಿದ ಕೆನಡಾ
ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಮತ್ತಷ್ಟು ಉದ್ನಿಗ್ನತೆ ಉಂಟಾಗಿದ್ದು, ಭಾರತದಿಂದ 41 ರಾಜತಾಂತ್ರಿಕರನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ಕೆನಡಾ ರಾಷ್ಟ್ರ, ಬೆಂಗಳೂರು, ಚಂಡೀಗಢ, ಮುಂಬೈ ಮತ್ತು ದೆಹಲಿಯಲ್ಲಿ ಸಂಚರಿಸುವ ವೇಳೆ ಎಚ್ಚರದಿಂದ ಇರುವಂತೆ ತನ್ನ ರಾಯಭಾರ ಸಿಬ್ಬಂದಿ ಮತ್ತು ನಾಗರೀಕರಿಗೆ ಸೂಚನೆ ನೀಡಿದೆ.

ನಿಜ್ಜರ್ ಹತ್ಯೆ ಬಳಿಕ ಹಳಸಿದ ಸಂಬಂಧ: ಭಾರತದಿಂದ 41 ರಾಜತಾಂತ್ರಿಕರನ್ನು ಹಿಂತೆಗೆದುಕೊಂಡ ಕೆನಡಾ!
ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಬಳಿಕ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿದ್ದು, ಭಾರತದ ಸೂಚನೆ ಬೆನ್ನಲ್ಲೇ 41 ರಾಜತಾಂತ್ರಿಕರನ್ನು ಹಿಂಪಡೆದಿರುವುದಾಗಿ ಕೆನಡಾ ಗುರುವಾರ ಹೇಳಿದೆ.

ಕೆನಡಾ: 3 ದೇವಾಲಯಕ್ಕೆ ನುಗ್ಗಿ ಕಳ್ಳತನ!
ಕೆನಡಾದ ದುರ್ಹಾಮ್ ಪ್ರದೇಶದಲ್ಲಿ 3 ದೇವಾಲಯಕ್ಕೆ ನುಗ್ಗಿ ಹುಂಡಿಯಲ್ಲಿದ್ದ ನಗದನ್ನು ಕಳ್ಳತನ ಮಾಡಲಾಗಿದೆ.

ಭಾರತದಲ್ಲಿ ಖಲೀಸ್ಥಾನಿಗಳಿಗೆ ಸಹಕಾರ, ಆಶ್ರಯ ನೀಡುತ್ತಿದ್ದ ಸಿಖ್ ಗೆ ಕೆನಡಾ ಪ್ರವೇಶ: ವರದಿ
ಭಾರತದಲ್ಲಿ ಖಲೀಸ್ಥಾನಿಗಳಿಗೆ ಸಹಕಾರ ನೀಡುತ್ತಿದ್ದ ಸಿಖ್ ಗೆ ಕೆನಡಾ ಪ್ರವೇಶಿಸಲು ಅನುಮತಿ ನೀಡಬೇಕು ಎಂದು ಕೆನಡಾದ ವಲಸೆ ಟ್ರಿಬ್ಯುನಲ್ ಹೇಳಿದೆ.

ಭಾರತ ಜೊತೆಗಿನ ಸಂಘರ್ಷ ನಡುವೆ ಬಂದೂಕು ಹೊಂದಿದ್ದ 8 ಸಿಖ್ ಯುವಕರ ವಿರುದ್ಧ ಕೆನಡಾ ಕ್ರಮ
ಬ್ರಾಂಪ್ಟನ್‌ನಲ್ಲಿ ಒಂದು ವಾರದ ಅವಧಿಯಲ್ಲಿ ಎಂಟು ಕೆನಡಾದ ಸಿಖ್ ಯುವಕರನ್ನು ಬಂಧಿಸಲಾಗಿದ್ದು ಅವರ ವಿರುದ್ಧ ಬಂದೂಕು ಸಂಬಂಧಿತ ಅಪರಾಧಗಳ ಆರೋಪ ಹೊರಿಸಲಾಗಿದೆ.

ತಣ್ಣಗಾದ ಕೆನಡಾ: ನಾವು ಭಾರತದೊಂದಿಗೆ ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ಬಯಸುವುದಿಲ್ಲ- ಜಸ್ಟಿನ್ ಟ್ರುಡೊ
ಭಾರತದೊಂದಿಗೆ ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ಕೆನಡಾ ಬಯಸುವುದಿಲ್ಲ. ನವದೆಹಲಿಯೊಂದಿಗೆ ಜವಾಬ್ದಾರಿಯುತವಾಗಿ ಮತ್ತು ರಚನಾತ್ಮಕವಾಗಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತದೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.

ನಿಜ್ಜರ್ ಹತ್ಯೆ ಬಳಿಕ ಹಳಸಿದ ಸಂಬಂಧ: ನಿಮ್ಮ ರಾಜತಾಂತ್ರಿಕ ಅಧಿಕಾರಿಗಳ ವಾಪಸ್ ಕರೆಸಿಕೊಳ್ಳಿ; ಕೆನಡಾಗೆ ಭಾರತ ಕಟ್ಟಾಜ್ಞೆ
ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಬಳಿಕ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ದಿನಕಳೆದಂತೆ ಹದಗೆಡುತ್ತಿದ್ದು, ಇದರ ನಡುವಲ್ಲೇ ನಿಮ್ಮ 40 ಮಂದಿ ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳುವಂತೆ ಕೆನಡಾಗೆ ಭಾರತದ ಸೂಚಿಸಿದೆ ಎಂದು ತಿಳಿದುಬಂದಿದೆ.

