Byju Raveendran, family

ಒಂದು ಕಾಲದ ದೇಶದ ಅತಿದೊಡ್ಡ ಸ್ಟಾರ್ಟಪ್ Byju's ಮೌಲ್ಯ ಈಗ 'ಶೂನ್ಯ'; ‘ಏನೇ ಬರಲಿ, ದಾರಿ ಹುಡುಕುತ್ತೇನೆ’ ಎಂದ ಮಾಲೀಕ!
ತಮ್ಮ ಶಿಕ್ಷಣ-ತಂತ್ರಜ್ಞಾನ ಕಂಪನಿ ಬೈಜೂಸ್ ನ ಬೆಳವಣಿಗೆಯ ಸಾಮರ್ಥ್ಯವನ್ನು ನಾನು ಅತಿಯಾಗಿ ಅಂದಾಜು ಮಾಡಿದ್ದೆ. ಆದರೆ ಅದು ಈಗ "ಶೂನ್ಯ" ಮೌಲ್ಯದಲ್ಲಿದ್ದು ದಿವಾಳಿತನವನ್ನು ಎದುರಿಸುತ್ತಿದೆ. ಆದರೂ ಅದನ್ನು ಉಳಿಸುವ ಭರವಸೆಯನ್ನು ಹೊಂದಿದ್ದೇನೆ ಎಂದು ರವೀಂದ್ರನ್ ಹೇಳಿದ್ದಾರೆ.

ನನ್ನ ಕುಟುಂಬದವರು ಯಾರೂ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಡಿ.ಕೆ ಶಿವಕುಮಾರ್
ಚನ್ನಪಟ್ಟದಲ್ಲಿ ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಲಾಗುತ್ತಿದೆ. ನಾವು ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸದ ಮೇಲೆ ಜನರು ವಿಶ್ವಾಸವನ್ನು ಇಡುತ್ತಾರೆ ಎನ್ನುವ ನಂಬಿಕೆಯಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಸೌಲಭ್ಯ ನಿರಾಕರಿಸಿದ ಜೈಲು ಸಿಬ್ಬಂದಿ: ಮಾನವ ಹಕ್ಕು ಆಯೋಗದ ಮೊರೆ ಹೋಗಲು ದರ್ಶನ್ ಕುಟುಂಬ ನಿರ್ಧಾರ!
ಆದರೆ ಜೈಲಿನ ಹಿರಿಯ ಅಧಿಕಾರಿಗಳು ಆರೋಪವನ್ನು ನಿರಾಕರಿಸಿದ್ದಾರೆ ಮತ್ತು ಜೈಲು ನಿಯಮಗಳ ಪ್ರಕಾರ ನಟನನ್ನು ನಡೆಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಮಧ್ಯ ಪ್ರದೇಶ: ಅವಿಭಕ್ತ ಕುಟುಂಬದ 8 ಮಂದಿಯನ್ನು ಕೊಂದು ವ್ಯಕ್ತಿ ತಾನೂ ನೇಣಿಗೆ ಶರಣು!
ವ್ಯಕ್ತಿಯೊಬ್ಬ ತನ್ನ ಕುಟುಂಬದ ಎಂಟು ಸದಸ್ಯರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಬಳಿಕ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಛಿಂದ್ವಾರದಲ್ಲಿ ನಡೆದಿದೆ.

ಕೊಪ್ಪಳ: ಮತಾಂತರಕ್ಕೆ ಒತ್ತಡ, ಒಂದೇ ಕುಟುಂಬದ ಮೂವರು ಆತ್ಮಹತ್ಯೆ?
ಕೊಪ್ಪಳ ಜಿಲ್ಲೆಯ ಹೊಸಲಂಗಾಪುರ ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ಬೆಳಗ್ಗೆ ಒಂದೇ ಕುಟುಂಬದ ಮೂವರು ಶವವಾಗಿ ಪತ್ತೆಯಾಗಿದ್ದಾರೆ.

17,000 ಕೋಟಿ ರೂ. ನಿಂದ ಶೂನ್ಯಕ್ಕೆ: BYJUS CEO ರವೀಂದ್ರನ್ ಆಸ್ತಿ ಇಂದು '0'; ಆಗಿದ್ದೇನು?
ಎಡ್ಟೆಕ್ ಕಂಪನಿ ಬೈಜುಸ್‌ನ ಸಿಇಒ ಬೈಜು ರವೀಂದ್ರನ್ ತೀವ್ರ ಸಂಕಷ್ಟದಲ್ಲಿದ್ದಾರೆ. ಕಳೆದ ಒಂದು ವರ್ಷದಲ್ಲಿ ಹಲವು ಹಿನ್ನಡೆ ಅನುಭವಿಸಿದ್ದು ಅವರ ನಿವ್ವಳ ಮೌಲ್ಯ ರೂ 17,545 ಕೋಟಿ ರೂಪಾಯಿಯಿಂದ ಈಗ ಅದು ಶೂನ್ಯಕ್ಕೆ ಕುಸಿದಿದೆ.

ಬೈಜೂಸ್ ಬಿಕ್ಕಟ್ಟು: ಫೆಬ್ರವರಿ ವೇತನವೂ ವಿಳಂಬ, ಅಡಕತ್ತರಿಯಲ್ಲಿ 20 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು!
ಎಡ್ಟೆಕ್ ಕಂಪನಿ ಬೈಜೂಸ್ ನ ಆರ್ಥಿಕ ಬಿಕ್ಕಟ್ಟು ಮುಂದುವರೆದಿದ್ದು, ಫೆಬ್ರವರಿ ತಿಂಗಳ ವೇತನ ಕೂಡ ವಿಳಂಬವಾಗಲಿದೆ ಎಂದು ಹೇಳಲಾಗಿದೆ. ಅದರಂತೆ ಸಂಸ್ಥೆಯ ಸುಮಾರು 20 ಸಾವಿರ ಉದ್ಯೋಗಿಗಳು ಇದೀಗ ಅಡಕತ್ತರಿಯಲ್ಲಿ ಸಿಲುಕಿದ್ದು, ಸಂಸ್ಥೆ ಮಾತ್ರ ಹೂಡಿಕೆದಾರರನ್ನು ದೂಷಿಸುತ್ತಿದೆ.

CEO ಆಗಿ ಮುಂದುವರಿಕೆ; ನನ್ನ ವಜಾ ವದಂತಿಗಳು ಉತ್ಪ್ರೇಕ್ಷಿತ, ಅಸಮರ್ಪಕ - ಬೈಜು ರವೀಂದ್ರನ್
ಬೈಜು ರವೀಂದ್ರನ್ ಅವರು ತಾವು ಸಿಇಒ ಆಗಿ ಮುಂದುವರಿಯುತ್ತಿರುವುದಾಗಿ ಮತ್ತು ಆಡಳಿತ ಬದಲಾಗಿಲ್ಲ ಎಂದು ಶನಿವಾರ ಉದ್ಯೋಗಿಗಳಿಗೆ ಪತ್ರ ಬರೆದಿದ್ದಾರೆ.

ಉತ್ತರ ಪ್ರದೇಶ: ರಾತ್ರಿ ಊಟ ಮಾಡಿ ನಿದ್ರಿಸಲು ಹೋದ 7 ಮಂದಿಯಲ್ಲಿ ಐವರು ಬೆಳಗ್ಗೆ ಹೆಣವಾಗಿ ಪತ್ತೆ!
ರಾತ್ರಿ ಊಟ ಮಾಡಿ ಮಲಗಿದ ಐವರು ಬೆಳಗ್ಗೆ ಹೆಣವಾಗಿದ್ದಾರೆ. ಒಂದೇ ಕುಟುಂಬದ ಏಳು ಜನರ ಪೈಕಿ ನಾಲ್ವರು ಬಾಲಕರು ಸೇರಿ ಐವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ನಡೆದಿದೆ.

