Cabinet

ಸಚಿವ ಸಂಪುಟಕ್ಕೆ ಮರಳಲು ಕೊನೆಯ ಯತ್ನ: ದೆಹಲಿಯಲ್ಲಿ ರಾಜಣ್ಣ ಶಕ್ತಿ ಪ್ರದರ್ಶನ; ಮೂಲೆಗುಂಪು ಮಾಡಿದ್ರೆ ಬಿಜೆಪಿ ಸೇರ್ಪಡೆ?
ಪಕ್ಷಾತೀತವಾಗಿ ರಾಜಣ್ಣ ಅವರ ಸಾವಿರಾರು ಬೆಂಬಲಿಗರು ಅಕ್ಟೋಬರ್‌ನಲ್ಲಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತಯಿದೆ. ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಲಿದ್ದಾರೆ.

ಸಚಿವ ಸಂಪುಟಕ್ಕೆ ಮರಳಿ ಸೇರ್ಪಡೆಗೆ ರಾಜಣ್ಣ ಕಸರತ್ತು: ಹೈಕಮಾಂಡ್ ಮನವೊಲಿಸಲು ಮುುಂದು; ಶೀಘ್ರದಲ್ಲೇ ಕೆ.ಸಿ ವೇಣುಗೋಪಾಲ್ ಭೇಟಿ
ಬಿಜೆಪಿ ಹಾಗೂ ಭಾರತೀಯ ಚುನಾವಣಾ ಆಯೋಗದ ವಿರುದ್ಧ ಮತಗಳ್ಳನತ ಆರೋಪ ಮಾಡಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ ಬೆನ್ನಲ್ಲೇ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿತ್ತು.

ಸಂಪುಟದಿಂದ 'ಸಿದ್ದು ಭಂಟನಿಗೆ' ಗೇಟ್ ಪಾಸ್: 'ಆಪ್ತಮಿತ್ರ'ನ ಉಳಿಸಿಕೊಳ್ಳಲು CM ಸರ್ಕಸ್; ಸೊಪ್ಪು ಹಾಕದ ಕಾಂಗ್ರೆಸ್!
ರಾಜಣ್ಣ ತಮ್ಮ ರಾಜೀನಾಮೆ ನೀಡುವ ಮೊದಲೇ, ಮುಖ್ಯಮಂತ್ರಿ ಕಚೇರಿ ಸಚಿವರ ಪದಚ್ಯುತಿಗೆ ತನ್ನ ಶಿಫಾರಸನ್ನು ರಾಜಭವನಕ್ಕೆ ರವಾನಿಸಿತ್ತು. ರಾಜ್ಯಪಾಲರ ಕಚೇರಿಯಿಂದ ಬಂದ ಒಂದು ಪ್ರಕಟಣೆ ಅವರ ಭವಿಷ್ಯವನ್ನೇ ಅತಂತ್ರ ಮಾಡಿದೆ.

ರಾಜೀನಾಮೆ ಅಲ್ಲ; ಸಿದ್ದರಾಮಯ್ಯ ಸಚಿವ ಸಂಪುಟದಿಂದ ಕೆಎನ್ ರಾಜಣ್ಣ ವಜಾ!
ಸಿದ್ದರಾಮಯ್ಯ ಅವರು ರಾಜಣ್ಣ ಅವರನ್ನು ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಆದಾಗ್ಯೂ, ಅವರು ರಾಜೀನಾಮೆ ನೀಡದ ಕಾರಣ, ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.

SC ಒಳ ಮೀಸಲಾತಿ: ಸಚಿವ ಸಂಪುಟದ ಮುಂದೆ ವರದಿ, ಆಗಸ್ಟ್ 16 ರಂದು ವಿಶೇಷ ಸಭೆ!
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಆಯೋಗ ಆಗಸ್ಟ್ 4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 1,766 ಪುಟಗಳ ವರದಿ ಸಲ್ಲಿಸಿತ್ತು.

ನಾಗಮೋಹನ್ ದಾಸ್ ವರದಿ ಬಗ್ಗೆ ಸಂಪುಟದಲ್ಲಿ ಚರ್ಚೆ: Safe Zone ನಲ್ಲಿದ್ದುಕೊಂಡು ಸಿದ್ದರಾಮಯ್ಯ ಸರ್ಕಾರದ ಚದುರಂಗದಾಟ!
ವರದಿಯು ವಿವಾದಕ್ಕೆ ಕಾರಣವಾಗಬಹುದಾದ್ದರಿಂದ, ಅಧ್ಯಯನ ಮಾಡಲು ಮತ್ತು ಕೋಟಾ ಅನುಷ್ಠಾನಕ್ಕಾಗಿ ವರದಿ ಸಲ್ಲಿಸಲು ಸಂಪುಟ ಉಪಸಮಿತಿ ನೇಮಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ಸುರಕ್ಷಿತವಾಗಿ ಹೆಜ್ಜೆ ಇಡಲು ಮುಂದಾಗಿದೆ.

ಸಚಿವ ಸಂಪುಟ ಸಭೆ: ಒಳ ಮೀಸಲು ವರದಿ ಭವಿಷ್ಯ ಇಂದು ನಿರ್ಧಾರ; ಈಡೇರುತ್ತಾ ಸಾರಿಗೆ ನೌಕರರ ಬೇಡಿಕೆ?
ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯು ರಾಜಕೀಯ ಗಮನ ಸೆಳೆದಿದೆ. ಉದ್ಯೋಗ ಹಕ್ಕುಗಳು, ಸುರಕ್ಷತೆ ಮತ್ತು ಆರ್ಥಿಕ ಬೆಂಬಲಕ್ಕೆ ಸಂಬಂಧಿಸಿದ ಸಾರಿಗೆ ಒಕ್ಕೂಟದ ಬೇಡಿಕೆಗಳನ್ನು ಸರ್ಕಾರದ ಪ್ರಣಾಳಿಕೆಯ ಬದ್ಧತೆಗಳ ಭಾಗವಾಗಿ ಮರುಪರಿಶೀಲಿಸುವ ನಿರೀಕ್ಷೆಯಿದೆ.

ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ವಿರೋಧಿಸಿಲ್ಲ, ಸಚಿವರು ಏರು ಧ್ವನಿಯಲ್ಲೂ ಮಾತಾಡಿಲ್ಲ: ಸಿಎಂ
ಕೆಲವು ಮಾಧ್ಯಮಗಳು ವರದಿ ಮಾಡಿದಂತೆ ಚರ್ಚೆಯ ಸಮಯದಲ್ಲಿ ಕೆಲವು ಸಚಿವರು ಪರಸ್ಪರ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಇದು ಜಾತಿ ಗಣತಿಯೋ ಅಥವಾ ದ್ವೇಷದ ಗಣತಿಯೋ?: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಕಿಡಿ
ಹಳೇ ಮೈಸೂರು ಪ್ರದೇಶಗಳಾದ ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಚಿತ್ರದುರ್ಗದಲ್ಲಿ ವಾಸಿಸುವ ಒಕ್ಕಲಿಗ ಸಮುದಾಯದ ನಿಜವಾದ ಜನಸಂಖ್ಯೆ ಎಷ್ಟೆಂದು ತಿಳಿಯಬೇಕು ಎಂದರು.

