Byrathi Suresh

ಮುಡಾ ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ: ಸಚಿವ ಭೈರತಿ ಸುರೇಶ್
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣದ ತನಿಖೆಗೆ ಸರ್ಕಾರ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ನ್ಯಾಯಾಂಗ ಆಯೋಗವನ್ನು ನೇಮಿಸಿದೆ.

ಕಾಂಗ್ರೆಸ್'ನ ಸಚಿವ ಬೈರತಿ ಸುರೇಶ್ ಪುತ್ರನ ಜೊತೆ BJP ಶಾಸಕ ಎಸ್.ಆರ್ ವಿಶ್ವನಾಥ್ ಮಗಳ ಅದ್ಧೂರಿ ನಿಶ್ಚಿತಾರ್ಥ!
ಬೈರತಿ ಸುರೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾರೆ. ಇನ್ನು ಯಲಹಂಕ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹಾಗೂ ಬೈರತಿ ಸುರೇಶ್ ಅವರು ಬೀಗರಾಗುತ್ತಿದ್ದಾರೆ

ನನ್ನ ವಿರುದ್ಧ ಭೈರತಿ ಸುರೇಶ್ 50 ಕೋಟಿ ರು. ಮಾನನಷ್ಟ ಮೊಕದ್ದಮೆ: ಹೆಚ್.ವಿಶ್ವನಾಥ್
ಮೈಸೂರಿನಲ್ಲಿ ಮಾತನಾಡಿದ ಅವರು, ಮುಡಾ ಹಗರಣ ತನಿಖೆ ಮಾಡುತ್ತೇವೆ ಎಂದು ಹೇಳಿದರು. ಏನಾಯ್ತು ಈಗ? ಬೈರತಿ ಸುರೇಶ್ ಮುಡಾ ಪ್ರಾಧಿಕಾರಕ್ಕೆ ಬಂದು ಹೋದ ಮೇಲೂ ಮುಡಾದಲ್ಲಿ 500 ಸೈಟ್ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ರೈತನಿಗೆ ಪ್ರವೇಶ ನಿರಾಕರಣೆ: ಸದನದಲ್ಲೂ ಆಕ್ರೋಶ, GT Mall ಬಂದ್!

ಕಾಂಗ್ರೆಸ್ ಅಭ್ಯರ್ಥಿಗಳು ಸೋತರೆ ಸಿಎಂ ಸಿದ್ದರಾಮಯ್ಯ ಸ್ಥಾನಕ್ಕೆ ಕಂಟಕ: ಸಚಿವ ಬೈರತಿ ಸುರೇಶ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಿಷ್ಯ, ಸಚಿವ ಬೈರತಿ ಸುರೇಶ್ ಅವರು ಕಾಂಗ್ರೆಸ್ ಅಭ್ಯರ್ಥಿಗಳು ಸೋತರೆ ಸಿಎಂ ಸ್ಥಾನಕ್ಕೆ ಕಂಟಕವಾಗಲಿದೆ ಎಂದು ಗುರುವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಕಟ್ಟಡದ ಅಗ್ನಿ ಸುರಕ್ಷತಾ ಕ್ರಮ ಉಲ್ಲಂಘನೆ ಆರೋಪ: ಸಚಿವ ಬೈರತಿ ಸುರೇಶ್ ವಿರುದ್ಧದ ದೋಷಾರೋಪ ಪಟ್ಟಿಗೆ ಹೈಕೋರ್ಟ್ ತಡೆ
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು 9 ವರ್ಷಗಳಿಂದ ಹಿಂದೆ ಖರೀದಿಸಿದ್ದ ವಾಣಿಜ್ಯ ಕಟ್ಟಡದಲ್ಲಿ ‘ಕರ್ನಾಟಕ ಅಗ್ನಿಶಾಮಕ ದಳ ಕಾಯಿದೆ-1964’ರ ಸೆಕ್ಷನ್ 13ರಡಿ ಬರುವ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದಾಖಲಿಸಲಾಗಿರುವ ಆರೋಪ ಪಟ್ಟಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಬೆಂಗಳೂರು-ಮೈಸೂರು ಅವಳಿ ನಗರಗಳಾಗಿ ಅಭಿವೃದ್ಧಿ: ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್
ಬೆಂಗಳೂರು-ಮೈಸೂರನ್ನು ಅವಳಿ ನಗರಗಳನ್ನಾಗಿ ಅಭಿವೃದ್ಧಿಪಡಿಸಲು ಮೂಲಸೌಕರ್ಯ ಯೋಜನೆಗಳನ್ನು ರಾಜ್ಯ ಸರ್ಕಾರ ಆರಂಭಿಸಲಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.

ನಕಲಿ ಆಧಾರ್, ವೋಟರ್ ಐಡಿ ಸೃಷ್ಟಿ ಆರೋಪ: ಸಚಿವ ಬೈರತಿ ಸುರೇಶ್ ಅನರ್ಹಕ್ಕೆ ಬಿಜೆಪಿ ಪಟ್ಟು; ಚುನಾವಣಾ ಆಯೋಗಕ್ಕೂ ದೂರು
ನಕಲಿ ಆಧಾರ್, ವೋಟರ್ ಐಡಿ, ಪ್ಯಾನ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್ ಸೃಷ್ಟಿಸಿದ ಆರೋಪದ ಮೇಲೆ ಕರ್ನಾಟಕ ನಗರಾಭಿವೃದ್ಧಿ ಸಚಿವ ಮತ್ತು ಹೆಬ್ಬಾಳ ಶಾಸಕ ಸುರೇಶ್ ಬಿ ಎಸ್ (ಬೈರತಿ ಸುರೇಶ್) ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸುವಂತೆ ಬಿಜೆಪಿ ಗುರುವಾರ ಒತ್ತಾಯಿಸಿದೆ.

ನಕಲಿ ವೋಟರ್ ಐಡಿ ತಯಾರಿಕೆ ಆರೋಪ: ಸಚಿವ ಭೈರತಿ ಸುರೇಶ್ ಆಪ್ತ ಸೇರಿ ಮೂವರು ಸಿಸಿಬಿ ಪೊಲೀಸರ ವಶಕ್ಕೆ
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ನಕಲಿ ವೋಟರ್ ಐಡಿ ತಯಾರಿಸುತ್ತಿದ್ದ ಸಚಿವ ಭೈರತಿ ಸುರೇಶ್ ಆಪ್ತನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

