cabinet expansion

ಬಿಜೆಪಿ ನಾಯಕರು ಮಾತ್ರವಲ್ಲ, ಸಂಪುಟ ವಿಸ್ತರಣೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಕಾಂಗ್ರೆಸ್ಸಿಗರು !
ಸಂಪುಟ ವಿಸ್ತರಣೆ ಯಾವಾಗ ನಡೆಯುತ್ತದೆ ಎಂದು ಕೇವಲ ಬಿಜೆಪಿ ನಾಯಕರು ಮಾತ್ರ ಉಸಿರು ಬಿಗಿ ಹಿಡಿದು ಕಾಯುತ್ತಿಲ್ಲ, ಕಾಂಗ್ರೆಸ್ ನಾಯಕರ ಕಣ್ಣು ಕೂಡ ವಿಸ್ತರಣೆ ಮೇಲಿದೆ.

ಬಿಎಸ್ ವೈ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ, ಫೆಬ್ರವರಿ 5ರೊಳಗೆ ನೂತನ ಶಾಸಕರಿಗೆ ಮಂತ್ರಿಗಿರಿ ಖಚಿತ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಈ ತಿಂಗಳಾಂತ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡೇ ಮಾಡುತ್ತಾರೆ ಅಂತ ಅನ್ಕೊಂಡಿರೋರಿಗೆ ಈಗ ನಿರಾಶೆಯಾಗಿದ್ದು, ಫೆಬ್ರುವರಿ 5ರೊಳಗೆ ಸಂಪುಟ...

ತಿಂಗಳಾಂತ್ಯದೊಳಗೆ ಮಂತ್ರಿಮಂಡಲ ವಿಸ್ತರಣೆ: ಯಡಿಯೂರಪ್ಪ
ಬಹುದಿನಗಳಿಂದ ರಾಜಕೀಯ ಡೋಲಾಯಮಾನಕ್ಕೆ ಕಾರಣವಾಗಿರುವ ಮಂತ್ರಿ ಮಂಡಲವನ್ನು ಈ ಮಾಸಾಂತ್ಯದ ವೇಳೆಗೆ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಆದರೆ ಖಚಿತ ದಿನಾಂಕ ಪ್ರಕಟಿಸಿಲ್ಲ.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರಶ್ನೆ ಕೇಳಬೇಡಿ: ಸುದ್ದಿಗಾರರಿಗೆ ಸಿಎಂ ಯಡಿಯೂರಪ್ಪ ತಾಕೀತು
ಸಚಿವಾಕಾಂಕ್ಷಿಗಳು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಮೇಲೆ ಒತ್ತಡ ಹಾಕುತ್ತಿರುವುದರ ಮಧ್ಯೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಯಡಿಯೂರಪ್ಪ ಉತ್ತರ ಕೊಡಲು ನಿರಾಕರಿಸಿದ್ದಾರೆ.

ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬ: 3 ದಿನಗಳ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿಎಂ ಯಡಿಯೂರಪ್ಪ
ಉಪ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎನ್ನಲಾಗಿತ್ತು. ಆದರೆ ಧನುರ್ ಮಾಸ, ಬಳಿಕ ಸಂಕ್ರಾಂತಿ ಹಬ್ಬ ಕಳೆಯಲಿ ಎನ್ನುವ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆಯನ್ನು ಮುಂದೂಡಿದ್ದರು.

ಮಂತ್ರಿಮಂಡಲ ವಿಸ್ತರಣೆ: ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ: ಶ್ರೀರಾಮುಲು
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತನ್ನು ಎಂದೂ ತಪ್ಪುವುದಿಲ್ಲ. ಸಂಪುಟ ವಿಸ್ತರಣೆ ವಿಚಾರವಾಗಿ ಅವರು ನೀಡಿದ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಲಸಿಗರಿಗೆ ಸಚಿವಗಿರಿ ಕೈ ತಪ್ಪುವ ಆತಂಕ: ಸಂಪುಟ ವಿಸ್ತರಣೆಯಲ್ಲಿ ಪಕ್ಷ ನಿಷ್ಠರಿಗೆ ಕೊಕ್?
ಮುಖ್ಯಮಂತ್ರಿ ದಾವೋಸ್ ಪ್ರವಾಸದಿಂದ ವಾಪಸ್ ಬರುತ್ತಿದ್ದಂತೆ ಸಚಿವಾಕಾಂಕ್ಷಿಗಳಲ್ಲಿ ಆಸೆ ಚಿಗುರೊಡೆದಿದ್ದರೆ, ಕೆಲವು ಹಾಲಿ ಸಚಿವರಿಗೆ ಇರುವ ಹುದ್ದೆ ಕೈ ತಪ್ಪುತ್ತದೆಯೋ ಎನ್ನುವ ಆತಂಕ ಶುರುವಾಗಿದೆ.

ನುಡಿದಂತೆ ನಡೆಯದಿದ್ದರೇ ಪರಿಣಾಮ ಬೇರೆಯಾಗಿರುತ್ತದೆ: 'ಹಳ್ಳಿಹಕ್ಕಿ' ಎಚ್ಚರಿಕೆ
17 ಶಾಸಕರೂ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದು, ಈ ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸಬೇಕು ಎಂದು ಹೇಳಿದ್ದಾರೆ, ಒಂದು ವೇಳೆ ಸಚಿವ ಸ್ಥಾನ ನೀಡದೇ ಇದ್ದರೇ ಏನಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನೋಡೋಣ ಏನಾಗುತ್ತೆ ಅಂತಾ ಎಂದು ಹೇಳಿದ್ದಾರೆ

ಅಮಿತ್ ಶಾ ಜೊತೆ ಸಂಪುಟ ವಿಸ್ತರಣೆ ಕುರಿತು ಚರ್ಚೆಯಾಗಿದೆ; ದಾವೋಸ್‌ನಿಂದ ಬಂದ ಬಳಿಕ ವಿಸ್ತರಣೆ ಖಚಿತ: ಸಿಎಂ ಯಡಿಯೂರಪ್ಪ
ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಅರ್ಧ ಗಂಟೆಗಳ ಕಾಲ ಸವಿಸ್ತಾರವಾಗಿ ಚರ್ಚೆ ನಡೆಸಲಾಗಿದ್ದು, ಅಧ್ಯಕ್ಷರಿಂದ ಉತ್ತಮ ಸ್ಪಂದನೆ ದೊರೆತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

