BWSSB

ಬೆಂಗಳೂರು ಜಲಮಂಡಳಿ ಅವ್ಯವಸ್ಥೆಯ ತವರು: ನಗರದಲ್ಲಿ ಮಳೆಯಾದರೆ ಸಾಕು, ಮನೆಗಳಿಗೆ ನುಗ್ಗುತ್ತೆ ಚರಂಡಿ ನೀರು!
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ಲಕ್ಷ್ಯದಿಂದಾಗಿ , ಮಳೆ ಬಂದಾಗಲೆಲ್ಲಾ ದಕ್ಷಿಣ ಬೆಂಗಳೂರಿನ ರಾಮಕೃಷ್ಣನಗರ ಮತ್ತು ಇಲಿಯಾಸ್ ನಗರದಲ್ಲಿ (ಯಲಚೇನಹಳ್ಳಿ ವಾರ್ಡ್) ಕನಿಷ್ಠ ಹತ್ತಾರು ಮನೆಗಳಿಗೆ ಕೊಳಚೆ ನೀರು ನುಗ್ಗುತ್ತದೆ.

ಕಾವೇರಿ 5ನೇ ಹಂತ: ನೀರು ಸರಬರಾಜಿಗೆ ಇನ್ನೂ ಕಾಯಬೇಕು!
110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಉದ್ದೇಶಿಸಿರುವ 5,500 ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷೆಯ ಕಾವೇರಿ ನೀರು ಸರಬರಾಜು ಹಂತ 5 ಯೋಜನೆಯು ಫೆಬ್ರವರಿ ಅಥವಾ ಮಾರ್ಚ್ 2024 ರೊಳಗೆ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ.

ಅಕ್ಟೋಬರ್‌ನಲ್ಲಿ ಎತ್ತಿನಹೊಳೆ ನೀರಿಗೆ ಟಿ.ಜಿ.ಹಳ್ಳಿ ಜಲಾಶಯ ಸಿದ್ಧ: ಭೂ ಸ್ವಾಧೀನ ಪ್ರಕ್ರಿಯೆ ಸಮಸ್ಯೆಯಿಂದ ಪೈಪ್ ಲೈನ್ ವಿಳಂಬ
ಸಕಲೇಶಪುರ ತಾಲ್ಲೂಕಿನ ನೇತ್ರಾವತಿ ನದಿಯ ಉಪನದಿಯಾದ ಎತ್ತಿನಹೊಳೆಯಿಂದ ಬೆಂಗಳೂರಿಗೆ ಪ್ರತಿದಿನ 110 ಮಿಲಿಯನ್ ಲೀಟರ್ ಕುಡಿಯುವ ನೀರಿನ ಪೂರೈಕೆಯನ್ನು (MLD) ಮಾಡುವ ದೀರ್ಘಾವಧಿಯ ಯೋಜನೆ ಶೀಘ್ರದಲ್ಲಿಯೇ ಈಡೇರುವ ಭರವಸೆಯಿಲ್ಲ.

ಕಾವೇರಿ ವಿವಾದ: ತಮಿಳುನಾಡಿಗೆ ನೀರು ಬಿಡುವುದರಿಂದ ಬೆಂಗಳೂರಿನ ಮೇಲೆ ಪರಿಣಾಮವಿಲ್ಲ- ಬಿಡಬ್ಲ್ಯೂಎಸ್ಎಸ್'ಬಿ
ಈ ಬಾರಿ ಮಳೆ ಕೊರತೆಯಿಂದಾಗಿ ಈಗಾಗಲೇ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತಗೊಂಡಿದ್ದು, ಈ ನಡುವಲ್ಲೇ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡುತ್ತಿರುವುದು ನಗರ ವಾಸಿಗಳಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

ನಗರದಲ್ಲಿ ಶೀಘ್ರದಲ್ಲೇ ನೀರಿನ ದರ ಏರಿಕೆ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರು ಬಳಕೆ ಶುಲ್ಕ ಏರಿಕೆಯಾಗುವ ಎಲ್ಲಾ ಬೆಳವಣಿಗೆಗಳು ಕಂಡು ಬರುತ್ತಿವೆ.

ಇದೀಗ ಹೊಸಕೆರೆ ಕೆರೆಯಲ್ಲಿ ನೊರೆ, ಬಿಡಬ್ಲ್ಯೂಎಸ್ ಎಸ್ ಬಿ ಪೈಪ್ ಗಳತ್ತ ಬೊಟ್ಟು ಮಾಡಿದ ಬಿಬಿಎಂಪಿ!
ಈ ಹಿಂದೆ ವರ್ತೂರು ಮತ್ತು ಬೆಳ್ಳಂದೂರು ಕೆರೆಗಳಲ್ಲಿ ನೊರೆ ಕಾಣಿಸಿಕೊಂಡು ಸುದ್ದಿಯಾಗಿತ್ತು. ಇದೀಗ ಕೆಂಗೇರಿಯ ಹೊಸಕೆರೆ ಕೆರೆಯಿಂದಲೂ ನೊರೆ ವರದಿಯಾಗಿದೆ. ಭಾರೀ ಮಳೆಯಿಂದ ಚರಂಡಿಯ ಕೊಳಚೆ ನೀರು ಬಿಡಬ್ಲ್ಯೂಎಸ್ ಎಸ್ ಬಿ ಪೈಪ್ ಗಳ ಮೂಲಕ ಕೆರೆಗೆ ಬರುತ್ತಿರುವುದರಿಂದ ನೊರೆ ಉಂಟಾಗಿದೆ ಎಂದು ಬಿಬಿಎಂಪಿ ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಹೇಳಿದ್ದಾರೆ.

ಭಾಗಶಃ ಕೆಡವಿದ್ದ ಕಟ್ಟಡಕ್ಕೆ ನೀರಿನ ಬಿಲ್, ನೈರ್ಮಲ್ಯ ಶುಲ್ಕ!: ಪರಿಹಾರ ನೀಡಲು ಬಿಡಬ್ಲ್ಯುಎಸ್ಎಸ್ ಬಿಗೆ ಸೂಚನೆ
ಭಾಗಶಃ ಇದ್ದ ಕಟ್ಟಡಕ್ಕೆ ನೀರಿನ ಬಿಲ್ ಹಾಗೂ ನೈರ್ಮಲ್ಯ ಶುಲ್ಕ ವಿಧಿಸಿದ್ದ ಬಿಡಬ್ಲ್ಯುಎಸ್ಎಸ್ ಬಿ ಈಗ ಪೇಚಿಗೆ ಸಿಲುಕಿದೆ.

9 ವರ್ಷಗಳ ಬಳಿಕ ನೀರಿನ ದರ ಹೆಚ್ಚಳಕ್ಕೆ ಬಿಡಬ್ಲ್ಯೂಎಸ್ಎಸ್'ಬಿ ಮುಂದು!
ನೀರಿನ ದರ ಪರಿಷ್ಕರಿಸುವಂತೆ ಬೆಂಗಳೂರು ಜಲಮಂಡಳಿ ನೂತನವಾಗಿ ರಚನೆಗೊಳ್ಳುವ ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದ್ದು, ಸರ್ಕಾರ ಸಮ್ಮತಿ ನೀಡಿದ್ದೇ ಆದರೆ, ಜನರಿಗೆ ನೀರು ಇನ್ನಷ್ಟು ದುಬಾರಿಯಾಗಲಿದೆ.

BWSSB ನಿರ್ಲಕ್ಷ್ಯಕ್ಕೆ ಗುಂಡಿಗೆ ಬಿದ್ದು ಎರಡೂವರೆ ವರ್ಷದ ಮಗು ಸಾವು: ಎಂಜಿನಿಯರ್, ಕಾಂಟ್ರ್ಯಾಕ್ಟರ್ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB) ನಿರ್ಲಕ್ಷ್ಯಕ್ಕೆ ಎರಡೂವರೆ ವರ್ಷದ ಕಂದಮ್ಮ ಬಲಿಯಾದ ಘಟನೆ ಮಂಗಳವಾರ ನಡೆದಿದೆ.

